ನಮ್ಮ ಮನೆಯಲ್ಲಿ ಹಲವಾರು ಅಡುಗೆ ಪುಸ್ತಕಗಳಿವೆ. ಹೆಚ್ಚಿನವು ಶ್ರೀಕಾಂತ್ ಕೊ0ಡಿದ್ದು. ಈಗಲೂ ಹಿಸ ಪುಸ್ತಕ ತಂದಾಗ ನಾನು 'ಗೊತ್ತಿದ್ದದೆ ಮಾಡಲ್ಲ, ಇನ್ನು ಪುಸ್ತಕ ನೋಡಿ ಮಾಡ್ತೀನಾ? ಅನ್ನೋ ಪ್ರಶ್ನೆನೆ ಯಾವಾಗಲೂ
ಅಂಥದ್ದರಲ್ಲಿ ನಿನ್ನೆ ನನಗೆ ಮಾವಿನ ಹಣ್ಣಿನ ಜಾಮೂನು ಮಾಡುವ ಐಡಿಯಾ ಹೊಳೀತು.
ನಿಹಾ ನಾಲ್ಕು ತಿಂಗಳ ನಂತರ ಬೆಂಗಳೂರಿಗೆ ವಾಪಸ್ ಆಗಳು ಟಿಕೆಟ್ ಬುಕ್ ಮಾಡಿದಾಗ ನಾನು ಆನಂದ್ ಭಾವನ್ ನವರ 'ಗುಲಾಬ್ ಜಾಮೂನ್ ಮಿಕ್ಸ್' ತಂದಿಟ್ಟು ಸ್ವಲ್ಪ ಗುಲಾಬ್ ಜಾಮೂನು ಮಾಡಿದ್ದೆ. ಇನ್ನು ಸ್ವಲ್ಪ ಮಿಕ್ಸ್ ಉಳಿದಿತ್ತು.
ತಡ ಮಾಡದೆ ಉಳಿದ ಜಾಮುನು ಮಿಕ್ಸ್ ಗೆ ಸಕ್ಕರೆ ಪುಡಿ, ಮಾವಿನ ಪಲ್ಪ್ ಸೇರಿಸಿ ಜಾಮೂನು ಮಾಡಿದೆ, ಮಾತ್ರವಲ್ಲ ಕೆಲ ಬಿಸ್ಕೂಟ ಕೂಡ ಮಾಡಿದೆ
ಅಕ್ಕನ ಬಳಿ ಕ್ರೀಮ್ ಪಡೆದು ಅದರಿಂದ ಮಂಗೋ ಕ್ರೀಮ್ ಕೂಡ ಮಾಡಿದೆ
Instagram ಮತ್ತು ವಾಟ್ಸಾಪ್ ನಲ್ಲಿ ಹಾಕಿದ್ದರಿಂದ ಹಲವರಿಗೆ ಇದನ್ನು ಮಾಡುವ ವಿಚಾರ ಬಂದಿದೆ.
ದೊಡ್ಡವಳಿಗೆ ಜಾಮೂನು ಇಷ್ಟವಾದರೆ, ಚಿಕ್ಕವಳಿಗೆ ಬಿಸ್ಕತ್.
No comments:
Post a Comment