Thursday, October 12, 2017

ರೆಡಿ ಟು ಯೂಸ್ ಹಲಸಿನಕಾಯಿ

ಈಗೀಗ ಜೀವನ ನಡೆಸುವುದು ಎಷ್ಟು ಸುಲಭವಾಗಿದೆ. ಇಲ್ಲಿದೆ ನೋಡಿ ರೆಡಿ ಟು ಯೂಸ್ ಹಲಸಿನಕಾಯಿ. ಕಟ್ ಮಾಡುವ , ಕೈಗೆ ಮೇಣ ತಾಗುವುದು, ಸಮಯ ಉಳಿತಾಯ, ಸೀಸನ್ ಗಾಗಿ ಕಾಯುವಿಕೆ ಇಲ್ಲದ್ದು, ಎಷ್ಟೆಲ್ಲಾ ಉಪಯೋಗಗಳು. 
ರಾಯರು ದೆಹಲಿಗೆ ಹೋಗಿದ್ದಾಗ ತಂದಿದ್ದು ಈ ಸಫಲ್ ಹಲಸಿನಕಾಯಿ ಹೋಳುಗಳು. 

ಚೆನ್ನಾಗಿ ನೀರಿನಲ್ಲಿ ತೊಳೆದು, ಉಪ್ಪು ಹಾಕಿ ಬೇಯಿಸಿಡಿ . ಹೆಚ್ಚು ಬೇಯಿಸೋದು ಬೇಡ. ಕುಕ್ಕರ್  ಎರಡು ವಿಶಾಲ್ ಕೂಗಿದ ಮೇಲೆ ಐದು ನಿಮಿಷ ಸಣ್ಣ ಉರಿಯಲ್ಲಿಟ್ಟು ಗ್ಯಾಸ್  ಆಫ್ ಮಾಡಿ. 

ಕಾಯಿ ತುರಿ , ಹುರಿದ ಕೆಂಪು ಮೆಣಸು, ಎಣ್ಣೆಯಲ್ಲಿ ಹುರಿದ ಅರ್ಧ ಚಮಚ ಕೊತ್ತಂಬರಿ, ಕಾಲು ಚಮಚ ಮೆಂತೆ , ಸ್ವಲ್ಪ ಹಿಂಗು , ಹೆಣಸೇಕಾಯಿ ಹಾಕಿ ನುಣ್ಣಗೆ ರುಬ್ಬಿದ ಮಸಾಲೆ. 

ಎಣ್ಣೆಯಲ್ಲಿ ಸಾಸಿವೆ ಕರಿಬೇವು ಒಗ್ಗರಣೆ ಹಾಕಿ, ಇದಕ್ಕೆ ಬೇಯಿಸಿದ ಹಲಸಿನಕಾಯಿ ಹೋಳುಗಳನ್ನು ಬೆರೆಸಿ ಎರಡು ನಿಮಿಷ ಕೈಯಾಡಿಸಿ, ಕೊನೆಗೆ ರುಬ್ಬಿದ ಪದಾರ್ಥ, ಉಪ್ಪು (ರುಚಿ ನೋಡಿ ಹಾಕಿ) , ಸ್ವಲ್ಪ ಬೆಲ್ಲ ಬೇಕಿದ್ದಲ್ಲಿ ಹಾಕಿ, ಎಷ್ಟು ಬೇಕು ಅಷ್ಟು ನೀರು  ಸೇರಿಸಿ ಚೆನ್ನಾಗಿ ಕುದಿ  ಬಂದ ನಂತರ ಗ್ಯಾಸ್  ಆಫ್ ಮಾಡಿ. ಬಿಸಿ ಅನ್ನದ ಜತೆ ಒಳ್ಳೆಯ ಕಾಂಬಿನೇಷನ್