Tuesday, October 22, 2013

ಸಾಬಕ್ಕಿ ಖಿಚಡಿ

ಸಬ್ಬಕ್ಕಿ/ಸೀಮೆ ಅಕ್ಕಿ/ಸಾಬುದಾಣಾ (ಮರಾಠಿಯಲ್ಲಿ) ಉಸ್ಲಿ/KichDi
ಇದನ್ನೊಮ್ಮೆ ಮಾಡಿ ನೋಡಿ. US ನಲ್ಲಿರುವ ಶ್ರೀಕಾಂತ್ Bedathur ಅವರು ಈ recipe ಕೇಳಿದ್ರು.. ಅದಕ್ಕೆ

1 ಗ್ಲಾಸ್ ಸಬ್ಬಕ್ಕಿ
2 ಹಸಿ ಮೆಣಸಿನಕಾಯಿ chopped
2 ಟೀ  ಸ್ಪೂನ್ ಎಣ್ಣೆ
ಒಗ್ಗರಣೆಗೆ- ಸಾಸಿವೆ, ಕರಿಬೇವು, ಜೀರಿಗೆ, ಹಿಂಗು ಪುಡಿ (asafoetida)
1 ಟೇಬಲ್ ಸ್ಪೂನ್ -ಹುರಿದು, ಸಿಪ್ಪೆ ತೆಗೆದು, ಕುಟ್ಟಿ ದ (coarsely pounded) ಶೇಂಗಾ
ಉಪ್ಪು/ಸಕ್ಕರೆ, ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ಹುಳಿ

ಸಬ್ಬಕ್ಕಿಯನ್ನು ಒಂದು ಗಂಟೆ ನೀರಲ್ಲಿ ನೆನೆಸಿಡಿ. ಆಮೇಲೆ ನೀರು ಬಸಿದು ಹೋಗುವಂತೆ  ಜಾಲರಿ ಪಾತ್ರೆಯಲ್ಲಿ (colander)ಹಾಕಿಡಿ.
ಎಣ್ಣೆ ಬಿಸಿ ಮಾಡಿ, ಸಾಸಿವೆ, ಜೀರಿಗೆ, ಕರಿಬೇವು ಮತ್ತು ಹಿಂಗಿನ ಪುಡಿಯ ಒಗ್ಗರಣೆ ಹಾಕಿ. ಅದಕ್ಕೆ ಹಸಿಮೆಣಸಿನಕಾಯಿ ಹಾಕಿ ಸ್ವಲ್ಪ ಹುರಿಯಿರಿ. ನೀರು ಬಸಿದ ಸಬ್ಬಕ್ಕಿ, ಉಪ್ಪು, ಸಕ್ಕರೆ ಬೆರೆಸಿ ಐದು ನಿಮಿಷ ಹಾಗೇ ಮುಚ್ಚಿ ಇಡಿ. ಬಡಿಸುವ ಮುನ್ನ ಕೊತ್ತಂಬರಿ ಸೊಪ್ಪು ಮತ್ತು ಕುಟ್ಟಿದ ಶೇಂಗಾ ಹಾಕಿ. ಬೇಕಾದಲ್ಲಿ ನಿಂಬೆ ಹುಳಿ ಹಿಂಡಿ.
ಬಿಸಿ ಬಿಸಿ ಉಸ್ಲಿ , ಅದೂ ಮಳೆಗಾಲದಲ್ಲಿ, ಟೀ ಜತೆ.........
* ಮಹಾರಾಷ್ಟ್ರದಲ್ಲಿ ಸಬ್ಬಕ್ಕಿಯನ್ನು ಉಪವಾಸದಂದು ಬಳಸುತ್ತಾರೆ. its made from tapioca. tapioca ಗೆ ಕನ್ನಡದಲ್ಲಿ ಏನನ್ನುತ್ತಾರೆ?? ಗೊತ್ತಿದ್ದವರು ತಿಳಿಸಿ ಪ್ಲೀssssಸ್.
ಸಬ್ಬಕ್ಕಿ ಪಾಯಸ, ವಡೆ. ದೋಸೆ /ರೊಟ್ಟಿ ಕೂಡ ಮಾಡಬಹುದು

ಪುರುಸೊತ್ತು ಇದ್ರೆ ಇದನ್ನೂ ಓದಿ

1 comment:

ವಿ.ರಾ.ಹೆ. said...

topicaಗೆ ಕನ್ನಡದಲ್ಲಿ 'ಮರಗೆಣಸು' ಅಂತಾರೆ :)