Friday, January 3, 2014

ಮೈಕ್ರೋವೇವ್ ನಲ್ಲಿ ಝಟ್ ಪಟ್ ಚಟ್ನಿಪುಡಿಕೊಬ್ಬರಿಯನ್ನು ತುರಿದಿಟ್ಟುಕೊಳ್ಳಿ.ತಾಜಾ  ಕರಿಬೇವನ್ನು(10ಗರಿಗಳು) ತೊಳೆದಿಡಿ. ಎರಡು ಟೀ ಸ್ಪೂನ್ ಕಡ್ಲೆ ಬೇಳೆ, ಎರಡು ಟೀ ಸ್ಪೂನ್ ಉದ್ದಿನಬೆಳೆ, ಚಿಕ್ಕ ತುಂಡು ಹಿಂಗು, 8-10(ನಿಮಗೆಷ್ಟು ಖಾರ ಬೇಕೋ ಅಷ್ಟು)ಬ್ಯಾಡಗಿ ಮೆಣಸಿನಕಾಯಿ ಇವೆಲ್ಲವನ್ನು ಮೈಕ್ರೋವೇವ್ ನ quick/star menu ನಲ್ಲಿ 30 ಸೆಕೆಂಡ್ ಬಿಸಿ ಮಾಡಿ. ಕೈಯಾಡಿಸಿ ಪುನ: 30 ಸೆಕೆಂಡ್ ಬಿಸಿ ಮಾಡಿ ಪಕ್ಕಕ್ಕಿಡಿ. ಈಗ ತೊಳೆದಿಟ್ಟ ಕರಿಬೇವಿನ ಎಲೆಗಳನ್ನು ಗರಿಯಿಂದ ಬೇರ್ಪಡಿಸಿ ಗರಿಗರಿಯಾಗುವಷ್ಟು ಬಿಸಿ ಮಾಡಿ. ಕೊನೆಗೆ ತುರಿದಿಟ್ಟ ಕೊಬ್ಬರಿಯನ್ನುಕಂದುಬಣ್ಣ ಬರುವವರೆಗೆ ಮೈಕ್ರೋವೇವಿಸಿ  2 ನಿಮಿಷ ಸಾಕಾಗುತ್ತದೆ. ಹೇಗೂ ಚಳಿಗಾಲ ಹುರಿದಿಟ್ಟ ದಿನಸುಗಳು ಬೇಗನೆ ತಣ್ಣಗಾಗುತ್ತೆ. ಉಪ್ಪು, ಚಿಕ್ಕ ತುಂಡು ಹುಣಸೆ ಹುಳಿ , ಚಿಟಿಕೆ ಸಕ್ಕರೆ ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿ. ಮಿಕ್ಸಿ ಸ್ವಲ್ಪ ಸ್ವಲ್ಪವೇ ರನ್ ಮಾಡಿ, ಸ್ಪೂನ್ ನಿಂದ ಕೆದಕುತ್ತ ಇರಿ. ತಣ್ಣಗಾದ ಮೇಲೆ ಬಾಟಲ್ ನಲ್ಲಿ ತುಂಬಿಡಿ.
೧.ನಿಹಾ ಲಂಚ್ ಬಾಕ್ಸ್ ಗೆ ಬ್ರೆಡ್ ಗೆ ಬೆಣ್ಣೆ ಹಚ್ಚಿ ಅದರ ಮೇಲೆ ಈ ಚಟ್ನಿ ಪುಡಿ ಉದುರಿಸಿ ಕೊಟ್ಟಿದ್ದೆ.
೨.ನೀರು ದೋಸೆಗೆ ಒಳ್ಳೆಯ ಕಾಂಬಿನೇಶನ್. ರಾಯರು ಈ ಚಟ್ನಿ ಪುಡಿ ಮೇಲೆ ತೆಂಗಿನ ಎಣ್ಣೆ ಸುರುವಿ ಎಂಜಾಯಿಸುತ್ತಾರೆ. :-)
೩. ಚಪಾತಿಯೊಳಗೆ ಚಟ್ನಿಪುಡಿ ಸ್ಟಫ್ ಮಾಡಿ ಲಟ್ಟಿಸಿ ಹೊಸ ರುಚಿ ಮಾಡಿ. ನಿಹಾಳ ಫ್ರೆಂಡ್ಸ್ ಗೆ ಇದು ತುಂಬಾ ಇಷ್ಟ.
೪.ಯು ಎಸ್ ನಲ್ಲಿರುವ ತಂಗಿ ಮಕ್ಕಳಿಗೆ ಬಿಸಿ ಚಪಾತಿಗೆ vegetable fat/margarine(ಪಾಪ ಅವರಿಗೆ lactose intolerance) ಹಚ್ಚಿ ಅದರ ಮೇಲೆ ಚಟ್ನಿ ಪುಡಿ ಉದುರಿಸಿ ರೋಲ್ ಮಾಡಿ ಕೊಟ್ಟರೆ ತುಂಬ ಇಷ್ಟಪಟ್ಟು ತಿನ್ನುತ್ತಾರೆ
೫.ನಾನು ಪೊಂಗಲ್ ಮೇಲೆ, ಉಪ್ಪಿಟ್ಟಿನ ಮೇಲೆ ಚಟ್ನಿ ಪುಡಿ ಹಾಕಿ ಅದರ ಮೇಲೆ ಮೊಸರು ಸುರಿದು ತಿನ್ನಲು ಇಷ್ಟಪಡುತ್ತೇನೆ.
ಚಟ್ನಿ ಪುಡಿ ಒಂದು ಬಳಸುವ ದಾರಿ ಎಷ್ಟೊಂದು??
ಎಂಜಾಯ್
:-)

No comments: