Tuesday, April 8, 2014

Stuffed Capsicum: ಸ್ಟಫ್ಡ್ ದೊಣ್ಣಮೆಣಸು/ದಪ್ಪ ಮೆಣಸು/ಕ್ಯಾಪ್ಸಿಕಮ್

ಈ ದಪ್ಪಮೆಣಸನ್ನು ರಾಯರು ದಾರವಾಡದಿಂದ ತರುತ್ತಾರೆ.

ಸ್ತಫ್ಡ್ ಕ್ಯಾಪ್ಸಿಕಮ್ ಗೆ ಬೇಕಾಗುವ ಸಾಮಾನು:

ತೆಂಗಿನಕಾಯಿ ತುರಿ, ಹುರಿದ ಕೆಂಪು ಮೆಣಸು, ಹುಣಸೆಹುಳಿ, ೧/೨ ಟೀ ಸ್ಪೂನ್ ಉದ್ದಿನಬೇಳೆ, ೧ ಟೀ ಸ್ಪೂನ್ ಕೊತ್ತಂಬರಿ, ಸ್ವಲ್ಪ ನೀರುಳ್ಳಿ ಕೊಚ್ಚಲು, ಉಪ್ಪು, ಬೆಲ್ಲ, ಎಣ್ಣೆ.

ಮೊದಲಿಗೆ ಉದ್ದಿನಬೇಳೆ ಮತ್ತು ಕೊತ್ತಂಬರಿಯನ್ನು ೧ ಟೀ ಸ್ಪೂನ್ ಎಣ್ಣೆಯಲ್ಲಿ ಕ್ರಮವಾಗಿ ಹಾಕಿ ಸ್ವಲ್ಪ ಕೆಂಪನೆ ಬಣ್ಣ ಬರುವ ತನಕ ಹುರಿಯಿರಿ. ತಣ್ಣಗಾದ ಮೇಲೆ ಉಳಿದ ಸಾಮಾನಿನ ಜತೆ ಬೇಕಾದಷ್ಟೆ ನೀರು ಹಾಕಿ ತರಿಯಾಗಿ ರುಬ್ಬಿ. ಇದಕ್ಕೆ ಸಣ್ಣಕ್ಕೆ ಕತ್ತರಿಸಿದ ನೀರುಳ್ಳಿ ಬೆರೆಸಿ. ಉಪ್ಪು ಚೂರು ಬೆಲ್ಲ ಹಾಕಿ ಸರಿಯಾಗಿ ಮಿಕ್ಸ್ ಮಾಡಿಡಿ. 

ದಪ್ಪ ಮೆಣಸನ್ನು ಈ ರೀತಿ ಕಟ್ ಮಾಡಿ.ದಂಟಿನ ಸ್ವಲ್ಪ ಕೆಳಗೆ ಉರುಟಾಗಿ ಕಟ್ ಮಾಡಿ ಮುಚ್ಚಳದ ತರಹ. ಒಳಗಡೆ ತುಂಬಾ ಬೀಜ ಇದ್ದರೆ ಅದನ್ನು ಸ್ಪೂನ್ ನಿಂದ ಕೆರೆದು ತೆಗೆದು ಬಿಡಿ. ಧಾರವಾಡದ ಈ ಮೆಣಸು ತುಂಬಾ ಖಾರವಾಗಿರುತ್ತೆ. 


ಆಮೇಲೆ ಸ್ಟಫಿಂಗ್ ಅನ್ನು ತುಂಬಿ. ಮೈಕ್ರ‍ೊವೇವ್ ಸೇಫ್ ಪಾತ್ರೆಯ ತಳದಲ್ಲಿ ಸ್ವಲ್ಪ ಎಣ್ಣೆ ಹರಡಿ. ಇದರ ಮೇಲೆ ಸ್ತಫ್ ಮಾಡಿದ ಕ್ಯಾಪ್ಸಿಕಮ್ ನೀಟಾಗಿ ಚಿತ್ರದಲ್ಲಿರುವಂತೆ ಜೋಡಿಸಿ.




ಸ್ವಲ್ಪ ನೀರು ಚಿಮುಕಿಸಿ.  ಮುಚ್ಚಳ ಹಾಕಿ quick start menu ನಲ್ಲಿ ಹತ್ತು ನಿಮಿಷ ಬೇಯಿಸಿ


ಅನ್ನ ಸಾರು, ಅಥವಾ ಚಪಾತಿ ಜತೆ ಚೆನ್ನಾಗಿರುತ್ತೆ.

:-)

1 comment:

prabhamani nagaraja said...

ಮಾಲತಿಯವರೆ, ನಿಮ್ಮ ಈ ಬ್ಲಾಗ್ ಬಹಳ ಉಪಯುಕ್ತವಾಗಿದೆ. ಸು೦ದರ ಚಿತ್ರಗಳೊ೦ದಿಗೆ ರುಚಿಕರವಾಗಿದೆ! ಸಮಯವಕಾಶವಾದ೦ತೆ ಪ್ರಯತ್ನಿಸುತ್ತೇನೆ. ಧನ್ಯವಾದಗಳು :)