Friday, December 19, 2014

ಕ್ರಿಸ್ಪಿ ಬೆಂಡೆಕಾಯಿ

ಬೆಂಡೆಕಾಯಿಯನ್ನು ತೊಳೆದು, ಒರೆಸಿ, ಮೂರು ಭಾಗಗಳಾಗಿ ಕಟ್ ಮಾಡಿ. ಸ್ವಲ್ಪ ಮಜ್ಜಿಗೆಗೆ ಉಪ್ಪು, ಕಾಳುಮೆಣಸಿನ ಪುಡಿ, ಕೆಂಪು ಮೆಣಸಿನ ಪುಡಿ,  ಹಿಂಗು ಹಾಕಿ. ಇದರಲ್ಲಿ ಬೆಂಡೆಕಾಯಿಗಳನ್ನು ಮ್ಯಾರಿನೇಡ್ ಮಾಡಿ. ಅರ್ಧ ಗಂಟೆ ಪಕ್ಕಕ್ಕಿಡಿ. ಊಟಕ್ಕೆ ಅರ್ಧ ಗಂಟೆ ಮೊದಲು ಇದನ್ನು ತಯಾರಿಸಿದರೆ ಆಯ್ತು. ಸ್ವಲ್ಪ ಓಟ್ಸ್ ಅನ್ನು ಮಿಕ್ಸಿಯಲ್ಲಿ ಹಾಕಿ ರವೆ ತರಹದ ಪುಡಿ ಮಾಡಿ. ಇದಕ್ಕೆ ಸ್ವಲ್ಪ ಮೈದಾ ಬೆರೆಸಿ. ಮ್ಯಾರಿನೇಡ್ ಮಾಡಿಡ ಬೆಂಡೆ ಗಳನ್ನು ಈ ಮಿಕ್ಸ್ ನಲ್ಲಿ ಹೊರಳಿಸಿ ಕಾದ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ. ನನ್ನ ಮಗಳು ಮಾಲವಿಕಾಳ ರೆಸಿಪಿ. ನಮಗೆಲ್ಲ ತುಂಬಾ ಇಷ್ಟ ಆಯ್ತು. ಈಗ ನಿಮ್ಮ ಸರದಿ.

ಎಂಜಾಯ್
:-)

Monday, December 15, 2014

ಚಳಿಗಾಲಕ್ಕೆ ಒಂದು wholesome ಸೂಪ್

ಬೇಕಾಗುವುದು : ಸಿಹಿಕುಂಬಳಕಾಯಿ, ಟೊಮ್ಯಾಟೋ, ಆಲೂಗಡ್ಡೆ, ಸಣ್ಣ ನೀರುಳ್ಳಿ, ಸ್ವಲ್ಪ ಬೆಣ್ಣೆ, ಕಾಳು ಮೆಣಸು, ಅನ್ನ ಬಸಿದ ನೀರು(ಗಂಜಿ)
(ನಮ್ಮ ಮನೆಯಲ್ಲಿ ನಾನು ಬಸಿದು ಅನ್ನ ಮಾಡುವುದು. ನೀವು ನೀರು ಬಳಸಬಹುದು)
ತರಕಾರಿ ಎಲ್ಲವನ್ನೂ ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ. ನೀರುಳ್ಳಿ ಸಹ

ಒಂದು ಚಮಚ ಬೆಣ್ಣೆಯಲ್ಲಿ ಮೊದಲು ನೀರುಳ್ಳಿಯನ್ನು ಕೆಂಪಗೆ ಹುರಿದುಕೊಳ್ಳಿ. ಇದಕ್ಕೆ ಸಿಹಿಕುಂಬಳ, ಟೊಮ್ಯಾಟೊ ಮತ್ತು ಆಲೂಗಡ್ಡೆ ಹಾಕಿ ಕೈಯಾಡಿಸಿ. ಅನ್ನ ಬಸಿದ ನೀರು ಸೇರಿಸಿ ಬೇಯಿಸಿ. ತಣ್ಣಗಾದ ಮೇಲೆ ಬ್ಲೆಂಡರ್ ನಲ್ಲಿ ಹಾಕಿ ನುಣ್ಣಗೆ ರುಬ್ಬಿ. ಉಪ್ಪು, ಚಿಟಿಕೆ ಸಕ್ಕರೆ ಬೆರೆಸಿ. ನಿಮಗೆ ಎಷ್ಟು ಬೇಕು ಅಷ್ಟು ಗಂಜಿ ಸೇರಿಸಿ ತೆಳ್ಳಗೆ ಮಾಡಿ. ಮೇಲಿನಿಂದ ಕಾಳುಮೆಣಸಿನ ಪುಡಿ ಉದುರಿಸಿ. ಆಲೂ ಗಡ್ಡೆ ಇರುವುದರಿಂದ ಹೊಟ್ಟೆ ಫುಲ್ ಆಗತ್ತೆ. ಮತ್ತು ಚಳಿಗಾಳದಲ್ಲಿ ನೀರಿನ intake ಕಡಿಮೆಯಿರುತ್ತೆ. ಮಕ್ಕಳಿಗೆ ಎಲ್ಲ liquid form ನಲ್ಲಿ ಈ ಹೆಲ್ತಿ ಸೂಪ್ ಒಳಸೇರುತ್ತೆ. ಬೇಕಾದರೆ ಹಾಲಿನ ಕ್ರೀಮ್ ಸೇರಿಸಿ. 
(ಗಂಜಿಗೆ ತುಪ್ಪ ಮತ್ತು ಉಪ್ಪು ಸೇರಿಸಿ ಕುಡಿಯುವುದೂ ಒಂದು ಒಳ್ಳೆಯ ಉಪಾಯ. ಬೇಕಿದ್ದಲ್ಲಿ ಸ್ವಲ್ಪ ಕಾಳುಮೆಣ್ಸಿನ ಪುಡಿ ಸೇರಿಸಿದ್ರೆ, ಶೀತ ಕೆಮ್ಮು ಇರಲ್ಲ. ಚಳಿಗಾಲದಲ್ಲಿ ಕೆಲವರಿಗೆ constipation ಆಗತ್ತೆ. ಆಗ ಈ ಗಂಜಿ ಸಖತ್ ಒಳ್ಳೆಯ ಉಪಾಯ.


ಎಂಜಾಯ್
:-)

Wednesday, December 3, 2014

ಮಿಕ್ಸ್ ವೆಜಿಟೇಬಲ್ ಸ್ಟರ್ ಫ್ರೈ

ಬೇಕಾಗುವ ತರಕಾರಿಗಳು : ಕ್ಯಾಬೇಜ್, ಬೀನ್ಸ್, ದೊಣ್ಣ (ದಪ್ಪ) ಮೆಣಸಿನಕಾಯಿ, ಕ್ಯಾರೆಟ್ 
ಒಗ್ಗರಣೆಗೆ : ಎಣ್ಣೆ, ಸಾಸಿವೆ, ಜೀರಿಗೆ, ಉದ್ದಿನಬೆಳೆ, ಕೆಂಪು ಮೆಣಸು 

ತರಕಾರಿಗಳನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿ ಹೆಚ್ಚಿಡಿ. 
ನಾನ್ ಸ್ಟಿಕ್ ಬಾಣಲೆಯಲ್ಲಿ ಸ್ವಲ್ಪ ಹೆಚ್ಚೇ ಎಣ್ಣೆ ಒಗ್ಗರಣೆಗೆ ಇಡಿ. ಎಣ್ಣೆ ಬಿಸಿಯಾದೊಡನೆ ಕ್ರಮಾವಾಗಿ ಉದ್ದಿನ ಬೇಳೆ, ಸಾಸಿವೆ, ಜೀರಿಗೆ, ಕೆಂಪು ಮೆಣಸು ಹಾಕಿ. ಮೊದಲಿಗೆ ದೊಣ್ಣ ಮೆಣಸಿನಕಾಯಿ ಹಾಕಿ ಕೈಯಾಡಿಸಿ, ನಂತರ ಉಳಿದ ತರಕಾರಿ, ಉಪ್ಪು ಹಾಕಿ ದೊಡ್ಡ ಉರಿಯಲ್ಲಿ  ಇಟ್ಟು ಕೈಯಾಡಿಸ್ತಾ ಇರಿ. ನಂತರ ಉರಿ ಸಣ್ಣ ಮಾಡಿ ಬಾವಡಿಯಿಂದ  ಮುಚ್ಚಿಐದು ನಿಮಿಷ ಬೇಯಿಸಿ. ತರಕಾರಿ ಕ್ರಿಸ್ಪ್ ಆಗಿರಬೇಕು. ನೀರು ಹಾಕ  ಬೇಡಿ. 

ಚಪಾತಿ ಮೊಸರನ್ನ್ನಕ್ಕೆ ಒಳ್ಳೆಯ ಸಾಥ್. ಬಣ್ಣ ಬಣ್ಣವಾಗಿರುವುದರಿಂದ ಮಕ್ಕಳಿಗೂ ಇದು ಇಷ್ಟ ಆಗುತ್ತೆ. 




ಮಿಶ್ರ ತರಕಾರಿ ಪಲ್ಯ ರೆಡಿ