ಇದು ಮಲೆನಾಡಿನ especially ಕೊಂಕಣಿಯವರ specialty. ನಾನು ಮದುವೆಯಾಗಿ ತೀರ್ಥಹಳ್ಳಿಗೆ ಬಂದ ಮೇಲೆ ಈ ಅಡಿಗೆಯನ್ನು ಕಲಿತಿದ್ದು. ಅಮ್ಮನಿಗೂ ಇದರ ರುಚಿ ಹತ್ತಿಸಿದ್ದೇನೆ.
ಬೇಕಾಗಿರುವುದು : ಒಂದು ಕಟ್ಟು(8-10) ಸಣ್ಣ ಕೆಸುವಿನ ಎಲೆಗಳು, ಮೂರು ಆಮ್ಟೆ ಕಾಯಿ (hog plum), ಅರ್ಧ ಹಿಡಿ ಕಡಲೆ (ನೆನೆಸಿದ್ದು), ಮೂರು-ನಾಲ್ಕು ಹಸಿಮೆಣಸಿನಕಾಯಿ, ಕಾಲು ಇಂಚ್ ಶುಂಠಿ, ಒಂದು ದೊಡ್ಡ ಚಮಚ ಕಾಯಿ ತುರಿ, ಉಪ್ಪು, ಒಂದು ಲಿಂಬೆ ಹಣ್ಣಿನ ರಸ, ಒಂದು ಟೀ ಚಮಚ ಶುಧ್ಧ ತೆಂಗಿನ ಎಣ್ಣೆ
ವಿಧಾನ:
ಕಡಲೆ ಕಾಳು ಕುಕ್ಕರ್ ನಲ್ಲಿ ಬೆಯಿಸಿಡಿ. ಕೆಸುವಿನ ಎಲೆಗಳನ್ನು ಚೆನ್ನಾಗಿ ತೊಳೆದು, ನಾರು ತೆಗೆದು, ಸಣ್ಣಕ್ಕೆ ಕತ್ತರಿಸಿ, ಅಮಟೆ ಕಾಯಿ ಗುದ್ದಿ ಎರಡನ್ನೂ ನೀರು ಹಾಕಿ ಬೇಯಿಸಲು ಇಡಿ. ಇದಕ್ಕೆ ಸೀಳಿದ ಮೆಣಸಿನಕಾಯಿ ಮತ್ತು ಉಪ್ಪು ಹಾಕಿ ಮುಚ್ಚಿಡಿ. ಬೆಂದ ಮೇಲೆ ಗ್ಯಾಸ್ ಆಫ್ ಮಾಡಿ. ತಣಿದ ಮೇಲೆ ಅದರಿಂದ ಬೆಂದ ಹಸಿಮೆಣಸಿನಕಾಯಿ ಹೆಕ್ಕಿ ತೆಂಗಿನಕಾಯಿಯೊಂದಿಗೆ ಚೆನ್ನಾಗಿ ರುಬ್ಬಿ ಬೆಂದ ಎಲೆಯ ಜತೆ ಮಿಶ್ರಣ ಮಾಡಿ. ಇದಕ್ಕೆ ಬೇಯಿಸಿಟ್ಟ ಕಡಲೆ ಮಿಕ್ಸ್ ಮಾಡಿ ಎಷ್ಟು ಬೇಕೋ ಅಷ್ಟು ನೀರು ಹಾಕಿ, ಉಪ್ಪು ರುಚಿ ನೋಡಿ ಬೇಕಿದ್ದಲ್ಲಿ ಉಪ್ಪು ಹಾಕಿ, ಶುಂಠಿಯನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ. ಸರಿ ಕುದಿ ಬಂದ ಮೇಲೆ ಗ್ಯಾಸ್ ಆಫ್ ಮಾಡಿ. ತೆಂಗಿನ ಎಣ್ಣೆ ಸುರಿಸಿ ಮುಚ್ಚಿಡಿ. ಬಡಿಸುವ ಮುಂಚೆ ಲಿಂಬೆ ರಸ ಬೆರೆಸಿ. ಬಿಸಿ ಬಿಸಿ ಅನ್ನದ ಜತೆ ಸೆರ್ವ್ ಮಾಡಿ.
2 comments:
My mom puts loshne phanna to this one.. Tastes yummy! Of course not during shravan! :(
losuN phaNNa?? that is new to me..possibly cos in theerthahalli they did not consume garlic....would love to try though. my girls love garlic.
thank you Anonymous
:-)
malathi S
Post a Comment