ಮೈಸೂರಿನವರಿಗೂ ಗೊತ್ತಿದೆಯೋ ಇಲ್ವೋ ಈ ಬೋಂಡಾ... :-) ಈ ರೆಸಿಪಿ ಸಿಕ್ಕಿದ್ದು ಯು ಟ್ಯೂಬ ನಲ್ಲಿ, ಅದೂ ಹೊರದೇಶದಲ್ಲಿರುವ ಮಹಿಳೆಯೊಬ್ಬರು ಮಾಡಿದ್ದು. ತುಂಬ ಸುಲಭ ಮಾತ್ರವಲ್ಲ, ಇದರಲ್ಲಿ ನೀರುಳ್ಳಿ ಇಲ್ಲ. ಒಂದು ನೀರುಳ್ಳಿ ಬೆಲೆ ಗಗನಕ್ಕೇರಿದೆ, ಮತ್ತು ಈಗ ಶ್ರಾವಣ ಮಾಸ ಕೂಡ. ಹೆಚ್ಚಿನ ಜನರು ನೀರುಳ್ಳಿ ಬೆಳ್ಳುಳ್ಳಿ ಬಳಸಲ್ಲ. ಅವರಿಗೆ ಹೇಳಿ ಮಾಡಿಸಿದಂತಿದೆ ಈ ಖಾದ್ಯ.
ತುಂಬಾ ಅಂದ್ರೆ ತುಂಬಾನೇ ಸಿಂಪಲ್. ಬೇಕಾಗಿರುವುದು ಒಂದು ಬಟ್ಟಲು ಮೈದಾ, ಒಂದು ಬಟ್ಟಲು ಅಕ್ಕಿ ಹಿಟ್ಟು, ಸ್ವಲ್ಪ ಅಡುಗೆ ಸೋಡಾ, ಮೊಸರು, ಉಪ್ಪು ಸಣ್ಣಕ್ಕೆ ಕತ್ತರಿಸಿದ ಹಸಿಮೆಣಸಿನಕಾಯಿ, ಶುಂಠಿ, ಮತ್ತು ಕೊತ್ತಂಬರಿ ಸೊಪ್ಪು. ಎಲ್ಲವನ್ನೂ ನೀರು ಬೆರಸಿ ಚೆನ್ನಾಗಿ ಮಿಕ್ಸ್ ಮಾಡಿ. ದೋಸೆ ಹಿಟ್ಟಿ ಗಿಂತ ದಪ್ಪ ವಾಗಿರಲಿ ಮಿಶ್ರಣ. ಹತ್ತು ನಿಮಿಷ ಬಿಟ್ಟು ಬಿಸಿ ಎಣ್ಣೆಯಲ್ಲಿ ಕರಿದು ತೆಗೆಯಿರಿ. ಇದರ ಹೊರ ಕವಚ ಗರಿಗರಿಯಾಗಿದ್ದು, ಒಳಗಡೆ ಬ್ರೆಡ್ ತರಹ ಸಾಫ್ಟ್ ಆಗಿರುತ್ತೆ.
ಎಂಜಾಯ್ , ಇವತ್ತು ಅಥವಾ ನಾಳೆನೇ ಟ್ರೈ ಮಾಡಿ. :-) ಅದಕ್ಕೆ ಈಗಲೇ ಬರೆದು ಹಾಕಿದೆ.