Thursday, April 17, 2014

ಒಂದು ವಿಚಿತ್ರ ಕಾಯಿಲೆ ಮತ್ತು ಅಪ್ಪ/ಅಪ್ಪಂ/ಪಡ್ಡು/ಗುಳಿಯಪ್ಪ

ನಮ್ಮ ಪರಿಚಯದವರೊಬ್ಬರಿದ್ದಾರೆ.  ಭಾರತದವರೇ. ಆದರೆ ಕೆಲವು ವರ್ಷಗಳು ಹೊರ ದೇಶದಲ್ಲಿದ್ದು ಬಂದವರು. ಭಾರತಕ್ಕೆ ತೆರಳಿದ ನಂತರ ಅವರಿಗೆ ಆವಾಗಾವಾಗ ಮೈ ಒಳಗೆ ತುರಿಕೆ- ಒಳಗೆ ಅಂದ್ರೆ ದೇಹದ ಒಳಗೆ such that he cannot pinpoint where to scratch, ನಾಲಿಗೆಗೆ ಹುಣ್ಣು, ವಾಂತಿ ಮಾಡಿದರೆ ಅದರಲ್ಲಿ ರಕ್ತದ ಕಣ. ಹಲವಾರು ಪರೀಕ್ಷೆಗೆ ಒಡ್ಡಿದ ನಂತರ ಕಂಡು ಬಂದಿದ್ದು ಅವರಿಗಿದ್ದದ್ದು ಅನ್ನದ (Rice starch) ಎಲರ್ಜಿ. ಎಲ್ಲಾದರೂ ಕೇಳಿದಿರಾ? ನಾನು ಲ್ಯಾಕ್ಟೇಸ್ intolerance, ಕೆಲವು nuts, ಅಪರೂಪಕ್ಕೆ ಕೆಲವು ಹಣ್ಣುಗಳನ್ನು ತಿಂದರೆ ಎಲರ್ಜಿ ಆಗುವುದು ಕೇಳಿದ್ದೆ/ನೋಡಿದ್ದೇನೆ. ಇದು ನನಗೆ ಆಶ್ಚರ್ಯ ಏನಿಸಿದ್ದು also ಯಾಕಂದರೆ ಅವರು ಬಂಗಾಲಿಗಳು. ಅನ್ನ ಅಂದರೆ ಪ್ರಾಣ. 

ದಿನಾ ರವೆ ಉಪ್ಪಿಟ್ಟು, ರವೆ ಇಡ್ಲಿ, ಪೂರಿ, ತಿಂದು ಬೇಜಾರಾಗಿರಬೇಕು ಅವರಿಗೆ. ಮಧ್ಯಾಹ್ನ ಅವರು ರಾಗಿ ಮುದ್ದೆ ತಿನ್ನುತ್ತಾರೆ ಮಾತ್ರವಲ್ಲ ಹಿ ಎಂಜಾಯ್ಸ್ ಇಟ್. ಹಾಗೆ ಒಂದು ದಿನ ನಮ್ಮನೆಗೆ ಅವರಿಗೆ ಬ್ರೇಕ್ಫಾಸ್ಟ್ ಗೆ ಕರೆದಿದ್ದೆವು. ಹೊಸದಾಗಿ ಏನಾದರೂ ಮಾಡಿ ಬಡಿಸಬೇಕೆಂದು ನನಗೆ ಆಸೆ ಏನೋ ಆಯಿತು, ಆದರೆ ನನಗೆ ಗೊತ್ತಾದದ್ದು ಸುಮಾರು ರಾತ್ರಿ ಲೇಟಾಗಿ. ಆಗ ಥಟ್ ಅಂತ ಹೊಳೆದದ್ದು ಈ ತಿಂಡಿ ಅಪ್ಪ (ಕೊಂಕಣಿಯಲ್ಲಿ)/ಪಡ್ಡು/ಗುಳಿಯಪ್ಪ etc (ಕನ್ನಡದಲ್ಲಿ)

ಒಂದು ಗ್ಲಾಸ್ ಉದ್ದು, ಒಂದುವರೆ ಗ್ಲಾಸ್ ಹೆಸರು ಬೇಳೆ. ಒಂದೆರಡು ತಾಸು ನೆನೆದರೆ ಸಾಕು.ರಾತ್ರಿ ನೆನೆಹಾಕಿದರೂ ನೋ ಪ್ರಾಬ್ಲಮ್. ಬೆಳಿಗ್ಗೆ ಚೆನ್ನಾಗಿ ತೊಳೆದು ಗ್ರೈಂಡರ್ ನಲ್ಲಿ ಹಾಕಿ ವಿಥ್ ಹಸಿಮೆಣಸಿನಕಾಯಿ ಮತ್ತು ಶುಂಠಿ. ಹಿಟ್ಟು ಒಳ್ಳೆ ಬುರುಗು ಬುರುಗು ಆಗುತ್ತೆ. 

ಅತೀ ಕಡಿಮೆ ನೀರು ಬೆರೆಸಿ ಇಲ್ಲದಿದ್ದಲ್ಲಿ ಅಪ್ಪ ಕಾವಲಿಯಿಂದ ಜಪ್ಪಯ್ಯ ಅಂದ್ರೂ ಹೊರಗೆ ಬರಲ್ಲ :-). ಹಿಟ್ಟನ್ನು ಗ್ರ್ರೈಂಡರ್ ನಿಂದ ತೆಗೆದು ಪಾತ್ರೆಗೆ ಹಾಕಿಕೊಳ್ಳಿ. ಇದಕ್ಕೆರುಚಿಗೆ ತಕ್ಕಷ್ಟು ಉಪ್ಪು, ಸಣ್ಣಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಬೆರೆಸಿ. ಅಪ್ಪ ಕಾವಲಿಯಲ್ಲಿ ಎಣ್ಣೆ ಹಾಕಿ ಬಿಸಿ ಬಿಸಿ ಬಿಸಿ ಅಪ್ಪ/ಪಡ್ಡು ಮಾಡಿ ತಿನ್ನಿ ವಿತ್ ಹಿಂಗಿನ ಚಟ್ನಿ ಮತ್ತು ಫ್ರೆಶ್ ಬೆಣ್ಣೆ. ಒಳ್ಳೆ ಬಂಗಾರ ಬಣ್ಣದ ಈ ಅಪ್ಪ/ಪಡ್ಡು ಉದ್ದಿನವಡೆ ತರ ಗರಿಗರಿಯಾಗಿರುತ್ತೆ. ನಮ್ಮ ಮನೆಯಲ್ಲಿ ಎಲ್ಲರ ಫೇವರಿಟ್ 
:-)

2 comments:

Radhika said...

dOse athvaa iDli hiTTinda maaDteevi. baree bELe version try maaDbEku :-)

nenapina sanchy inda said...

Radhika!
thank you for the comment.
idannu try maaDi. ellarigoo isTa aagute. innondu andre idu fermented hiTTu alla. it gives a different taste.
idE hittige saNNakke kattarisida nIruLLi, tomato bereisi uttappa kooDa maaDabahudu
:-)
ms