ತುಂಬಾ ಅಂದ್ರೆ ತುಂಬಾsssssss ಸಿಂಪಲ್. ಅಂಗಡಿಯಿಂದ ಹಸಿರು ಮೆಣಸಿನ ಕಾಯಿಯ ಉಪ್ಪಿನಕಾಯಿ ತರೋದು. ಮೊಸರಿನ ಜತೆ ಈ ಉಪ್ಪಿನಕಾಯಿ ಬೆರೆಸೋದು. ಇದಕ್ಕೆ ಪನೀರ್ ನ ತುಂಡುಗಳನ್ನು ಬೆರೆಸಿ ಒಂದರ್ಧ ಗಂಟೆ ಪಕ್ಕಕ್ಕಿಡಿ. ಆಮೇಲೆ ಈ ತರಹ bamboo skewers ಗೆ ಚುಚ್ಚಿ. ಮಧ್ಯ ಮಧ್ಯ ಬೇಕಾದರೆ ದಪ್ಪ ಮೆಣಸಿನಕಾಯಿ ಪೀಸ್/ಟೊಮ್ಯಾಟೊ ಪೀಸ್ ಸೇರಿಸಬಹುದು.
ಕರಟಕ್ಕೆ ಬೆಂಕಿ ಹಚ್ಚಿ ನಾವು ಸಿಗಡಿಗೆ ಹಾಕಿ ಈ ತರಹ ಗ್ರಿಲ್ ಮಾಡ್ತೇವೆ. ನೀಟಾಗಿ skewers ಜೋಡಿಸಿ ಸಿಗಡಿ ಮೇಲೆ. ಎಲ್ಲ ಕಡೆ ಬೇಯುವಂತೆ ನಿಧಾನಕ್ಕೆ skewers ತಿರುಗಿಸುತ್ತಾ ಇರಿ.
ಮೊಸರನ್ನು ಕಟ್ಟಿಡಿ. ನೀರೆಲ್ಲ ಬಸಿದು ಹೋದ ಮೇಲೆ ಒಂದು ಹಸಿಮೆಣಸಿನ ಕಾಯಿ , ಕೆಲವು ಪುದಿನ, ಕೊತ್ತಂಬರಿ ಎಲೆಯೊಂದಿಗೆ ರುಬ್ಬಿ ಡಿಪ್ ತಯಾರಿಸಿ. ಬಿಸಿ ಬಿಸಿ ಪನೀರ್ ಅಚಾರಿ ಜತೆ ಸರ್ವ್ ಮಾಡಿ
ಎಂಜಾಯ್. ಈಗಂತೂ weather ಇಂತಹ ಸ್ನ್ಯಾಕ್ಸ್ ಮಾಡಿ ತಿನ್ನೋಕೆ ಪ್ರಶಸ್ತವಾಗಿದೆ.
:-)
No comments:
Post a Comment