ಟಿಂಬಕ್ಟು ಕಲೆಕ್ಟಿವ್ಸ್ ಅಂತೊಂದು ಏನ್ ಜಿ ಓ ಇದೆ. ಅಲ್ಲಿ ತೋರಿಸಿದ ವಿಡಿಯೋ ನಲ್ಲಿತ್ತು ಈ ಚಟ್ನಿ ಅಥವಾ ಗೊಜ್ಜು ಮಾಡುವ ಬಗೆ
ಬೇಕಾಗುವ ಸಾಮಾನು : ಮೂರು ಹದ ಗಾತ್ರದ ಟೊಮೇಟೋ , 4-5 ಅಥವಾ ಎಷ್ಟು ಖಾರ ಬೇಕೋ ಅಷ್ಟು ಹಸಿಮೆಣಸಿನಕಾಯಿ. ಜೀರಿಗೆ, ಬೆಳ್ಳುಳ್ಳಿ , ಸ್ವಲ್ಪ -ಸಣ್ಣಕ್ಕೆ ಕತ್ತರಿಸಿದ ಹಸಿಮೆಣಸಿನಕಾಯಿ.
ಅವರು ಟೊಮೆಟೋ ಮತ್ತು ಹಸಿಮೆಣಸಿನ ಕಾಯಿಗಳನ್ನು ಕೆಂಡದಲ್ಲಿ ಸುಟ್ಟಿಟ್ಟುಕೊಂಡಿದ್ದರು. ನಾನು ಹೀಗೆ, ನನ್ನ ಬಳಿಯಿರುವ ಪರೋಟಾ ಬೇಯಿಸುವ ಗ್ರಿಲ್ ಮೇಲೆ ಮಾಡಿದೆ.
:-)

ಟೊಮೆಟೊ ಮತ್ತು ಹಸಿಮೆಣಸಿನಕಾಯಿ ಕಂದು ಬಣ್ಣಕ್ಕೆ ಬಂದೊಡನೆ ಅದನ್ನು ಗ್ಯಾಸ್ ಮೇಲಿಂದ ಇಳಿಸಿ, ಪ್ಲೇಟ್ ಮೇಲಿಟ್ಟು ಅವನ್ನು ದೊಡ್ಡ ಪಾತ್ರೆಯೊಂದರಿಂದ ಮುಚ್ಚಿಡಿ. ಟೊಮೇಟೊ ಇದರಿಂದ ಇನ್ನಷ್ಟು ಬೇಯುತ್ತೆ. ತಣ್ಣಗಾದ ಮೇಲೆ ಟೊಮೇಟೊ ಸಿಪ್ಪೆ ತೆಗೆದು , ಹಸಿಮೆಣಸಿನಕಾಯಿಯೊಂದಿಗೆ ಮ್ಯಾಶ್ ಮಾಡಿದಿ.
ಒಂದು ಪಾತ್ರೆಯಲ್ಲಿ ಎಣ್ಣೆ ಬಿಸಿ ಮಾಡಿ . ಇದಕ್ಕೆ ಜೀರಿಗೆ ಒಗ್ಗರಣೆಗೆ ಹಾಕಿ. ಜಜ್ಜಿದ ಬೆಳ್ಳುಳ್ಳಿ ಹಾಕಿ , ಕೊನೆಗೆ ಮ್ಯಾಶ್ ಮಾಡಿದ ಮಿಕ್ಷಚರ್ ಬೆರೆಸಿ. ಉಪ್ಪು , ಚಿಟಿಕೆ ಸಕ್ಕರೆ ಬೆರೆಸಿ. ಕೊನೆಗೆ ಹಸಿ ಇರುಳ್ಳಿ ಮತ್ತು ಕೊತ್ತಂಬರಿ ಸೊಪ್ಪು ಬೆರೆಸಿ.
ರಾಗಿ ರೊಟ್ಟಿ ಅಥವಾ ಪರಾಥಾ /ಫುಲ್ಕಾ ಜತೆ ರುಚಿಕರವಾದ ಗೊಜ್ಜು /ಚಟ್ನಿ ರೆಡಿ.
:-)