ಪತ್ರೊಡೆ ಎಲ್ಲರೂ ಮಾಡಿರುತ್ತೀರಾ. ಈ special ಪತ್ರೊಡೆ ಬಾಣಲೆಯಲ್ಲಿ ಬೇಯಿಸೋದು.
10-12 ಕಪ್ಪು ದಂಟಿನ ಕೆಸುವಿನ ಎಲೆ, ರಾತ್ರಿ ನೆನೆಸಿಟ್ಟ ಅರ್ಧ ಟೇಬಲ್ ಸ್ಪೂನ್ ಹೆಸರುಕಾಳು, ತುರಿದಿಟ್ಟ ತೆಂಗಿನ ಕಾಯಿ, ಹುರಿದ ಕೆಂಪು ಮೆಣಸು, ಹುಣಸೆ, ಉಪ್ಪು, ಹಿಂಗು.
ಮಸಾಲೆ ರುಬ್ಬಿ, ಎಲೆಗಳಿಗೆ ಸವರಿ, ಸುರುಳಿ ಸುತ್ತಿ.
ಬಾಣಲೆಯಲ್ಲಿ ಅಥವಾ ಕುಕ್ಕರ್ ನಲ್ಲಿ ತೆಂಗಿನ ಎಣ್ಣೆಯ ಒಗ್ಗರಣೆಯಲ್ಲಿ ಸಾಸಿವೆ, ಕರಿಬೇವು, ಮೆಂತೆ ಹಿಂಗು...ಇದರಲ್ಲಿ ಸುರುಳಿ ಸುತ್ತಿಟ್ಟ ಪತ್ರೊಡೆ ಇತ್ತು, ಮಿಕ್ಸಿ ತೊಳೆದ ನೀರನ್ನು ಸುರಿದು, ಹತ್ತು ನಿಮಿಷ ಮುಚ್ಚಿಟ್ಟು ಬೇಯಿಸಿ.
ಎರಡು ತುತ್ತು ಹೆಚ್ಚಿಗೆ ಉಣ್ಣಬಹುದು. ನನ್ನ ಇಷ್ಟದ್ದು. ಮುಂಬೈ ನಲ್ಲಿ ಅಮ್ಮ ಆವಾಗವಾಗ ಮಾಡುತ್ತಿದ್ದರು. 36 ವರ್ಷಗಳ ನಂತರ ಮಾಡಿ ತಿಂದಿದ್ದು. ಮಗಳು ತಿಂದು 'ಎಷ್ಟು ರುಚಿಯಾಗಿದೆ, ಇವತ್ತಿನ ವರೆಗೂ ಮಾಡೇ ಇರಲಿಲ್ಲ' ಅಂತ ಹುಸಿ ಕೋಪ ಮಾಡಿಕೊಂಡಳು 😁😁
for step by step instructions click below
No comments:
Post a Comment