ನಿಹಾರಿಕಾಳಿಗೆ ಶನಿವಾರ ಅರ್ಧ ದಿನ ಕೆಲಸ. ಮನೆಗೆ ಬಂದ ಕೂಡಲೆ ಅವಳು ಕೇಳುವ ಪ್ರಶ್ನೆ....ಆಜ್ ಖಾನೆ ಮೆ ಕ್ಯಾ ಮಜೇದಾರ್ ಹೈ’ ಅಂತ. ಮಾಲವಿಕಾಗೆ ಪುರುಸೊತ್ತಾದಾಗ ಏನಾದರೂ ಹೊಸ ಅಡುಗೆ ಮಾಡ್ತಾಳೆ. ಇವತ್ತು ಮಾಡಿದ್ದು ಚಪಾತಿ ಪೊಕೆಟ್
ಇದಕ್ಕೆ ಬೇಕಾಗಿರುವುದು ತೆಳ್ಳನೆ ಲಟ್ಟಿಸಿದ ಚಪಾತಿ, ಮಿಕ್ಸ್ ತರಕಾರಿ ಸಾssಟೇ (sauteed), hung curd sauce, ಎರಡು ಸ್ಪೂನ್ ಅನ್ನ, shredded ಕ್ಯಾಬೇಜು
*sauteed vegetables ಗೆ : ಸ್ವಲ್ಪ ಕೆಂಪು ಕ್ಯಾಪ್ಸಿಕಮ್, ಬೇಬಿ ಕಾರ್ನ್, ಬೀನ್ಸ್, ಬೋಂಡಾ ಮೆಣಸಿನಕಾಯಿ (ಲೊನ್ಗ್ ಗ್ರೀನ್ ವೈರೈಟಿ)....ಎಣ್ಣೆಯಲ್ಲಿ ಸ್ವಲ್ಪ ಕಾಳುಮೆಣಸು, ಉಪ್ಪು, ಸಕ್ಕರೆ ಹಾಕಿ ದೊಡ್ಡ ಬೆಂಕಿ ಮೇಲೆ ಸಾಫ್ಟ್ ಆಗೋ ತನಕ ಹುರಿಯೋದು ಕೊನೆಗೆ ಪಿಟ್ಜಾ ಸೀಸನಿಂಗ್ ಹಾಕಿ
*ಸಾಸ್: ಅರ್ಧ ಗಂಟೆ ಕಟ್ಟಿಟ್ಟ ಮೊಸರು + ಕೊತ್ತಂಬರಿ ಸೊಪ್ಪು+ ಹಸಿಮೆಣಸಿನಕಾಯಿ ಪೇಸ್ಟ್, ಉಪ್ಪು, ಸಕ್ಕರೆ- ಚೆನ್ನಾಗಿ ಬ್ಲೆಂಡ್ ಮಾಡಿ
*ಕ್ಯಾಬೇಜ್ ಅನ್ನು ಶ್ರೆಡ್ ಮಾಡಿ (ತೆಳು ಉದ್ದದ್ದ ಕಟ್), ಚಿಲಿಫ್ಲೇಕ್ಸ್, ಬ್ರೌನ್ ಶುಗರ್, ವಿನೇಗರ್, ಉಪ್ಪು..ಹಾಕಿ ಮಿಕ್ಸ್ ಮಾಡಿಡಿ
ಚಪಾತಿ ಹಿಟ್ಟು ಎಣ್ಣೆ ಹಾಕಿ ಕಲಿಸಿ. ತೆಳ್ಳಗಿನ ಚಪಾತಿ ಲಟ್ಟಿಸಿ. ಎಣ್ಣೆ ಹಾಕದೆ ತವಾ ಮೇಲೆ ಬೇಯಿಸಿ. ಬೆಂದರೆ ಸಾಕು. ಬಣ್ಣ ಬರೋದು ಬೇಡ. ಆ ಚಪಾತಿ ಮಧ್ಯದಲ್ಲಿ ತರಕಾರಿ ಮಿಶ್ರಣ, ಅದರ ಮೇಲೆ ಎರಡು ಚಮಚ ಅನ್ನ, ಎರಡು ಸ್ಪೂನ್ ಸಾಸ್, ಕ್ಯಾಬೆಜ್ ಮಿಶ್ರಣ ಇಟ್ಟು, ಚಪಾತಿ ಚೌಕ್ (square) ಆಗುವಂತೆ ಫೋಲ್ಡ್ ಮಾಡಿ. (ಹೀಗೆ ಇನ್ advance ಮಾಡಿಡಬಹುದು) ಈಗ ಕಾವಲಿಗೆ ಎಣ್ಣೆ ಹಾಕಿ ಈ ಚೌಕಾಕಾರದ ಚಪಾತಿ ಅದರ ಮೇಲೆ ಇಟ್ಟು ಫ್ರೈ ಮಾಡಿ. ಕೆಂಪು ಬಣ್ಣ ಬಂದ ಮೇಲೆ ಕೆಳಗಿಳಿಸಿ, Diagonally ಕಟ್ ಮಾಡಿ. ನಿಮಗೆ ಬೇಕಾದ ರೀತಿ ಸಿಂಗರಿಸಿ, ಟೊಮ್ಯಾಟೋ ಸಾಸ್ ನೊಂದಿಗೆ ಸೆರ್ವ್ ಮಾಡಿ..
:-)
3 comments:
Liked this recipe.Will try for my son some time. Thanks for sharing it madam
sure Swarna. thanks for dropping by
:-)
ms
Wow, interesting, Malathi akka! Looks yum too. Will try this for sure. Thanks to Malavika for the recipe and to you for posting it :)
Pratima
Post a Comment