Tuesday, November 11, 2014

ಫ್ರುಟ್ ಜಿಲೇಬಿ

ಸುಲಭದಲ್ಲಿ ತಯಾರು ಮಾಡಲು: ಒಂದು ಪ್ಯಾಕೆಟ್ MTR ಜಿಲೇಬಿ ಮಿಕ್ಸ್. ಸೇಬು, ಅನಾನಸು, ಸಪ್ಪರ್ಚನ್, ಪಪಯಾ ಮುಂತಾದ ಹಣ್ಣು, ನಿಮಗೆ ಬೇಕಾದ ಆಕಾರದಲ್ಲಿ ಹಣ್ಣುಗಳನ್ನು ಕಟ್ ಮಾಡಿ.
ಪ್ಯಾಕೆಟ್ ಮೇಲಿನ instructions follow ಮಾಡಿ ಜಿಲೇಬಿಯ ಹಿಟ್ಟು ತಯಾರು ಮಾಡಿ. ಹಣ್ಣುಗಳನ್ನು ಮುಳುಗಿಸಿ ಎಣ್ಣೆಯಲ್ಲಿ ಕರಿಯಿರಿ.
ಸಕ್ಕರೆಯ ಒಂದೆಳೆ ಪಾಕ ಮಾಡಿ ಅದಕ್ಕೆ ಲಿಂಬೆ ಹಣ್ಣಿನ ರಸ ಹಿಂಡಿ. ಕರಿದ ಜಿಲೇಬಿಯನ್ನು ಇದರಲ್ಲಿ ಎರಡು ನಿಮಿಷ ಇಟ್ಟು ಬೇರೆ ಪಾತ್ರೆಗೆ ಹಾಕಿ.
ಹಾಲಿನ ಬಾಸುಂದಿ ಜತೆ ಇದನ್ನು ಸರ್ವ ಮಾಡಿ.


ಜಿಲೇಬಿಯ batter
ಮೈದಾ - 2 ಬಟ್ಟಲು
ದಪ್ಪ ಮೊಸರು - 2 ಬಟ್ಟಲು
(ಬೇಕಿದ್ದರೆ corn flour/ ಆರಾರೂಟ್ ಪೌಡರ್ )
ಹಿಂದಿನ ರಾತ್ರಿ ಮೈದಾಗೆ ಒಂದು ಬಟ್ಟಲು ಮೊಸರು ಸೇರಿಸಿ ಗಂಟುಗಳು ಇರದಂತೆ ಚೆನ್ನಾಗಿ ಮಿಕ್ಸ್ ಮಾಡಿಡಿ . ಮರುದಿನ ಉಳಿದ ಮೊಸರು ಬೆರೆಸಿ . ದೋಸೆ ಹಿಟ್ಟಿಗಿಂದ ಸ್ವಲ್ಪ ದಪ್ಪಗಿರಲಿ. ಬೇಕಾದರೆ ಮಾತ್ರ ನೀರು ಬೆರೆಸಿ. ಸ್ವಲ್ಪ ಕಾರ್ನ್ಫ್ಲೋರ್ ಅಥವಾ ಆರಾರೂಟ್ ಪೌಡರ್ ಮಿಕ್ಸ್ ಮಾಡಿ.
ಸಕ್ಕರೆ ಪಾಕಕ್ಕೆ: ಎರಡು ಬಟ್ಟಲು ಸಕ್ಕರೆಗೆ ಎರಡು ಬಟ್ಟಲು ನೀರು . ಒಂದೆಳೆ ಪಾಕ.


No comments: