2 ಬಟ್ಟಲು ಗೋದಿ ಹಿಟು (ಗೋದಿ ನೆನೆಸಿಟ್ಟು ಮರುದಿನ ರುಬ್ಬಿ ಕೂಡ ಮಾಡಬಹುದು. ನನ್ನದು short cut method. 2ವರೆ ಬಟ್ಟಲು ತೆಳು ಬೆಲ್ಲ. ಏಲಕ್ಕಿ, ಒಂದು ತೆಂಗಿನಕಾಯಿಯ ಹಾಲು . ಪಾತ್ರೆಗೆ ಸವರಲು ಸ್ವಲ್ಪ ತುಪ್ಪ.
ರಾತ್ರಿ ಗೋದಿ ಹಿಟ್ಟಿಗೆ ನೀರು ಬೆರೆಸಿ ಇಡಿ. ಬೆಳಿಗ್ಗೆ ಆ ನೀರನ್ನು ಬಸಿದು, ಕೆಳಗಡೆ ಉಳಿದಂತಹ ಮಿಶ್ರಣವನ್ನು , ಅಬಟ್ಟೆಯನ್ನು ಕಟ್ಟಿದ ಅಗಲ ಪಾತ್ರೆಅಯ್ಲ್ಲಿ ಹಾಕಿ. ನಿಮ್ಮ ಕೆಲಸ ಬೊಗಸೆ ಮುಗಿಯುವಷ್ಟರಲ್ಲಿ ಗೋದಿ ಚರಟ ಮೇಲೆ ಉಳಿದು, ಹಾಲಿನಂತಹ ಮಿಶ್ರಣ ಪಾತ್ರೆಅಯ್ಲ್ಲಿ ಇರುತ್ತೆ. ಇದನ್ನು ದಪ್ಪ ತಳದ ಪಾತ್ರೆಗೆ ವರ್ಗಾಯಿಸಿ. ಇದಕ್ಕೆ ತೆಂಗಿನ ಹಾಲು, ತೆಳು ಬೆಲ್ಲ ಬೆರೆಸಿ ಒಲೆಯ ಮೇಲಿಡಿ. (ಬೆಲ್ಲ ಪುಡಿ ಮಾಡಿ ಹಾಕುವುದಿದ್ದರೆ ಟೆಸ್ಟ್ ನೋಡಿ ಬೇಕಾದಷ್ಟು ಬೆಲ್ಲ ಬೆರೆಸಿ. ತೆಳು ಬೆಲ್ಲ ಸ್ವಲ್ಪ ಹೆಚ್ಚೇ ಸಿಹಿಯಾಗಿರುತ್ತೆ) ಮಿಶ್ರಣ ದಪ್ಪ ಗಾಗುತ್ತ ಬರುವವರೆಗೆ ಮಧ್ಯ ಮಧ್ಯ ಸಟ್ಟುಗದಿಂದ ಕೈಯಾಡಿಸಿ, ನೀರಲ್ಲಿ ಒದ್ದೆ ಮಾಡಿದ ಬೆರಳಿನಿಂದ ದಪ್ಪಗಾದ ಮಿಶ್ರಣ ಮುಟ್ಟಿದರೆ, ಅದು ಬೆರಳಿಗೆ ಅಂಟ ಬಾರದು. ಆಗ ಮಣ್ಣಿ ರೆಡಿಯಾಗಿದೆ ಅಂತ ಲೆಕ್ಕ. ಏಲಕ್ಕಿ ಪುಡಿ ಬೆರೆಸಿ. ತುಪ್ಪ ಸವರಿದ ತಾಟಿಗೆ ಹಾಕಿ. ಸ್ವಲ್ಪ ತಣ್ಣಗಾದ ಮೇಲೆ ಚಾಕಿವಿನಿಂದ ಮಾರ್ಕ್ ಮಾಡಿ, ಪೂರ್ತಿ ತಣ್ಣಗಾದ ಮೇಲೆ ಬಿಡಿಸಿ ಇಡಿ
ವ್ಯಾನಿಲ್ಲ ಐಸ್ ಚ್ರೀಮ್ ಜತೆ ಚೆನ್ನಾಗಿರುತ್ತೆ. ಫ್ರಿಜ್ ನಲ್ಲಿಟ್ಟು ತಿನ್ನಲಿಕ್ಕೂ ಚೆನ್ನಾಗಿರುತ್ತೆ :-)
ಕೊಂಕಣಿಯಲ್ಲಿ ನಾವು ಇದಕ್ಕೆ ದುದ್ದಳಿ ಅನ್ನುತ್ತೇವೆ.
ಇದೇ ರೀತಿ ಅರ್ಧ ಗೋದಿ ಹಿಟ್ಟು ಅರ್ಧ ರಾಗಿ ಹಿಟ್ಟು ಬಳಸಿ ಹಾಲುಬಾಯಿ ಮಾಡಬಹುದು. ಬೇಕಿದ್ದಲ್ಲಿ ತುಪ್ಪದಲ್ಲಿ ಹುರಿದ ಗೋಡಂಬಿ ಚೂರು ಬೆರೆಸ
ಬಹುದು ಒಲೆಯಿಂದ ತೆಗೆಯುವ ಮುನ್ನ,