ತೆಂಗಿನಕಾಯಿ ತುರಿದ ಚೀನಿಕಾಯಿ ಸಮ ಪ್ರಮಾಣ. ನಾನಿಲ್ಲಿ ಒಂದು ದೊಡ್ಡ ಟೇಬಲ್ ಚಮಚ ತೆಗೊಂಡಿದ್ದೀನಿ, ಮತ್ತು ಬೇಕಾದಷ್ಟು ಹಸಿಮೆಣಸಿನಕಾಯಿ
ಎಣ್ಣೆಯಲ್ಲಿ ಜೀರಿಗೆ ಹಿಂಗು ಹಸಿಮೆಣಸಿನಕಾಯಿ ಬಾಡಿಸಿ. ಇದಕ್ಕೆ ತುರಿದ ಚೀನಿಕಾಯಿ ಆಮೇಲೆ ಕಾಯಿ ತುರಿ ಬೆರೆಸಿ ಕೈಯಾಡಿಸಿ.
ತಣ್ಣಗಾದ ಮೇಲೆ ಚಿಕ್ಕ ತುಂಡು ಹುಣಸೆ ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ . ಉಪ್ಪು ಬೆರೆಸಿ.
ಒಗ್ಗರಣೆಗೆ ಉದ್ದಿನಬೇಳೆ, ಜೀರಿಗೆ ಸಾಸಿವೆ, ಕರಿಬೇವು, ಕೆಂಪು ಮೆಣಸು ಹಾಕಿ
ಒಗ್ಗರಣೆ ಬೆರೆಸಿ. ಊಟಕ್ಕೆ ಬಡಿಸುವ ಸ್ವಲ್ಪ ಮೊದಲು ಮೊಸರು ಸೇರಿಸಿ ಮಿಕ್ಸ್ ಮಾಡಿ.
ಬಿಸಿ ಬಿಸಿ ಅನ್ನಕ್ಕೆ ಚಪಾತಿಗೆ ಒಳ್ಳೆಯ ಸಾಥ್ .ಸುಲಭ ಮತ್ತು ರುಚಿಕರ
No comments:
Post a Comment