Friday, November 21, 2014

konkani dhokla/steamed pizza



ಬೇಕ್ಕಾಗುವ ಸಾಮಗ್ರಿ

ಹಿಂದಿನ ದಿನದ ಇಡ್ಲಿ ಹಿಟ್ಟು, ಹಸಿಮೆಣಸಿನಕಾಯಿ, ಶುಂಠಿ, ಒಗ್ಗರಣೆಗೆ ಎಣ್ಣೆ, ಉದ್ದಿನ ಬೆಳೆ, ಸಾಸಿವೆ, ಕರಿಬೇವು, ಮೆಂತೆ , ಕೆಂಪು ಮೆಣಸು, ತುರಿದ ಕ್ಯಾರೆಟ್

ಮೊದಲಿಗೆ ಹಸಿಮೆಣಸಿನ ಕಾಯಿ+ ಶುಂಠಿ ಪೇಸ್ಟ್ ಅನ್ನು ಹಿಟ್ಟಿಗೆ ಮಿಕ್ಸ್ ಮಾಡಿ.

ಒಗ್ಗರಣೆಗೆ ಇಡಿ. ಒಗ್ಗರಣೆಯನ್ನು ಅಗಲ (ಇಡ್ಲಿ ಹಬೆಪಾತ್ರೆಅಯ್ಲ್ಲಿ ಹಿಡಿಯುವ ಸೈಜ್) ಪಾರೆಗೆ ಸುರಿಯಿರಿ. ಅದರ ಮೇಲೆ ಕ್ಯಾರೆಟ್ ತುರಿದು ಹಾಕಿ. ಕೊತ್ತಂಬರಿ ಸೊಪ್ಪು ಕಟ್ ಮಾಡಿ ಹಾಕಿ. ಕೊನೆಗೆ ಇಡ್ಲಿ ಹಿಟ್ಟನ್ನು ಸುರಿಯಿರಿ. ಹಬೆ ಪಾತ್ರೆಅಯಲ್ಲಿ 15-20 ನಿಮಿಷ ಸ್ಟೀಮ್ ಮಾಡಿ ..ನಿಮಗೆ ಬೇಕಾದ ಹೆಸರು ಇಡಿ. ಬೆಣ್ಣೆ, ಚಟ್ನಿ ಯೊಂದಿಗೆ ಸರ್ವ ಮಾಡಿ.
ನಿಮ್ಮದೇ ವರ್ಶನ್ ಕೂಡ ಮಾಡ ಬಹುದು.
:-)

Monday, November 17, 2014

ಸಿಹಿಕುಂಬಳಕಾಯಿ/ಚಿನಿಕಾಯಿ/Pumpkin ಸೂಪ್

ಚಳಿಗಾಲ ಅಂಬೆಗಾಲಿಡುತ್ತ ಬರುತ್ತಾ ಇದೆ. ಚಳಿಯನ್ನು ಓಡಿಸಲು ಬಿಸಿ ಬಿಸಿ ಸೂಪ್ ಸೂಪರ್ ಆಗಿರುತ್ತೆ. ಮಾಮೂಲಿ ಟೊಮ್ಯಾಟೊ, ಸ್ವೀಟ್ ಕಾರ್ನ್ ಸೂಪ್ ಗಿಂತ ಭಿನ್ನವಾದದನ ಟ್ರೈ ಮಾಡುವ ಅಂತ ಇದನ್ನ ಮಾಡಿದೆ. ಇಟ್ ವಾಸ್ ಎ ಹಿಟ್. 
 ಬೇಕಾಗುವ ಸಾಮಗ್ರಿ : ಹದ ಗಾತ್ರದ ಸಿಹಿಗುಂಬಳ, ಒಂದು ಟೊಮ್ಯಾಟೊ , ಒಂದು ಅಥವಾ ಎರಡು ಕ್ಯಾರಟ್ ಒಂದು ಚಮಚ ಬೆಣ್ಣೆ, ತಾಜಾ ಕುಟ್ಟಿದ ಕರಿಮೆಣಸು, ಉಪ್ಪು ಸಕ್ಕರೆ. (ಕ್ರೀಮ್ ಬೇಕಾದರೆ ಮಾತ್ರ )



ಕುಂಬಳಕಾಯಿ, ಕ್ಯಾರೆಟ್ ಮತ್ತು ಟೊಮ್ಯಾಟೊ ಹೋಳು ಮಾಡಿ . ಬಾಣಲೆಯಲ್ಲಿ ಒಂದು ಚಮಚ ಬೆಣ್ಣೆ ಬಿಸಿ ಮಾಡಿ (ನಾನು ಈಗಷ್ಟೆ ಬೆಣ್ಣೆ ಕಾಸಿ ತುಪ್ಪ ಮಾಡಿದೆ. ಹಾಗಾಗಿ ಆ ಬಾಣಲೆಯಲ್ಲೆ )ಹೋಳುಗಳನ್ನು ಹಾಕಿ  ಎರಡು ನಿಮಿಷ ಕೈಯಾಡಿಸಿ. ಇದಕ್ಕೆ ಸ್ವಲ್ಪ ನೀರು ಹಾಕಿ ಬೇಯಲು ಬಿಡಿ. ಚೆನ್ನಾಗಿ ಬೆಂದ ನಂತರ ಉಪ್ಪು ಚಿಟಿಕೆ  ಸಕ್ಕರೆ ಹಾಕಿ. ಸ್ವಲ್ಪ ತಣ್ಣಗಾದ ನಂತರ ಬ್ಲೆಂಡರ್ ಅಥವಾ ಮಿಕ್ಷಿ ನಲ್ಲಿ ನುಣ್ಣಗೆ ರುಬ್ಬಿ. ಸೂಪ್ ನ ಹದಕ್ಕೆ  ಬೇಕಾದಷ್ಟು ನೀರು ಬೆರೆಸಿ . ಕುದಿಸಿ. ತಾಜಾ ಕುಟ್ಟಿದ ಕರಿಮೆಣಸು ಹಾಕಿ ಬಿಸಿ ಬಿಸಿ ಸರ್ವ ಮಾಡಿ. (ಬೇಕಾದರೆ ಕ್ರೀಮ್ ಬೆರೆಸಿ )
ಎಂಜಾಯ್ :-) 

Tuesday, November 11, 2014

ಫ್ರುಟ್ ಜಿಲೇಬಿ

ಸುಲಭದಲ್ಲಿ ತಯಾರು ಮಾಡಲು: ಒಂದು ಪ್ಯಾಕೆಟ್ MTR ಜಿಲೇಬಿ ಮಿಕ್ಸ್. ಸೇಬು, ಅನಾನಸು, ಸಪ್ಪರ್ಚನ್, ಪಪಯಾ ಮುಂತಾದ ಹಣ್ಣು, ನಿಮಗೆ ಬೇಕಾದ ಆಕಾರದಲ್ಲಿ ಹಣ್ಣುಗಳನ್ನು ಕಟ್ ಮಾಡಿ.
ಪ್ಯಾಕೆಟ್ ಮೇಲಿನ instructions follow ಮಾಡಿ ಜಿಲೇಬಿಯ ಹಿಟ್ಟು ತಯಾರು ಮಾಡಿ. ಹಣ್ಣುಗಳನ್ನು ಮುಳುಗಿಸಿ ಎಣ್ಣೆಯಲ್ಲಿ ಕರಿಯಿರಿ.
ಸಕ್ಕರೆಯ ಒಂದೆಳೆ ಪಾಕ ಮಾಡಿ ಅದಕ್ಕೆ ಲಿಂಬೆ ಹಣ್ಣಿನ ರಸ ಹಿಂಡಿ. ಕರಿದ ಜಿಲೇಬಿಯನ್ನು ಇದರಲ್ಲಿ ಎರಡು ನಿಮಿಷ ಇಟ್ಟು ಬೇರೆ ಪಾತ್ರೆಗೆ ಹಾಕಿ.
ಹಾಲಿನ ಬಾಸುಂದಿ ಜತೆ ಇದನ್ನು ಸರ್ವ ಮಾಡಿ.


ಜಿಲೇಬಿಯ batter
ಮೈದಾ - 2 ಬಟ್ಟಲು
ದಪ್ಪ ಮೊಸರು - 2 ಬಟ್ಟಲು
(ಬೇಕಿದ್ದರೆ corn flour/ ಆರಾರೂಟ್ ಪೌಡರ್ )
ಹಿಂದಿನ ರಾತ್ರಿ ಮೈದಾಗೆ ಒಂದು ಬಟ್ಟಲು ಮೊಸರು ಸೇರಿಸಿ ಗಂಟುಗಳು ಇರದಂತೆ ಚೆನ್ನಾಗಿ ಮಿಕ್ಸ್ ಮಾಡಿಡಿ . ಮರುದಿನ ಉಳಿದ ಮೊಸರು ಬೆರೆಸಿ . ದೋಸೆ ಹಿಟ್ಟಿಗಿಂದ ಸ್ವಲ್ಪ ದಪ್ಪಗಿರಲಿ. ಬೇಕಾದರೆ ಮಾತ್ರ ನೀರು ಬೆರೆಸಿ. ಸ್ವಲ್ಪ ಕಾರ್ನ್ಫ್ಲೋರ್ ಅಥವಾ ಆರಾರೂಟ್ ಪೌಡರ್ ಮಿಕ್ಸ್ ಮಾಡಿ.
ಸಕ್ಕರೆ ಪಾಕಕ್ಕೆ: ಎರಡು ಬಟ್ಟಲು ಸಕ್ಕರೆಗೆ ಎರಡು ಬಟ್ಟಲು ನೀರು . ಒಂದೆಳೆ ಪಾಕ.