Monday, March 24, 2014

ಮೈಕ್ರೋವೇವ್ ನಲ್ಲಿ ಈ ಬಾರಿ ಅಗಸೆ ಚಟ್ನಿ ಪುಡಿ

ಅಗಸೆ ಮೆಮರಿ ಪವರ್ ಗೆ ಒಳ್ಳೆದು ಅಂತ ಹೇಳುತ್ತಾರೆ ಹಾಗೂ ಪೈಲ್ಸ್ ಗೆ ಒಳ್ಳೆಯ ಔಷಧಿ ಕೂಡ. ನಾನಂತು ಅಗಸೆ ಚಟ್ನಿ ಪುಡಿಯ ಟೇಸ್ಟ್ ಇಷ್ಟ ಅಂತ ತಿನ್ನುತ್ತೇನೆ. ಚಪಾತಿ ಜೋಳದ, ಸಜ್ಜೆ ರೊಟ್ಟಿ ಜತೆ ಒಳ್ಳೆಯ ಸಾಥ್. ನಮ್ಮ ರಾಯರಿಗೆ ಕಟಕ್/ಕಡಕ್ ರೊಟ್ಟಿ ಜತೆ ಈ ಚಟ್ನಿ ಪುಡಿ ಇಷ್ಟ. ಅದಕ್ಕೊಂದಿಷ್ಟು ದಪ್ಪ ಮೊಸರು, ಸೈಡ್ ಗೆ ಸಲಾಡ್ ನೀರುಳ್ಳಿ ಇದ್ದರೆ ಆಯ್ತು. ಅವರು ಆಫಿಸ್ ನಲ್ಲಿ ಕಟಕ್ ರೊಟ್ಟಿ ತಂದಿಟ್ಟುಕೋತಾರೆ. ಮನೆಯಿಂದ ಡಬ್ಬಿಯಲ್ಲಿ ಪಲ್ಲ್ಯ, ಚಟ್ನಿ ಪುಡಿ ಹಾಕಿಕೊಂಡು ಹೋಗಿ ಅಲ್ಲಿ ಉಣ್ಣುತ್ತಾರೆ :-) :-)
ನನ್ನ ಲಕ್. ನನಗೆ exhibition ನಲ್ಲಿ ಅರಳಿಸಿದ (pre-puffed) ಅಗಸೆ ಸಿಕ್ಕಿದೆ.ಒಂದು ಹಿಡಿ ಅಗಸೆ ಜತೆ ನಾನು 8-10 ಬೆಳ್ಳುಳ್ಳಿ, ಸ್ವಲ್ಪ ಬ್ಯಾಡಗಿ ಮೆಣಸಿನ ಪುಡಿ, ಉಪ್ಪು, ಚಿಟಿಕೆ ಸಕ್ಕರೆ,ಚಿಟಿಕೆ ಅರಸಿನ ಪುಡಿ ಒಂದು ಹನಿ ಶೆಂಗಾ ಎಣ್ಣೆ, ಚೂರೇ ಚೂರು ಹುಣಸೆ ಹುಳಿ ,ಇವನ್ನೆಲ್ಲ ಚೆನ್ನಾಗಿ ಮಿಕ್ಸ್ ಮಾಡಿ ಮೈಕ್ರೋವೇವ್ quick start menu ನಲ್ಲಿ 30 ಸೆಕಂಡ್ ಬಿಸಿ ಮಾಡಿದೆ. ತಣ್ಣಗಾದ ನಂತರ ಮಿಕ್ಸಿಯಲ್ಲಿ ಪುಡಿ ಮಾಡಿಕೊಂಡೆ. ಐದು ದಿನಕ್ಕಾಗುವಷ್ಟೆ ನಾನು ಮಾಡಿಡುವುದು. 




ಬೆಣ್ಣೆ ಜತೆ ಅಗಸೆ ಚಟ್ನಿ ಪುಡಿ & ಜೋಳದ ರೊಟ್ಟಿ
:-)

No comments: