. ಇದು ಮಹಾರಾಷ್ಟ್ರದ ಜನಪ್ರಿಯ ತಿಂಡಿ. ಇಲ್ಲಿ ನಾನು ಹೇಳಿಕೊಡ್ತಾ ಇರುವುದು ಕೊಲ್ಹಾಪುರಿ ಮಿಸ್ಸಳ್. ನಾನು ಮುಂಬೈನಲ್ಲಿ ಬೆಳೆದರೂ ನನಗೆ ಕೊಲ್ಹಾಪುರಿ ಮಿಸ್ಸಳ್ ಹೆಚ್ಚು ಇಷ್ಟ. ನಿಮಗೆ ಬೇಕಾದ ಹಾಗೆ ಖಾರ ಬಳಸಬಹುದು. ನಮಗೆ ತುಂಬಾ ಖಾರ ಇಷ್ಟ.
ಬೇಕಾಗಿರುವುದು ಎರಡು ಮುಷ್ಠಿ ಮೊಳಕೆ ಬರಿಸಿದ ಕಾಳು (ಮಟಕಿ, ಹೆಸರು ಕಾಳು) ಸ್ವಲ್ಪ ಮಸೂರ್ ಕಾಳು, ಒಂದು ಬೇಯಿಸಿದ ಆಲೂಗಡ್ಡೆ.
ಮಸಾಲೆಗೆ:
ಒಂದು ಟೇಬಲ್ ಸ್ಪೂನ್ ತುರಿದ ಕೊಬ್ಬರಿ, ೪-೫ ಕೆಂಪು ಮೆಣಸು, ಹುಣಸೆ ಹುಳಿ, ಅರ್ಧ ಇಂಚ್ ಚಕ್ಕೆ, ೮-೧೦ ಬೆಳ್ಳುಳ್ಳಿ ಎಸಳು, ಒಂದು ಟೀ ಸ್ಪೂನ್ ಗೋಡಾ ಮಸಾಲಾ, ಒಂದು ಟೀ ಸ್ಪೂನ್ ತಿಕಟ್ ಮಸಾಲಾ. (ಗೋಡಾ ಮಸಾಲಾ, ತಿಕಟ್ ಮಸಾಲಾ ನಾನು ಬೆಳಗಾವಿಯಿಂದ ತರುತ್ತೇನೆ. ಅಲ್ಲಿನ ಮಾರ್ಕೆಟ್ ನಲ್ಲಿ ಲಭ್ಯ)
ಎಣ್ಣೆಯಲ್ಲಿ ಮೊದಲು ಚಕ್ಕೆ ಹಾಕಿ ಆಮೇಲೆ ಕೊಬ್ಬರಿಯನ್ನು ಕೆಂಪು ಬಣ್ಣ ಬರುವ ತನಕ ಫ್ರೈ ಮಾಡಿ. ತಣ್ಣಗಾದ ಮೇಲೆ ಉಳಿದ ಪದಾರ್ಥ ಸೇರಿಸಿ ನುಣ್ಣಗೆ ರುಬ್ಬುವುದು.
ಬೆರೆಸಲು ಕೊತ್ತಂಬರಿ ಸೊಪ್ಪು, ಮಿಕ್ಸರ್, ಹಸಿ ನೀರುಳ್ಳಿ (ಚಿಕ್ಕದಾಗಿ ಕತ್ತರಿಸಿದ್ದು)
ಕಾಳುಗಳನ್ನು ಸ್ವಲ್ಪ ನೀರುಳ್ಳಿ ಹಾಕಿ ಬೇಯಿಸಿ.
ಎಣ್ಣೆ ಬಿಸಿ ಮಾಡಿ ಜೀರಿಗೆ ಒಗ್ಗರಣೆಗೆ ಇಡಿ. ಮಸಾಲೆ ಬೆರೆಸಿ ಕೈಯಾಡಿಸಿ. ಬೇಕಾದರೆ ಟೊಮ್ಯಾಟೊ ಬೆರೆಸಿ. ಬೇಯಿಸಿದ ಆಲೂಗಡ್ಡೆ + ಕಾಳು ಬೆರೆಸಿ. ಉಪ್ಪು ಹಾಕಿ. ಬೇಕಾದಷ್ಟು ನೀರು ಬೆರೆಸಿ ಚೆನ್ನಾಗಿ ಕುದಿಸಿ. ಕುದಿ ಬಂದ ಮೇಲೆ ಆಫ್ ಮಾಡಿ ಕೊತ್ತಂಬರಿ ಸೊಪ್ಪು ಬೆರೆಸಿ. ಭಾಜಿ ರೆಡಿ
ಸರ್ವ್ ಮಾಡುವಾಗ ಬವ್ಲ್ ನಲ್ಲಿ ಭಾಜಿ ಹಾಕಿ ಅದರ ಮೇಲೆ ಮಿಕ್ಸರ್, ಕತ್ತರಿಸಿದ ನೀರುಳ್ಳಿ ಹಾಕಿ ಕೊಡಿ. ಮಿಸ್ಸಳ್ ರೆಡಿ. ಪಾವ್ ಜತೆ ಸರ್ವ್ ಮಾಡಿ