ಚಳಿಗಾಲ ಅಂಬೆಗಾಲಿಡುತ್ತ ಬರುತ್ತಾ ಇದೆ. ಚಳಿಯನ್ನು ಓಡಿಸಲು ಬಿಸಿ ಬಿಸಿ ಸೂಪ್ ಸೂಪರ್ ಆಗಿರುತ್ತೆ. ಮಾಮೂಲಿ ಟೊಮ್ಯಾಟೊ, ಸ್ವೀಟ್ ಕಾರ್ನ್ ಸೂಪ್ ಗಿಂತ ಭಿನ್ನವಾದದನ ಟ್ರೈ ಮಾಡುವ ಅಂತ ಇದನ್ನ ಮಾಡಿದೆ. ಇಟ್ ವಾಸ್ ಎ ಹಿಟ್.
ಬೇಕಾಗುವ ಸಾಮಗ್ರಿ : ಹದ ಗಾತ್ರದ ಸಿಹಿಗುಂಬಳ, ಒಂದು ಟೊಮ್ಯಾಟೊ , ಒಂದು ಅಥವಾ ಎರಡು ಕ್ಯಾರಟ್ ಒಂದು ಚಮಚ ಬೆಣ್ಣೆ, ತಾಜಾ ಕುಟ್ಟಿದ ಕರಿಮೆಣಸು, ಉಪ್ಪು ಸಕ್ಕರೆ. (ಕ್ರೀಮ್ ಬೇಕಾದರೆ ಮಾತ್ರ )
ಕುಂಬಳಕಾಯಿ, ಕ್ಯಾರೆಟ್ ಮತ್ತು ಟೊಮ್ಯಾಟೊ ಹೋಳು ಮಾಡಿ . ಬಾಣಲೆಯಲ್ಲಿ ಒಂದು ಚಮಚ ಬೆಣ್ಣೆ ಬಿಸಿ ಮಾಡಿ (ನಾನು ಈಗಷ್ಟೆ ಬೆಣ್ಣೆ ಕಾಸಿ ತುಪ್ಪ ಮಾಡಿದೆ. ಹಾಗಾಗಿ ಆ ಬಾಣಲೆಯಲ್ಲೆ )ಹೋಳುಗಳನ್ನು ಹಾಕಿ ಎರಡು ನಿಮಿಷ ಕೈಯಾಡಿಸಿ. ಇದಕ್ಕೆ ಸ್ವಲ್ಪ ನೀರು ಹಾಕಿ ಬೇಯಲು ಬಿಡಿ. ಚೆನ್ನಾಗಿ ಬೆಂದ ನಂತರ ಉಪ್ಪು ಚಿಟಿಕೆ ಸಕ್ಕರೆ ಹಾಕಿ. ಸ್ವಲ್ಪ ತಣ್ಣಗಾದ ನಂತರ ಬ್ಲೆಂಡರ್ ಅಥವಾ ಮಿಕ್ಷಿ ನಲ್ಲಿ ನುಣ್ಣಗೆ ರುಬ್ಬಿ. ಸೂಪ್ ನ ಹದಕ್ಕೆ ಬೇಕಾದಷ್ಟು ನೀರು ಬೆರೆಸಿ . ಕುದಿಸಿ. ತಾಜಾ ಕುಟ್ಟಿದ ಕರಿಮೆಣಸು ಹಾಕಿ ಬಿಸಿ ಬಿಸಿ ಸರ್ವ ಮಾಡಿ. (ಬೇಕಾದರೆ ಕ್ರೀಮ್ ಬೆರೆಸಿ )
ಎಂಜಾಯ್ :-)
No comments:
Post a Comment