ಮಾವಿನ ಹಣ್ಣಿನ ತಿರುಳನ್ನು ತೆಗೆದು ಅದಕ್ಕೆ ಸಕ್ರೆ ಬೆರೆಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ಈ ಮಿಶ್ರಣವನ್ನು ದಪ್ಪ ತಳದ ಪಾತ್ರೆಗೆ ಹೊಯ್ದು ಆ ಪಾತ್ರೆಅಯ್ನ್ನು ಒಲೆಯ ಮೇಲಿಡಿ. ಮಿಶ್ರಣ ದಪ್ಪ ಆಗುತ್ತಾ ಬರುವಾಗ ಗ್ಯಾಸ್ ಮೇಲಿಂದ ಇಳಿಸಿ. ಸ್ವಲ್ಪ ತಣ್ಣಗಾದ ನಂತರ ಮಿಶ್ರಣವನ್ನು ಬಟ್ಟರ್ ಪೇಪರ್ ಮೇಲೆ ಹಾಕಿ ತೆಳ್ಳಗೆ ದೋಸೆ ಸೈಜ್ ನಲ್ಲಿ ಸಟ್ಟುಗದಿಂದ spread ಮಾಡಿ. ಆ ಮೇಲೆ ಬಿಸಿಲಿಗೆ ಇಡಿ. ಪೂರ್ತಿ ಒಣಗಿ ಕೈ ಗೆ ತಾಗದೆ ಇದ್ದಾಗ ಅದನ್ನು ಬಟರ್ ಪೇಪರ್ ನಿಂದ ತೆಗೆದು,
ಚಿಕ್ಕ ಪೀಸ್ ಗಳನ್ನಾಗಿ ಕಟ್ ಮಾಡಿ ಗಾಳಿಯಾಡದ ಡಬ್ಬಿಯಲ್ಲಿ ಸ್ಟೋರ್ ಮಾಡಿ.
value addition: ನಾನು ಇದಕ್ಕೆ ಜೀರಿಗೆ ಪುಡಿ ಅಥವಾ ಚಾಟ್ ಮಸಾಲಾ ಬೆರೆಸಿತೀನಿ ಕೆಲವೊಮ್ಮೆ.
ಮಕ್ಕಳಿಗೆ ಇದು ಇಷ್ಟ ಆಗುತ್ತೆ. ಅದಲ್ಲದೆ ಸಮೋಸಾ ಗೆ ಸ್ವೀಟ್ ಚಟ್ನಿ ಕೂಡ ಇದರಿಂದ ಮಾಡ ಬಹುದು.
ಎಷ್ಟು ಸುಲಭವಾಗಿದೆಯಲ್ಲವೇ?
ಆಮ್ ರಸ, ಆಮ್ರಖಂದ್, ಮಾವಿನ ಹಣ್ಣಿನ ರಸಾಯನ ಅದೆಲ್ಲ ಮಾಡಿ ಈಗ ಇದು ಟ್ರೈ ಮಾಡಿದೆ.
No comments:
Post a Comment