ಬೇಕಾಗುವ ತರಕಾರಿಗಳು : ಕ್ಯಾಬೇಜ್, ಬೀನ್ಸ್, ದೊಣ್ಣ (ದಪ್ಪ) ಮೆಣಸಿನಕಾಯಿ, ಕ್ಯಾರೆಟ್
ಒಗ್ಗರಣೆಗೆ : ಎಣ್ಣೆ, ಸಾಸಿವೆ, ಜೀರಿಗೆ, ಉದ್ದಿನಬೆಳೆ, ಕೆಂಪು ಮೆಣಸು
ಒಗ್ಗರಣೆಗೆ : ಎಣ್ಣೆ, ಸಾಸಿವೆ, ಜೀರಿಗೆ, ಉದ್ದಿನಬೆಳೆ, ಕೆಂಪು ಮೆಣಸು
ತರಕಾರಿಗಳನ್ನು ಚೆನ್ನಾಗಿ ತೊಳೆದು ಚಿಕ್ಕದಾಗಿ ಹೆಚ್ಚಿಡಿ.
ನಾನ್ ಸ್ಟಿಕ್ ಬಾಣಲೆಯಲ್ಲಿ ಸ್ವಲ್ಪ ಹೆಚ್ಚೇ ಎಣ್ಣೆ ಒಗ್ಗರಣೆಗೆ ಇಡಿ. ಎಣ್ಣೆ ಬಿಸಿಯಾದೊಡನೆ ಕ್ರಮಾವಾಗಿ ಉದ್ದಿನ ಬೇಳೆ, ಸಾಸಿವೆ, ಜೀರಿಗೆ, ಕೆಂಪು ಮೆಣಸು ಹಾಕಿ. ಮೊದಲಿಗೆ ದೊಣ್ಣ ಮೆಣಸಿನಕಾಯಿ ಹಾಕಿ ಕೈಯಾಡಿಸಿ, ನಂತರ ಉಳಿದ ತರಕಾರಿ, ಉಪ್ಪು ಹಾಕಿ ದೊಡ್ಡ ಉರಿಯಲ್ಲಿ ಇಟ್ಟು ಕೈಯಾಡಿಸ್ತಾ ಇರಿ. ನಂತರ ಉರಿ ಸಣ್ಣ ಮಾಡಿ ಬಾವಡಿಯಿಂದ ಮುಚ್ಚಿಐದು ನಿಮಿಷ ಬೇಯಿಸಿ. ತರಕಾರಿ ಕ್ರಿಸ್ಪ್ ಆಗಿರಬೇಕು. ನೀರು ಹಾಕ ಬೇಡಿ.
ಚಪಾತಿ ಮೊಸರನ್ನ್ನಕ್ಕೆ ಒಳ್ಳೆಯ ಸಾಥ್. ಬಣ್ಣ ಬಣ್ಣವಾಗಿರುವುದರಿಂದ ಮಕ್ಕಳಿಗೂ ಇದು ಇಷ್ಟ ಆಗುತ್ತೆ.
ಮಿಶ್ರ ತರಕಾರಿ ಪಲ್ಯ ರೆಡಿ
No comments:
Post a Comment