:-) ಅಂತೂ ಇಂತೂ ನಮ್ಮ ಸ್ವಂತ ಮನೆಗೆ ಬಂದಾಯ್ತು. ಇಂಟರ್ ನೆಟ್ ಕೂಡ ಕನೆಕ್ಟ್ ಆಯ್ತು. ಬಾಲಕ್ನಿಯಿಂದ ನೋಡುತ್ತಾ ಸಮಯ ಉಳಿದರೆ ಬ್ಲಾಗಿಂಗ್. ನಿನ್ನೆ ರಾತ್ರಿ ನಾವು ಬಾಲ್ಕನಿಯಲ್ಲಿ ತಂಡೂರ್ ಮಾಡಿ ಪನೀರ್ ಕುಲ್ಚಾ ಮಾಡಿದೆವು
ಬೇಕಾಗುವ ಪದಾರ್ಥ: ಮೈದಾ, ಅಡುಗೆ ಸೋಡಾ, ಮೊಸರು ಸ್ವಲ್ಪ ಬಿಸಿ ಹಾಲು, ಪನೀರ್, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಖಾರದ ಪುಡಿ, ಉಪ್ಪು, ಚಾಟ್ ಮಸಾಲಾ
ಮೈದಾ ಹಿಟ್ಟನ್ನು ಮಧ್ಯಾಹ್ನ ಕಲಸಿ ಇಟ್ಟೆವು. (ಮಾಡಿದೆವು, ಇಟ್ಟೆವು = ನಾನು + ಮಗಳು ಮಾಲವಿಕಾ ಜಂಟಿ operationಉ :-)) ಮೈದಾ ಹಿಟ್ಟಿಗೆ, 2 ಟೇ ಸ್ಪೂನ್ ಅಡುಗೆ ಸೋಡಾ,ಉಪ್ಪು ಅರ್ಧ ಗ್ಲಾಸ್ ಮೊಸರು ಮಿಕ್ಸ್ ಮಾಡಿಕೊಳ್ಳಿ. ಉಗುರು ಬೆಚ್ಚನೆಯ ನೀರಿನಿಂದ ಸ್ವಲ್ಪ ಮೆತ್ತನೆಯ dough ತಾಯಾರಿಸಿಕೊಳ್ಳಿ. ಸಂಜೆ ಆಗುವಷ್ಟರಲ್ಲಿ ಅದು ಎರಡು ಪಟ್ಟು ಉಬ್ಬ್ಬಿರುತ್ತೆ.
ಕುಲ್ಚಾ ತಯಾರಿಸುವ ಅರ್ಧ ಗಂಟೆ ಮುಂಚೆ ಪನೀರ್ ಫ್ರಿಡ್ಜ್ ನಿಂದ ತೆಗೆದು ತುರಿದಿಟ್ಟುಕೊಳ್ಳಿ. ಇದಕ್ಕೆ ಸಣ್ನಕ್ಕೆ ಕತ್ತರಿಸಿದ ಹಸಿಮೆಣಸಿನಕಾಯಿ, ಕೊತ್ತಂಬರಿಸೊಪ್ಪು,ಸಣ್ಣಕ್ಕೆ ತುರಿದಿಟ್ಟ ಬೆಳ್ಳುಳ್ಳಿ, ಶುಂಠಿ, ಉಪ್ಪು, ಚಾಟ್ ಮಸಲಾ ಮಿಕ್ಸ್ ಮಾಡಿ.
ನಂತರ ಮೈದಾ ಹಿಟ್ಟಿನ ಉರುಟು ಮಾಡಿಕೊಳ್ಳಿ. ಅದನ್ನು ಸಣ್ಣಕ್ಕೆ ಲಟ್ಟಿಸಿ ಅದರಲ್ಲಿ ಪನೀರ್ ನ ಸ್ಟಂಫಿಂಗ್ ಇಡಿ. ಈ ರೀತಿ ಮಾಡಿಟ್ಟು ಒಂದೈದು ನಿಮಿಷ ಹಾಗೇ ಇಟ್ಟು ಬಿಡಿ.
ಈಗ ತೆಂಗಿನ ಕರಟನ್ನು ಗ್ಯಾಸ್ ಸ್ಟವ್ ಮೇಲಿಟ್ಟು ಬೆಂಕಿ ತಾಗುವ ತನಕ ಇಡಿ. ಇದನ್ನು ಶೆಗಡಿಗೆ ವರ್ಗಾಯಿಸಿ ಮೂರು ನಾಲ್ಕು ಕರಟ ಇಟ್ಟು ಬೆಂಕಿ ತಾಗಿ ಸ್ವಲ್ಪ ಹೊತ್ತಿನಲ್ಲಿ ಅದು embers ಆಗಿ ಬಿಡುತ್ತೆ.
ಅದರ ಮೇಲೆ ಈ ತರಹದ ಒಂದು ಸ್ಟ್ಯಾಂಡ್ ಸಿಗುತ್ತೆ. ನಾನು ಇದನ್ನು ಮಲ್ಲೇಶ್ವರಂ ನಲ್ಲಿ ತೆಗೊಂಡಿದ್ದು. ಶಿಗಡಿ ಮೇಲಿಡಿ.
ಒಂದೊಂದೆ ಕುಲ್ಚಾ ಲಟ್ಟಿಸಿ ಇದರ ಮೇಲಿಡಿ ಎರಡು ಬದಿ ಕೆಂಪಗಾಗುವ ತನಕ ಬೇಯಿಸಿ.
ತಾಜಾ ಮೊಸರು, ಲಿಂಬೆ ಹಣ್ಣಿನ ಉಪ್ಪಿನಕಾಯಿಯೊಂದಿಗೆ ಸರ್ವ್ ಮಾಡಿ. ನಮ್ಮ ಮನೆಯಲ್ಲಿ ಇದನ್ನು ಸ್ಟಫ್ಡ್ ಬದನೆಕಾಯಿ ಜತೆ ಸರ್ವ್ ಮಾಡಿದ್ದು,
ತುಂಬಾ ಎಂಜಾಯ್ ಮಾಡಿದ್ವಿ, ಯು ಎಸ್, ಮುಂಬೈ. ಬೆಳಗಾವಿ ಯಲ್ಲಿರುವ ತಂಗಿ ತಮ್ಮಂದಿರಿಗೆಲ್ಲ ವಾಟ್ಸ್ಯಾಪ್ ನಲ್ಲಿ ಫೋಟೊ ತೆಗೆದು ಕಳಿಸಿ ಹೊಟ್ಟೆ’ಕಿಚ್ಚಾ’ಗುವಂತೆ ಮಾಡಿದೆ.
ಶೆಗಡಿಯಿಲ್ಲದಿದ್ದಲ್ಲಿ ಮಾಮೂಲಿ ತವಾ ಮೇಲೆ ಚಪಾತಿಯಂತೆ ಬೇಯಿಸಬಹುದು.
:-)
6 comments:
Malathi, I think your neighbours will be envying you too. They wouldn't have thought balcony could do as makeshift kitchen :-)
ಚೆನ್ನಾಗಿದೆ... ಚಪಾತಿ ಲಟ್ಟಿಸುವ ಮಣೆ ಎಲ್ಲಿ ತೊಗೊಂಡಿದ್ದು ?ಅದು ಅಲ್ಯುಮಿನಿಯಂ ದಾ ? ಡಿಟೇಲ್ಸ್ ಪ್ಲೀಸ್ :)
ಬೆಳಿಗ್ಗೆ ಹೊಟ್ಟೆಯಲ್ಲಿ ಇಲಿ ಓಡಾಡುವಂತೆ ಮಾಡಿದ ಸುಂದರ ಲೇಖನ.. ರುಚಿಯಾದ ತಿನಿಸನ್ನು ಮಾಡುವುದೇ ಅಲ್ಲದೆ ಅದರ ಫೋಟೋಗಳನ್ನು ತೆಗೆಯುವಷ್ಟು ತಾಳ್ಮೆ ಇದೆ.. ಹಾಗಾಗೆ ನಿಮ್ಮ ಲೇಖನ ಓದುತ್ತಾ ಕಣ್ಣುಗಳು ಆಸೆ ಭರಿತವಾಗಿ ಅಡುಗೆ ಮನೆ ಕಡೆ ಓದಲು ಪ್ರಯತ್ನಿಸಿದರೆ.. ಹೊಟ್ಟೆ ತಾಳ ಹಾಕಲು ಶುರುಮಾಡುತ್ತದೆ..
ಇನ್ನು ನಿರಂತರ ಭೇಟಿ ನಿಮ್ಮ ಅಡುಗೆ ಬ್ಲಾಗಿಗೆ.. ಹುರ್ರೇ
Radhika: the residents of the building opposite to us could catch a glimpse of what we were upto. to be frank i was scared that somebody might phone the fire department. :-)
Swarna: adu hindalium. almost 26 years old. mumbai nalli kharidisiddu. :-)
Srikanth Manjunath: khanDita nODi enjoy maaDi
:-)
malathi S
good one..I just grate paneer and add to chapati powder before mixing the dough..and prepare paneer chapathi, comes out good :)..and even I do have hindaliyam chapathi mane..Malati Akka, Its available in Mangalore..Do pass on my message to ur friend, swarna :)
Post a Comment