Saturday, March 29, 2014

ನಾನ್ ಕತಾಯ್ / ನಾರಯಣ ಕಟಾರ್/ನಾನ್ ಕಟಾಯ್

ಮಾಡುವ ಬಗೆ ನನ್ನ ಇನ್ನೊಂದು ಬ್ಲಾಗ್ ನಲ್ಲಿ. ಕೆಳಗಿನ ಕೊಂಡಿ ಕ್ಲಿಕ್ ಮಾಡಿ

ನಾನ್ ಕತಾಯ್

Monday, March 24, 2014

ಮೈಕ್ರೋವೇವ್ ನಲ್ಲಿ ಈ ಬಾರಿ ಅಗಸೆ ಚಟ್ನಿ ಪುಡಿ

ಅಗಸೆ ಮೆಮರಿ ಪವರ್ ಗೆ ಒಳ್ಳೆದು ಅಂತ ಹೇಳುತ್ತಾರೆ ಹಾಗೂ ಪೈಲ್ಸ್ ಗೆ ಒಳ್ಳೆಯ ಔಷಧಿ ಕೂಡ. ನಾನಂತು ಅಗಸೆ ಚಟ್ನಿ ಪುಡಿಯ ಟೇಸ್ಟ್ ಇಷ್ಟ ಅಂತ ತಿನ್ನುತ್ತೇನೆ. ಚಪಾತಿ ಜೋಳದ, ಸಜ್ಜೆ ರೊಟ್ಟಿ ಜತೆ ಒಳ್ಳೆಯ ಸಾಥ್. ನಮ್ಮ ರಾಯರಿಗೆ ಕಟಕ್/ಕಡಕ್ ರೊಟ್ಟಿ ಜತೆ ಈ ಚಟ್ನಿ ಪುಡಿ ಇಷ್ಟ. ಅದಕ್ಕೊಂದಿಷ್ಟು ದಪ್ಪ ಮೊಸರು, ಸೈಡ್ ಗೆ ಸಲಾಡ್ ನೀರುಳ್ಳಿ ಇದ್ದರೆ ಆಯ್ತು. ಅವರು ಆಫಿಸ್ ನಲ್ಲಿ ಕಟಕ್ ರೊಟ್ಟಿ ತಂದಿಟ್ಟುಕೋತಾರೆ. ಮನೆಯಿಂದ ಡಬ್ಬಿಯಲ್ಲಿ ಪಲ್ಲ್ಯ, ಚಟ್ನಿ ಪುಡಿ ಹಾಕಿಕೊಂಡು ಹೋಗಿ ಅಲ್ಲಿ ಉಣ್ಣುತ್ತಾರೆ :-) :-)
ನನ್ನ ಲಕ್. ನನಗೆ exhibition ನಲ್ಲಿ ಅರಳಿಸಿದ (pre-puffed) ಅಗಸೆ ಸಿಕ್ಕಿದೆ.ಒಂದು ಹಿಡಿ ಅಗಸೆ ಜತೆ ನಾನು 8-10 ಬೆಳ್ಳುಳ್ಳಿ, ಸ್ವಲ್ಪ ಬ್ಯಾಡಗಿ ಮೆಣಸಿನ ಪುಡಿ, ಉಪ್ಪು, ಚಿಟಿಕೆ ಸಕ್ಕರೆ,ಚಿಟಿಕೆ ಅರಸಿನ ಪುಡಿ ಒಂದು ಹನಿ ಶೆಂಗಾ ಎಣ್ಣೆ, ಚೂರೇ ಚೂರು ಹುಣಸೆ ಹುಳಿ ,ಇವನ್ನೆಲ್ಲ ಚೆನ್ನಾಗಿ ಮಿಕ್ಸ್ ಮಾಡಿ ಮೈಕ್ರೋವೇವ್ quick start menu ನಲ್ಲಿ 30 ಸೆಕಂಡ್ ಬಿಸಿ ಮಾಡಿದೆ. ತಣ್ಣಗಾದ ನಂತರ ಮಿಕ್ಸಿಯಲ್ಲಿ ಪುಡಿ ಮಾಡಿಕೊಂಡೆ. ಐದು ದಿನಕ್ಕಾಗುವಷ್ಟೆ ನಾನು ಮಾಡಿಡುವುದು. 
ಬೆಣ್ಣೆ ಜತೆ ಅಗಸೆ ಚಟ್ನಿ ಪುಡಿ & ಜೋಳದ ರೊಟ್ಟಿ
:-)

Thursday, March 20, 2014

ಖಾಕ್ರಾ ಚಾಟ್- ವಾರ್ಯಾಂತ್ಯದ ಇಂಟರೆಸ್ಟಿಂಗ್ ಸ್ನ್ಯಾಕ್

fireless cooking ಅಂತಲೂ ಹೇಳಬಹುದು ಯಾಕಂದರೆ ಖಾಕ್ರಾ ಆಲ್ಮೋಸ್ಟ್ ಎಲ್ಲ ಸೂಪರ್ ಸ್ಟೋರ್ಸ್/ಬೇಕರಿ ಗಳಲ್ಲಿ ಲಭ್ಯ.
ಬೇಕಾಗಿರುವುದು:
ಎರಡು ಖಾಕ್ರಾ, ನೀರುಳ್ಳಿ, ಟೊಮ್ಯಾಟೊ, ಕೊತ್ತಂಬರಿಸೊಪ್ಪು, ಬೆಲ್ಲದಪುಡಿ/ಸಕ್ಕರೆಪುಡಿ/date syrup, ಚಾಟ್ ಮಸಾಲಾ
ಖಾಕ್ರಾ ಪುಡಿ ಮಾಡಿ. ಅದಕ್ಕೆ ಸಣ್ಣಕ್ಕೆ ಕತ್ತರಿಸಿದ ನೀರುಳ್ಳಿ, ಟೊಮೆಟೊ, ಕೊತ್ತಂಬರಿ ಸೊಪ್ಪು, ಬೆಲ್ಲದ ಹುಡಿ ಅಥವಾ ಅದರ substitue ಮತ್ತು ಚಾಟ್ ಮಸಾಲಾ ಬೆರೆಸಿ. ಅಷ್ಟೆ. ಉಪ್ಪು ಸೇರಿಸಬೇಡಿ.
ರೆಡಿ ಮಾಡಿಟ್ಟಿಕೊಂಡ್ರೆ ನಿಮ್ಮ ಫೆವರಿಟ್ ಸಿನಿಮಾ ನೋಡ್ತಾ ತಿನ್ನಬಹುದು. ಇನ್ನು ಸ್ವಲ್ಪ ದಿನಕ್ಕೆ ಮಕ್ಕಳ ಬೇಸಿಗೆ ರಜೆ ಶುರು ಆಗುತ್ತೆ. ಅವರು ಸಂಜೆ ಆಟ ಆಡಿ ಬಂದು ಅಮ್ಮ ಹಸಿವೆ ಅಂದಾಗ
ಮ್ಯಾಗಿ 2 ಮಿನಿಟ್ಸ್ ಬದಲು
 ಇದೇ ಟೇಸ್ಟಿ, ಇದೇ ಮೇಲು.
ನೋಡಿ ಹೇಗೆ rhyme ಕೂಡ ಆಗುತ್ತೆ. :-)

ಸಪೂರ ಶೇವ್/ಓಂ ಪುಡಿ ಇದ್ದಲ್ಲಿ ಅದನ್ನೂ ಸೇರಿಸಬಹುದು. 
ಎಂಜಾಯ್ :-)

Wednesday, March 12, 2014

(ಬಾಲ್ಕನಿಯಲ್ಲಿ ಮಾಡಿದ) ತಂಡೂರಿ ಪನೀರ್ ಕುಲ್ಚಾ

:-) ಅಂತೂ ಇಂತೂ ನಮ್ಮ ಸ್ವಂತ ಮನೆಗೆ ಬಂದಾಯ್ತು. ಇಂಟರ್ ನೆಟ್ ಕೂಡ ಕನೆಕ್ಟ್ ಆಯ್ತು. ಬಾಲಕ್ನಿಯಿಂದ ನೋಡುತ್ತಾ ಸಮಯ ಉಳಿದರೆ ಬ್ಲಾಗಿಂಗ್. ನಿನ್ನೆ ರಾತ್ರಿ ನಾವು ಬಾಲ್ಕನಿಯಲ್ಲಿ ತಂಡೂರ್ ಮಾಡಿ ಪನೀರ್ ಕುಲ್ಚಾ ಮಾಡಿದೆವು
ಬೇಕಾಗುವ ಪದಾರ್ಥ: ಮೈದಾ, ಅಡುಗೆ ಸೋಡಾ, ಮೊಸರು ಸ್ವಲ್ಪ ಬಿಸಿ ಹಾಲು, ಪನೀರ್, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಖಾರದ ಪುಡಿ, ಉಪ್ಪು, ಚಾಟ್ ಮಸಾಲಾ
ಮೈದಾ ಹಿಟ್ಟನ್ನು ಮಧ್ಯಾಹ್ನ ಕಲಸಿ ಇಟ್ಟೆವು. (ಮಾಡಿದೆವು, ಇಟ್ಟೆವು = ನಾನು + ಮಗಳು ಮಾಲವಿಕಾ ಜಂಟಿ operationಉ :-)) ಮೈದಾ ಹಿಟ್ಟಿಗೆ, 2 ಟೇ ಸ್ಪೂನ್ ಅಡುಗೆ ಸೋಡಾ,ಉಪ್ಪು ಅರ್ಧ ಗ್ಲಾಸ್ ಮೊಸರು ಮಿಕ್ಸ್ ಮಾಡಿಕೊಳ್ಳಿ. ಉಗುರು ಬೆಚ್ಚನೆಯ ನೀರಿನಿಂದ ಸ್ವಲ್ಪ ಮೆತ್ತನೆಯ dough ತಾಯಾರಿಸಿಕೊಳ್ಳಿ. ಸಂಜೆ ಆಗುವಷ್ಟರಲ್ಲಿ ಅದು ಎರಡು ಪಟ್ಟು ಉಬ್ಬ್ಬಿರುತ್ತೆ.

ಕುಲ್ಚಾ ತಯಾರಿಸುವ ಅರ್ಧ ಗಂಟೆ ಮುಂಚೆ  ಪನೀರ್ ಫ್ರಿಡ್ಜ್ ನಿಂದ ತೆಗೆದು ತುರಿದಿಟ್ಟುಕೊಳ್ಳಿ. ಇದಕ್ಕೆ ಸಣ್ನಕ್ಕೆ ಕತ್ತರಿಸಿದ ಹಸಿಮೆಣಸಿನಕಾಯಿ, ಕೊತ್ತಂಬರಿಸೊಪ್ಪು,ಸಣ್ಣಕ್ಕೆ ತುರಿದಿಟ್ಟ ಬೆಳ್ಳುಳ್ಳಿ, ಶುಂಠಿ, ಉಪ್ಪು, ಚಾಟ್ ಮಸಲಾ ಮಿಕ್ಸ್ ಮಾಡಿ.

ನಂತರ ಮೈದಾ ಹಿಟ್ಟಿನ ಉರುಟು ಮಾಡಿಕೊಳ್ಳಿ. ಅದನ್ನು ಸಣ್ಣಕ್ಕೆ ಲಟ್ಟಿಸಿ ಅದರಲ್ಲಿ ಪನೀರ್ ನ ಸ್ಟಂಫಿಂಗ್ ಇಡಿ. ಈ ರೀತಿ ಮಾಡಿಟ್ಟು ಒಂದೈದು ನಿಮಿಷ ಹಾಗೇ ಇಟ್ಟು ಬಿಡಿ.
ಈಗ ತೆಂಗಿನ ಕರಟನ್ನು ಗ್ಯಾಸ್ ಸ್ಟವ್ ಮೇಲಿಟ್ಟು ಬೆಂಕಿ ತಾಗುವ ತನಕ ಇಡಿ. ಇದನ್ನು ಶೆಗಡಿಗೆ ವರ್ಗಾಯಿಸಿ ಮೂರು ನಾಲ್ಕು ಕರಟ ಇಟ್ಟು ಬೆಂಕಿ ತಾಗಿ ಸ್ವಲ್ಪ ಹೊತ್ತಿನಲ್ಲಿ ಅದು embers ಆಗಿ ಬಿಡುತ್ತೆ. 


ಅದರ ಮೇಲೆ ಈ ತರಹದ ಒಂದು ಸ್ಟ್ಯಾಂಡ್ ಸಿಗುತ್ತೆ. ನಾನು ಇದನ್ನು ಮಲ್ಲೇಶ್ವರಂ ನಲ್ಲಿ ತೆಗೊಂಡಿದ್ದು. ಶಿಗಡಿ ಮೇಲಿಡಿ. 

ಒಂದೊಂದೆ ಕುಲ್ಚಾ ಲಟ್ಟಿಸಿ ಇದರ ಮೇಲಿಡಿ ಎರಡು ಬದಿ ಕೆಂಪಗಾಗುವ ತನಕ ಬೇಯಿಸಿ. 

ತಾಜಾ ಮೊಸರು, ಲಿಂಬೆ ಹಣ್ಣಿನ ಉಪ್ಪಿನಕಾಯಿಯೊಂದಿಗೆ ಸರ್ವ್ ಮಾಡಿ. ನಮ್ಮ ಮನೆಯಲ್ಲಿ ಇದನ್ನು ಸ್ಟಫ್ಡ್ ಬದನೆಕಾಯಿ ಜತೆ ಸರ್ವ್ ಮಾಡಿದ್ದು,
ತುಂಬಾ ಎಂಜಾಯ್ ಮಾಡಿದ್ವಿ, ಯು ಎಸ್, ಮುಂಬೈ. ಬೆಳಗಾವಿ ಯಲ್ಲಿರುವ ತಂಗಿ ತಮ್ಮಂದಿರಿಗೆಲ್ಲ ವಾಟ್ಸ್ಯಾಪ್ ನಲ್ಲಿ ಫೋಟೊ ತೆಗೆದು ಕಳಿಸಿ ಹೊಟ್ಟೆ’ಕಿಚ್ಚಾ’ಗುವಂತೆ ಮಾಡಿದೆ.
ಶೆಗಡಿಯಿಲ್ಲದಿದ್ದಲ್ಲಿ ಮಾಮೂಲಿ ತವಾ ಮೇಲೆ ಚಪಾತಿಯಂತೆ ಬೇಯಿಸಬಹುದು.
:-)