Sunday, June 16, 2024

ಜೋಳದ ಹಿಟ್ಟಿನ ದೋಸೆ

  ನನ್ನ ತಿರುಗಾಟ ಸ್ವಲ್ಪ ಜಾಸ್ತಿ ಆಗಿದೆ. 😁.ಮೊನ್ನೆ ಡ್ರಮ್ ನಲ್ಲಿ ಒಂದು ಪೊಟ್ಟಣ ಜೋಳದ ಹಿಟ್ಟು ನೋಡಿದೆ. ಅದು ಹಾಳಾಗುವ ಮುಂಚೆ ಉಪಯೋಗಿಸಬೇಕು ಅಂದು ಕೊಂಡೆ.

ಒಂದರ್ಧ ಗ್ಲಾಸ್ ಉದ್ದಿನ ಬೇಳೆ

ಅರ್ಧ ಗ್ಲಾಸ್ ಕೆಂಪಕ್ಕಿ

2 ಗಂಟೆ ನೆನೆ ಹಾಕಿದೆ.

ನುಣ್ಣಗೆ ರುಬ್ಬಿ ಅದಕ್ಕೆ ಮೂರು ಗ್ಲಾಸ್ ಜೋಳದ ಹಿಟ್ಟು ಸೇರಿಸಿ ಪುನಃ ಮಿಕ್ಸಿ ಹಾಕಿದೆ.

ಉಪ್ಪು ಬೆರೆಸಿಟ್ಟೇ. 8 ಗಂಟೆಯ ನಂತರ ಒಳ್ಳೆಯ ಹುದುಗೂ ಬಂದಿತ್ತು

ರುಚಿ ರುಚಿಯಾದ ದೋಸೆ ತಯಾರಾಯಿತು. 👍❤️. ಎಷ್ಟು ರುಚಿಯಾಗಿತ್ತು ಅಂದ್ರೆ ರಾತ್ರಿಗೂ ಅದೇ ತಿಂದ್ವಿ...








Tuesday, April 16, 2024

ಶ್ರೀ ರಾಮನವಮಿ..ಪಾನಕ ಕೋಸಂಬರಿ

 



ರಾಮ ನವಮಿ ಬೇಸಿಗೆಯಲ್ಲಿ ಬರುವುದು. ದೇಹ ತಂಪಾಗಿರಿಸಲು ಪಾನಕ ಮತ್ತು ಕೋಸಂಬರಿ ಮಾಡುತ್ತೇವೆ. 

ಪಾನಕ:

ನೀರು, ಬೆಲ್ಲ, ನಿಂಬೆ ಹಣ್ಣು, ಶುಂಠಿ, ಕರಿಮೆಣಸಿನ ಕಾಳು, ಏಲಕ್ಕಿ.

 ನೀರಲ್ಲಿ ಬೆಲ್ಲ ಹಾಕಿಡಿ. ಕರಗಿದ ಮೇಲೆ ಸೋಸಿಡಿ.

ಇದಕ್ಕೆ ಕುಟ್ಟಿದ ಏಲಕ್ಕಿ, ಕರಿಮೆಣಸಿನ ಕಾಳು ಮತ್ತು ಶುಂಠಿ ಜಜ್ಜಿ ಹಾಕಿ. 

ನಿಂಬೆ ರಸ ಬೆರೆಸಿ.

ಪಾನಕ ರೆಡಿ. 

ಕೋಸಂಬರಿ:

ಚೆನ್ನಾಗಿ ತೊಳೆದು, ಎರಡು ಗಂಟೆ ನೀರಲ್ಲಿ ನೆನೆಸಿಟ್ಟ ಹೆಸರು ಬೇಳೆ

ತುರಿದ ಹಸಿ ಮಾವಿನಕಾಯಿ + ಸೌತೆ ಕಾಯಿ, ಸಣ್ಣಕ್ಕೆ ಕತ್ತರಿಸಿದ ಹಸಿ ಮೆಣಸಿನ ಕಾಯಿ

ಒಗ್ಗರಣೆಗೆ : ಎಣ್ಣೆ ಸಾಸಿವೆ ಕರಿಬೇವು ಹಿಂಗು

ತುರಿದ ತಾಜಾ ತೆಂಗಿನಕಾಯಿ + ಕೊತ್ತಂಬರಿ ಸೊಪ್ಪು

ಉಪ್ಪು

ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ ಒಗ್ಗರಣೆ ಹಾಕಿ, ಮೇಲೆ ಕಾಯಿ ತುರಿ, ಕೊತ್ತಂಬರಿ ಸೊಪ್ಪು ಉದುರಿಸಿ

ಅಷ್ಟೇ...😀😀

Friday, April 5, 2024

ಐಸ್ದ ಟೀ / iced tea

 


make normal tea without milk. once it cools down add sugar and lemon juice and ice cubes. give it a good shake in a mixer jar or shaker..transfer to bigger glass. top with mint leaves and serve 👍👍

Monday, March 11, 2024

ಎಳೆ ಗೇರು ಬೀಜದ ಪಲ್ಯ

 ಬೇಸಿಗೆ ಅಂದ್ರೆ ಗೇರು ಹಣ್ಣುಗಳು. ಈ ಸಲ ನಮ್ಮ ತೀರ್ಥಹಳ್ಳಿಯ ತೋಟದಲ್ಲಿ ಗೇರು ಹಣ್ಣಿನ ಸುಗ್ಗಿ. ಹಣ್ಣಾಗುವ ಮುಂಚೆ ಗೇರು ಬೀಜ ತೆಗೆದ್ರೆ ಅದೇ ಎಳೆ ಗೇರು ಬೀಜ. ತುಂಬಾ ರುಚಿಯಾಗುರುತ್ತೆ.

          ನಮಗೆ ಪೂರಿ ಜತೆ ಈ ಪಲ್ಯ ಇಷ್ಟ

ಬಿಸಿ ಎಣ್ಣೆಯಲ್ಲಿ ಸಾಸಿವೆ, ಕರಿಬೇವು, ಹಸಿ ಮೆಣಸಿನಕಾಯಿ, ಒಣ ಮೆಣಸಿನಕಾಯಿ ಹಿಂಗು ಒಗ್ಗರಣೆ ಆದಮೇಲೆ ಇದಕ್ಕೆ ಗೇರು ಬೀಜ ಹಾಕಿ, ಉಪ್ಪು, ಸ್ವಲ್ಪವೇ ನೀರು ಹಾಕಿ ಬೆಯ್ಸಿ. ಬೇಕಿದ್ದಲ್ಲಿ  ಚೂರು ಬೆಲ್ಲ ಸೇರಿಸಬಹುದು.

ಕೊನೆಗೆ ತಾಜಾ ತೆಂಗಿನ ತುರಿ ಬೆರೆಸಿ. ಉಪ್ಕರಿ/ಪಲ್ಯ ತಯಾರು 👍👍❤️






Friday, February 16, 2024

ಬಿಸಿ ನೀರಸಾರು

 aka ನಿಂಬೆ ಹಣ್ಣಿನ ಸಾರು. ಎರಡು ತುತ್ತು ಹೆಚ್ಚಿಗೆ ಉಂಡು ನನ್ನ ಬೈ ಬೇಡಿ ಮತ್ತೆ 😀❤️



ತುಂಬಾ ಸರಳ ಮಾಡುವ ವಿಧಾನ. ರುಚಿ.ಕೂಡ...ಒಳ್ಳೆ ಪರಿಮಳಯುಕ್ತ ನಿಂಬೆ ಬೇಕೇ ಬೇಕು....
ಸಾಸಿವೆ, ಜೀರಿಗೆ ,ಕರಿಬೇವು, ಹಿಂಗು, ಹಸಿ ಮೆಣಸು, ಒಣ ಮೆಣಸು - ತುಪ್ಪದಲ್ಲಿ ಒಗ್ಗರಣೆ,ಉಪ್ಪು, ಹೌದೋ ಅಲ್ಲವೋ ಬೆಲ್ಲ. ಎರಡು ಗ್ಲಾಸ್ ನೀರು ಹಾಕಿ ಕುದಿಸುವುದು. ಊಟಕ್ಕೆ ಮುಂಚೆ ಈ ಸಾರಿಗೆ ನಿಂಬೆ ಹಣ್ಣಿನ ರಸ ಹಿಂಡುವುದು.

Wednesday, June 17, 2020

ಮಾವಿನ ಹಣ್ಣಿನ ಜಾಮೂನು

ನಮ್ಮ ಮನೆಯಲ್ಲಿ ಹಲವಾರು ಅಡುಗೆ ಪುಸ್ತಕಗಳಿವೆ. ಹೆಚ್ಚಿನವು ಶ್ರೀಕಾಂತ್ ಕೊ0ಡಿದ್ದು. ಈಗಲೂ ಹಿಸ ಪುಸ್ತಕ ತಂದಾಗ ನಾನು 'ಗೊತ್ತಿದ್ದದೆ ಮಾಡಲ್ಲ, ಇನ್ನು ಪುಸ್ತಕ ನೋಡಿ ಮಾಡ್ತೀನಾ? ಅನ್ನೋ ಪ್ರಶ್ನೆನೆ ಯಾವಾಗಲೂ
ಅಂಥದ್ದರಲ್ಲಿ ನಿನ್ನೆ ನನಗೆ ಮಾವಿನ ಹಣ್ಣಿನ ಜಾಮೂನು ಮಾಡುವ ಐಡಿಯಾ ಹೊಳೀತು.
ನಿಹಾ ನಾಲ್ಕು ತಿಂಗಳ ನಂತರ ಬೆಂಗಳೂರಿಗೆ ವಾಪಸ್ ಆಗಳು ಟಿಕೆಟ್ ಬುಕ್ ಮಾಡಿದಾಗ ನಾನು ಆನಂದ್ ಭಾವನ್ ನವರ 'ಗುಲಾಬ್ ಜಾಮೂನ್ ಮಿಕ್ಸ್' ತಂದಿಟ್ಟು ಸ್ವಲ್ಪ ಗುಲಾಬ್ ಜಾಮೂನು ಮಾಡಿದ್ದೆ.  ಇನ್ನು ಸ್ವಲ್ಪ ಮಿಕ್ಸ್ ಉಳಿದಿತ್ತು.

ತಡ ಮಾಡದೆ ಉಳಿದ ಜಾಮುನು ಮಿಕ್ಸ್ ಗೆ ಸಕ್ಕರೆ ಪುಡಿ, ಮಾವಿನ ಪಲ್ಪ್ ಸೇರಿಸಿ ಜಾಮೂನು ಮಾಡಿದೆ, ಮಾತ್ರವಲ್ಲ ಕೆಲ ಬಿಸ್ಕೂಟ ಕೂಡ ಮಾಡಿದೆ
ಅಕ್ಕನ ಬಳಿ ಕ್ರೀಮ್ ಪಡೆದು ಅದರಿಂದ ಮಂಗೋ ಕ್ರೀಮ್ ಕೂಡ ಮಾಡಿದೆ
Instagram ಮತ್ತು ವಾಟ್ಸಾಪ್ ನಲ್ಲಿ ಹಾಕಿದ್ದರಿಂದ ಹಲವರಿಗೆ ಇದನ್ನು ಮಾಡುವ ವಿಚಾರ ಬಂದಿದೆ.
ದೊಡ್ಡವಳಿಗೆ ಜಾಮೂನು ಇಷ್ಟವಾದರೆ, ಚಿಕ್ಕವಳಿಗೆ ಬಿಸ್ಕತ್.







Sunday, April 26, 2020

ಅಪ್ಪೆ ಸಾರು

ಇನ್ನು ಮಾವಿನಕಾಯಿ ಮಾವಿನ ಹಣ್ಣಿನ season ಶುರು.
ಪರಿಮಳ ಯುಕ್ತ ಮಾವಿನ ಕಾಯಿಯನ್ನು ನೀರಲ್ಲಿ ಬೇಯಿಸಿ. ಇದಕ್ಕೆ ಹಸಿ ಮೆಣಸಿನ ಕಾಯಿ, ಹಿಂಗು ಸೇರಿಸಿ ಎಲ್ಲವನ್ನೂ ನುಣ್ಣಗೆ ರುಬ್ಬಿ.  ತೆಂಗಿನ ಎಣ್ಣೆ ಕೊನೆಯಲ್ಲಿ ಸೇರಿಸಿ. ಅಥವಾ ಸಾಸಿವೆ, ಜೀರಿಗೆ, ಕರಿಬೇವಿನ, ಒಣ ಮೆಣಸಿನ ಒಗ್ಗರಣೆ ಹಾಕಿ. ಸೂಪ್ ತರಹ ಸೇವಿಸಬಹುದು ಅಥವಾ ಅನ್ನಕ್ಕೆ ಕಲಿಸಿ ಉಣ್ಣ ಬಹುದು.
ಅಪ್ಪೆಮಿಡಿ ಉಪ್ಪಿನಕಾಯಿಗೆ ಹಾಕಲು ತಂದಿದ್ದೆವು. ಅದರಲ್ಲಿ ಏಟಾದ ಕೆಲವು ಕಾಯಿ ಇತ್ತು. ಅದನ್ನು ಉಪಯೋಗಿಸಿ ಅಪ್ಪೆ ಸಾರು ಮಾಡಿದ್ದು