ಇದು ನನ್ನ ಮಗಳ ಇಷ್ಟದ ಪದಾರ್ಥ. ನನ್ನ ಇಬ್ಬರೂ ಮಕ್ಕಳು ಜಂಕ್ ಫುಡ್ ಎಂಜಾಯ್ ಮಾಡುವಷ್ಟೆ ನಮ್ಮ ಸಾಂಪ್ರದಾಯಿಕ ಅಡುಗೆಗಳನ್ನು ಇಷ್ಟ ಪಡುತ್ತಾರೆ ಆದ್ದರಿಂದ ಮಾಡಲೂ ಹುಮ್ಮಸ್ಸು ಬರುತ್ತದೆ. ಈಗಂತೂ ಮಾವಿನಕಾಯಿಯ ಸೀಸನ್. ನನ್ನ ಅಜೋಬಾ ಯಾವಾಗ್ಲೂ ಹೇಳೋವ್ರು, ಆಯಾ ಸೀಸನ್ ನ ಫುಡ್ ಕನ್ಸ್ಯೂಮ್ ಮಾಡಿದ್ರೆ ಯಾವ ಕಾಯಿಲೆ-ಕಸಾಲೆನೂ ಹತ್ತಿರ ಸುಳಿಯಲ್ಲ ಅಂತ.
ಮಾವಿನ ಕಾಯಿ ಹಾಗೂ ಆಲೂಗಡ್ಡೆಯನ್ನು ಚೆನ್ನಾಗಿ ಬೇಯಿಸಿ ಮ್ಯಾಶ್ ಮಾಡಿ. ಹಸಿ ಮೆಣಸಿನಕಾಯಿ ಜಜ್ಜಿ ಹಾಕಿ
ಉಪ್ಪು, ಹಿಂಗು ನೀರು ಬೆರೆಸಿ. ಸಾಸಿವೆ ಕರಿಬೇವಿನ ಒಗ್ಗರಣೆ ಕೊಡಿ. ಸುಲಭ ಮಾತ್ರವಲ್ಲ ರುಚಿಯಾಗಿರುತ್ತೆ. ಬಿಸಿ ಅನ್ನ ಸೇರಿಸಿ ತಿಂದರೆ ಒಂದು ತುತ್ತು ಜಾಸ್ತಿನೇ ಉಣ್ಣ ಬಹುದು.:-)
No comments:
Post a Comment