Monday, November 6, 2017

ಒಂದು ಸ್ಪೆಷಲ್ ಕೇಕ್

ನಮ್ಮ ಬಿಸ್ಕುಟ್ ಫ್ಯಾಕ್ಟರಿಯಿಂದ ತಯಾರಾದ ಒಂದು ವಿಶೇಷ ಕೇಕ್.  ಜವೆ ಗೋದಿ ಹಿಟ್ಟು ಮತ್ತು ಬೆಲ್ಲದಿಂದ ತಯಾರಿಸಿದ್ದು.  ಮತ್ತು ಮೊದಲೇ ಹೇಳಿದ ಹಾಗೆ ನಾವು ನಮ್ಮಕೇಕ್,ಕಪಿಕೆಕ್, ಕುಕೀಸ್, ಚಾಕಲೇಟ್ ಗಳಲ್ಲಿ ಮೊಟ್ಟೆಯನ್ನು ಬಳಸುವುದಿಲ್ಲ. 
ಹೆಚ್ಚಿನ ಮಾಹಿತಿಗಾಗಿ  biscootfactory@gmail.com ಗೆ ಮೇಲ್ ಮಾಡಿ ಅಥವಾ 
9902825368 ಗೆ  call /WhatsApp ಮಾಡಿ 
ಫಾಸಬುಕ್ ಪುಟ Biscoot Factory ಗೆ ಲೈಕ್ ಹಾಕಿ್ದಾರೆ  ಇನ್ನಷ್ಟು ಡಿಸೈನರ್ ಕೇಕ್ಗಳ  ಫೋಟೋಗಳನ್ನು ವೀಕ್ಷಿಸಬಹುದು 



Thursday, October 12, 2017

ರೆಡಿ ಟು ಯೂಸ್ ಹಲಸಿನಕಾಯಿ

ಈಗೀಗ ಜೀವನ ನಡೆಸುವುದು ಎಷ್ಟು ಸುಲಭವಾಗಿದೆ. ಇಲ್ಲಿದೆ ನೋಡಿ ರೆಡಿ ಟು ಯೂಸ್ ಹಲಸಿನಕಾಯಿ. ಕಟ್ ಮಾಡುವ , ಕೈಗೆ ಮೇಣ ತಾಗುವುದು, ಸಮಯ ಉಳಿತಾಯ, ಸೀಸನ್ ಗಾಗಿ ಕಾಯುವಿಕೆ ಇಲ್ಲದ್ದು, ಎಷ್ಟೆಲ್ಲಾ ಉಪಯೋಗಗಳು. 
ರಾಯರು ದೆಹಲಿಗೆ ಹೋಗಿದ್ದಾಗ ತಂದಿದ್ದು ಈ ಸಫಲ್ ಹಲಸಿನಕಾಯಿ ಹೋಳುಗಳು. 

ಚೆನ್ನಾಗಿ ನೀರಿನಲ್ಲಿ ತೊಳೆದು, ಉಪ್ಪು ಹಾಕಿ ಬೇಯಿಸಿಡಿ . ಹೆಚ್ಚು ಬೇಯಿಸೋದು ಬೇಡ. ಕುಕ್ಕರ್  ಎರಡು ವಿಶಾಲ್ ಕೂಗಿದ ಮೇಲೆ ಐದು ನಿಮಿಷ ಸಣ್ಣ ಉರಿಯಲ್ಲಿಟ್ಟು ಗ್ಯಾಸ್  ಆಫ್ ಮಾಡಿ. 

ಕಾಯಿ ತುರಿ , ಹುರಿದ ಕೆಂಪು ಮೆಣಸು, ಎಣ್ಣೆಯಲ್ಲಿ ಹುರಿದ ಅರ್ಧ ಚಮಚ ಕೊತ್ತಂಬರಿ, ಕಾಲು ಚಮಚ ಮೆಂತೆ , ಸ್ವಲ್ಪ ಹಿಂಗು , ಹೆಣಸೇಕಾಯಿ ಹಾಕಿ ನುಣ್ಣಗೆ ರುಬ್ಬಿದ ಮಸಾಲೆ. 

ಎಣ್ಣೆಯಲ್ಲಿ ಸಾಸಿವೆ ಕರಿಬೇವು ಒಗ್ಗರಣೆ ಹಾಕಿ, ಇದಕ್ಕೆ ಬೇಯಿಸಿದ ಹಲಸಿನಕಾಯಿ ಹೋಳುಗಳನ್ನು ಬೆರೆಸಿ ಎರಡು ನಿಮಿಷ ಕೈಯಾಡಿಸಿ, ಕೊನೆಗೆ ರುಬ್ಬಿದ ಪದಾರ್ಥ, ಉಪ್ಪು (ರುಚಿ ನೋಡಿ ಹಾಕಿ) , ಸ್ವಲ್ಪ ಬೆಲ್ಲ ಬೇಕಿದ್ದಲ್ಲಿ ಹಾಕಿ, ಎಷ್ಟು ಬೇಕು ಅಷ್ಟು ನೀರು  ಸೇರಿಸಿ ಚೆನ್ನಾಗಿ ಕುದಿ  ಬಂದ ನಂತರ ಗ್ಯಾಸ್  ಆಫ್ ಮಾಡಿ. ಬಿಸಿ ಅನ್ನದ ಜತೆ ಒಳ್ಳೆಯ ಕಾಂಬಿನೇಷನ್ 

Wednesday, August 30, 2017

ಘಸಿ ಪತ್ರೋಡೆ

ಮೊನ್ನೆ ಚೌತಿಗೆ ಸ್ವಲ್ಪ ಜಾಸ್ತಿ ನೇ  ಪತ್ರೊಡೆ ಮಾಡಿದ್ದೆ. ಘಸಿ ಪತ್ರೊಡೆ ಮಾಡುವಾ ಅಂತ.
ಇದಕ್ಕೆ ಬೇಕಾಗುವ ಸಾಮಗ್ರಿ
ತುರಿದ ತೆಂಗಿನ ಕಾಯಿ
ಹುರಿದ ಕೆಂಪು ಮೆಣಸು
ಸಣ್ಣ ತುಂಡು ಹುಣಸೆ ಹುಳಿ
ನೀರುಳ್ಳಿ
ತೆಂಗಿನ ಎಣ್ಣೆ

ತೆಂಗಿನಕಾಯಿ, ಮೆಣಸು ಹುಣಸೆ ಹುಳಿ  ನುಣ್ಣಗೆ ರುಬ್ಬಿಕೊಳ್ಳಿ . ಇದಕ್ಕೆ ಸ್ವಲ್ಪ ಕತ್ತರಿಸಿದ ನೀರುಳ್ಳಿ ಮತ್ತು ಉಪ್ಪು  ಬೆರೆಸಿ ಕುದಿ ಬರುವ ತನಕ ಬಿಸಿ ಮಾಡಿ. ಇದಕ್ಕೆ ಸ್ಲೈಸ್ ಮಾಡಿದ ಪತ್ರೊಡೆ ಹಾಕಿ. ಎರಡು ನಿಮಿಷ ಬೇಯಲಿ. ಗ್ಯಾಸ್ ಆಫ್ ಮಾಡಿ. ತೆಂಗಿನ ಎಣ್ಣೆಯಲ್ಲಿ ಚಿಕ್ಕದಾಗಿ  ಕತ್ತರಿಸಿದ ನೀರುಳ್ಳಿಯಿಂದ ಒಗ್ಗರಣೆ ಮಾಡಿ ಹಾಕಿ.
ಘಸಿ ಪತ್ರೊಡೆ ತಯಾರ್. ಉಪ್ಪು ಬೆರೆಸುವಾಗ ಹುಷಾರು. ಪತ್ರೊಡೆಗೂ ಉಪ್ಪು ಇರುತ್ತೆ.







ವಿಧಾನ ೨
ನೀರುಳ್ಳಿ ಬೇಡವೆಂದರೆ : ಎಣ್ಣೆಯಲ್ಲಿ ಸ್ವಲ್ಪ ನಾಲ್ಕೈದು ಕಾಳು  ಮೆಂತೆ , ಕಾಲು ಚಮಚ ಕೊತ್ತಂಬರಿ ಕೆಂಪಗೆ ಹುರಿದುಕೊಂಡು ರುಬ್ಬುವ ಮುನ್ನ ಮಸಾಲೆಗೆ ಬೆರೆಸಿ. ಕುದಿ  ಬಂದ ನಂತರ ಸಾಸಿವೆ ಕರಿಬೇವಿನಿಂದ ಒಗ್ಗರಿಸಿ ..
enjoy :-0

Monday, June 12, 2017

ನೀರುಳ್ಳಿ ಪಕೋಡಾ / ಕಾಂದಾ ಬಜ್ಜಿ.

ಮಳೆಗಾಲಕ್ಕೆ ಹೇಳಿ ಮಾಡಿಸಿದಂತಹ snack ನೀರುಳ್ಳಿ ಪಕೋಡಾ /  ಕಾಂದಾ ಬಜ್ಜಿ.
ಉದ್ದಕ್ಕೆ ಕತ್ತರಿಸಿದ ನೀರುಳ್ಳಿ. ಇದಕ್ಕೆ ಉಪ್ಪು ಹಾಕಿಡಿ. ಸ್ವಲ್ಪ ಕೊತ್ತಂಬರಿ ಕಾಳುಗಳನ್ನು ಜಜ್ಜಿ ಇದಕ್ಕೆ ಹಾಕಿ. ಸ್ವಲ್ಪ ಹೊತ್ತಿಗೆ ನೀರುಳ್ಳಿಯ ನೀರು ಬಿಡುತ್ತೆ. ಇದಕ್ಕೆ ಕಾರದ ಪುಡಿ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ ಕಡಲೆ ಹಿಟ್ಟು ಹಾಕಿ ಬೆರೆಸಿ. ಕಾದ ಎಣ್ಣೆಯಲ್ಲಿ ಕರಿದು ತೆಗೀರಿ. ಕಾಂದಾ ಬಜ್ಜಿ/ ನೀರುಳ್ಳಿ ಬಜ್ಜಿ ರೆಡಿ.





Friday, May 5, 2017

ಸಾಂಬ್ರಾಣಿ ಎಲೆಯ ಚಟ್ನಿ

ಅಡಿಕೆ ಪತ್ರಿಕೆ ನನ್ನ ನೆಚ್ಚಿನ ಪತ್ರಿಕೆ. ಇದು ಪ್ರಾರಂಭವಾದಾಗಿನಿಂದ ನಾವು ಇದಕ್ಕೆ ಚಂದಾದಾರರು, ಸುಮಾರು ೨೫ + ವರ್ಷಗಳೇ ಆದವು. ಇದರಲ್ಲಿನ ಅಡುಗೆಗಳನ್ನು ನಾನು ಮಾಡುತ್ತಿರುತ್ತೇನೆ. ಈ ತಿಂಗಳ ಸಂಚಿಕೆಯಲ್ಲಿ ಸಹನಾ ಕಾಂತಬೈಲ್ ಅವರು ಸಾಂಬ್ರಾಣಿ ಎಲೆಯ ಮೊಸರು ಗೊಜ್ಜು ರೆಸಿಪಿ ಹಾಕಿದ್ದಾರೆ. 
ಅದರ ಬದಲಿಗೆ ನಾನು ಚಟ್ನಿ ಮಾಡುವಾ ಅಂತ ಸಾಂಬ್ರಾಣಿ ಎಲೆಗಳನ್ನು ಕುಂಡದಿಂದ ಆಯ್ದಿಟ್ಟೆ . ಅದಕ್ಕೆ ಬೇಕಾದ ಸಾಮಗ್ರಿ ಗಳನ್ನೂ ತಯಾರು ಮಾಡಿದೆ. ಚಟ್ನಿ ರುಬ್ಬುವಾಗ ಮಾತ್ರ ಯಾಕೋ ಒಂದು ಸಣ್ಣ ಸಂಶಯ . ಬಹುಶ: ಅವರು ಹೇಳಿದ್ದು ದೊಡ್ಡ ಪತ್ರೆ ಎಲೆಗಳೇನೋ ಅಂತ. :-) ಅವರಿಗೆ ಕೇಳುವಾ ಅಂದ್ರೆ ಯಾವ ಉಪಾಯವು ಇಲ್ಲ. ಒಳ್ಳೆ ಫಜೀತಿ ಮಾರಾಯ್ರೇ. ಯಾಕಂದ್ರೆ ಕೊಂಕಣಿಯಲ್ಲಿ ನಾವು ದೊಡ್ಡ ಪತ್ರೆ ಎಲೆಗಳನ್ನು ಸಾಂಬ್ರಾಣಿ ಅನ್ನುವುದುಂಟು. ಪುಟ್ಟ ಮಕ್ಕಳಿಗೆ ಶೀತ ಆದಾಗ ಇದರ ರಸವನ್ನು ಜೇನು ತುಪ್ಪದೊಂದಿಗೆ ನೆಕ್ಕಿಸುತ್ತೇವೆ. ಅಥವಾ ಮಕ್ಕಳಿಗೆ ಕಫ ಕಟ್ಟಿದಾಗ  ಎಲೆಯನ್ನು ನ್ನು ಕಾವಲಿ ಮೇಲೆ ಬಿಸಿ ಮಾಡಿ , ಎಲೆಯನ್ನು ಮಕ್ಕಳ ಎದೆ ಮೇಲೆ ಇಡುವುದುದುಂಟು. ನನ್ನ ಮಕ್ಕಳ ಶೀತ ಜ್ವರಕ್ಕೆಲ್ಲ ನಾನು ಇದನ್ನೇ ಉಪಯೋಗಿಸುತ್ತಿದ್ದೆ,  ಈಗ ಎಷ್ಟು ಜನ ಇದನ್ನು ಪಾಲಿಸ್ತಾರೋ ಗೊತ್ತಿಲ್ಲ. ಹುಷಾರು ತಪ್ಪಿದರೆ ಡಾಕ್ಟರ್ ಬಳಿ ಕರೆದುಕೊಂಡು ಹೋಗುವುದೇ ಹೆಚ್ಚು.ಇರಲಿ ಒಂದು ರುಚಿಯಾದ  'ಹೊಸರುಚಿ ' ಕಂಡುಹಿಡಿದಹಾಗೆ ಆಯ್ತಿತು. 
ನಾನು ಸಾಂಬ್ರಾಣಿ ಗೆಡ್ಡೆಗಳನ್ನು(chinese potato) ಸುಮ್ಮನೆ ಕುಂಡದಲ್ಲಿ ಹಾಕಿಟ್ಟಿದ್ದೆ. ಅದು ಈ ಚಿತ್ರದಲ್ಲಿರುವಂತೆ ಬೆಳೆದಿದೆ ಇದೆ  ಸಾಂಬ್ರಾಣಿ  ಎಲೆಯನ್ನು ಅವರು ಉಲ್ಲೇಖಿಸಿದ್ದು  ಅಂದುಕೊಂಡು  ಚಟ್ನಿ ಮಾಡಿದ್ದೇನೆ . ತುಂಬಾ ರುಚಿಯಾಗಿದೆ ಚಟ್ನಿ. 

ಚಟ್ನಿ ಮಾಡುವ ಬಗೆ 
ಎರಡು ದೊಡ್ಡ ಚಮಚ್ ತೆಂಗಿನ ತೂರಿ, ನಾಲ್ಕೈದು ಹಸಿಮೆಣಸಿನ ಕಾಯಿ, ಸ್ವಲ್ಪ ಸಾಸಿವೆ, ಜೀರಿಗೆ, ಹಿಂಗು, ರುಚಿಗೆ ಉಪ್ಪು, ಸಣ್ಣ ತುಂಡು ಹುಣಸೆ ಹಣ್ಣು. 
ಎಣ್ಣೆಯಲ್ಲಿ ಸಾಸಿವೆ, ಜೀರಿಗೆ ಮತ್ತು  ಹಿಂಗನ್ನು ಬಾಡಿಸಿ. ಇದಕ್ಕೆ ಹಸಿಮೆಣಸಿನಕಾಯಿ, ಸಾಂಬ್ರಾಣಿ ಎಲೆ ಮತ್ತು ಕಾಯಿ ಹೀಗೆ ಅನುಕ್ರಮವಾಗಿ ಹಾಕಿ  ಹುರಿಯಿರಿ, ಹುರಿಯುವುದು ಯಾಕೆಂದರೆ ಸೆಕೆಗೆ ಹಾಳಾಗುತ್ತದೆ. ತಣಿದ ಮೇಲೆ ಹುಣಸೆ ಹುಳಿ , ಉಪ್ಪು ಹಾಕಿ ನುಣ್ಣಗೆ ರುಬ್ಬಿ. ಬೇಕಾದರೆ ಮಜ್ಜಿಗೆ ಬೆರೆಸಿ ನೀರು ಮಾಡಿ, ಸಾಸಿವೆ ಕರಿಬೇವಿನ ಒಗ್ಗರಣೆ ಕೊಡ ಹಾಕಬಹುದು. 
:-) 

Wednesday, March 22, 2017

ಇದು ಕೇಕ್!! ಹಲಸಿನ ಹಣ್ಣು ಅಲ್ಲ

ಈ ಹಲಸಿನ ಹಣ್ಣಿನ ಕೇಕ್ ಗೆ ಮಗಳು ಹಲಸಿನ ಹಣ್ಣಿನ ತುಂಡುಗಳನ್ನು ಫಿಲ್ ಮಾಡಿದ್ದಾಳೆ. ಫೇಸ್ ಬುಕ್ ಪೇಜ್ ಗಳಲ್ಲಿ ಇದು ವೈರಲ್ ಆಗಿದೆ. ಫೇಸ್ ಬುಕ್ ಅಕೌಂಟ್ ಇಲ್ಲದವರಿಗೋಸ್ಕರ ಈ ಚಿತ್ರ ಇಲ್ಲಿ ಹಾಕುತ್ತ ಇದ್ದೇನೆ. :-)
ಇನ್ನೊಮ್ಮೆ ಹೇಳುತ್ತೇನೆ ಬಿಸ್ಕುಟ್ ಫ್ಯಾಕ್ಟರಿ ಯಲ್ಲಿ ತಯಾರಾಗುವ ತಿನಿಸುಗಳಿಗೆ ಮೊಟ್ಟೆ ಬಳಸಲಾಗುವುದಿಲ್ಲ .
ಇನ್ನಷ್ಟು ಕೇಕ್ ಚಿತ್ರಗಳಿಗಾಗಿ ಕೆಳಗಿನ ಲಿಂಕ್ ಮೇಲೆ ಕ್ಲಿಕ್ಕಿಸಿ ಹಾಗು ಲೈಕ್ ಒತ್ತಿ.
ಧನ್ಯವಾದಗಳು


https://www.facebook.com/BiscootFactory/





Biscoot Factory call/WhatsApp 9902825368