Wednesday, February 5, 2014

ಭಡಂಗ್ - ಈ ವೀಕೆಂಡ್ ನಲ್ಲಿ ಮಾಡಿ

ನಮ್ಮ ರಾಯರ ಫೇವರಿಟ್ ಸ್ನ್ಯಾಕ್. ರಾಯರು ತೀರ್ಥಹಳ್ಳಿಯವರು. ಆದರೆ ಕೆಲ ವರ್ಷ ಧಾರವಾಡದಲ್ಲಿದ್ದರಿಂದ ಅವರಿಗೆ ಜೋಳದ ರೊಟ್ಟಿ, ಭಡಂಗ್, ಮಿರ್ಚಿ ಬಜ್ಜಿ ಮುಂತಾದರೆ ರುಚಿ ಹತ್ತಿದೆ. ಭಡಂಗ್  ಸಂಜೆಯ ತಿಂಡಿ, ರಜೆಯ ತಿಂಡಿ ಮಾತ್ರ ಅಲ್ಲ, ಟ್ರಾವೆಲ್ ಮಾಡುವಾಗಲೂ convenient. ಮಕ್ಕಳಿಗೂ ಇಷ್ಟ ಆಗುತ್ತೆ. ತಯಾರಿಸುವುದು ಸುಲಭ. ಕುಡಿಯುವ ನೀರು ಮಾತ್ರ ಮರೆಯಬೇಡಿ. :-) ದೊಡ್ಡ ಡಬ್ಬಿಯಲ್ಲಿ ಮಾಡಿಡಿ. ನೀವು ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಅದು ಖಾಲಿ ಆಗುತ್ತೆ. ಸಿನಿಮಾ ನೋಡುತ್ತಾ, ಪುಸ್ತಕ ಓದುತ್ತ ತಿನ್ನಬಹುದು.
ಬೇಕಾಗುವ ಸಾಮಗ್ರಿ:
ಚುರುಮುರಿ( also known as ಮಂಡಕ್ಕಿ, ಮುರಮುರೆ-ಕೊಂಕಣಿಯಲ್ಲಿ ಚಾರ್ಮ್ಬುರೋ) ), ಶೆಂಗಾ, ಕರಿಬೇವು, ಬೆಳ್ಳುಳ್ಳಿ, ಉಪ್ಪು, ಸಕ್ಕರೆ ಪುಡಿ, ಕೆಂಪುಮೆಣಸಿನ ಪುಡಿ.
ಎಣ್ಣೆ ಬಿಸಿ ಮಾಡಿ.
ಅದಕ್ಕೆ ಶೆಂಗಾ ಹಾಕಿ ಕೆಂಪಗಾಗುವ ತನಕ ಹುರಿಯಿರಿ. ಕರಿಬೇವು ಹಾಕಿ. ನಂತರ ಬೆಳ್ಳುಳ್ಳಿ ಹಾಕಿ ಘಂ ಅನ್ನುವ ತನಕ ಹುರಿಯಿರಿ. ನಂತರ ಉಪ್ಪು ಸಕ್ಕರೆ ಮೆಣಸಿನ ಪುಡಿ ಹಾಕಿ ಒಂದು ನಿಮಿಷ ಕೈಯಾಡಿಸಿ ಇದಕ್ಕೆ ಚುರುಮುರಿ ಬೆರೆಸಿ.
ಅಷ್ಟೆ ಭಡಂಗ್ ತೈಯಾರ್. ಚಹಾ ಒಟ್ಟಿಗೆ ಸರ್ವ್ ಮಾಡಿ.



ಭಡಂಗ್
:-)

1 comment:

Anonymous said...

ಖಂಡಿತ ರುಚಿಸುತ್ತೆ.ಹೆಸರೇ ಕೇಳಲು ಖುಷಿಯಾಗಿದೆ.
ಗೀತಾ ಪೈ