Wednesday, June 17, 2020

ಮಾವಿನ ಹಣ್ಣಿನ ಜಾಮೂನು

ನಮ್ಮ ಮನೆಯಲ್ಲಿ ಹಲವಾರು ಅಡುಗೆ ಪುಸ್ತಕಗಳಿವೆ. ಹೆಚ್ಚಿನವು ಶ್ರೀಕಾಂತ್ ಕೊ0ಡಿದ್ದು. ಈಗಲೂ ಹಿಸ ಪುಸ್ತಕ ತಂದಾಗ ನಾನು 'ಗೊತ್ತಿದ್ದದೆ ಮಾಡಲ್ಲ, ಇನ್ನು ಪುಸ್ತಕ ನೋಡಿ ಮಾಡ್ತೀನಾ? ಅನ್ನೋ ಪ್ರಶ್ನೆನೆ ಯಾವಾಗಲೂ
ಅಂಥದ್ದರಲ್ಲಿ ನಿನ್ನೆ ನನಗೆ ಮಾವಿನ ಹಣ್ಣಿನ ಜಾಮೂನು ಮಾಡುವ ಐಡಿಯಾ ಹೊಳೀತು.
ನಿಹಾ ನಾಲ್ಕು ತಿಂಗಳ ನಂತರ ಬೆಂಗಳೂರಿಗೆ ವಾಪಸ್ ಆಗಳು ಟಿಕೆಟ್ ಬುಕ್ ಮಾಡಿದಾಗ ನಾನು ಆನಂದ್ ಭಾವನ್ ನವರ 'ಗುಲಾಬ್ ಜಾಮೂನ್ ಮಿಕ್ಸ್' ತಂದಿಟ್ಟು ಸ್ವಲ್ಪ ಗುಲಾಬ್ ಜಾಮೂನು ಮಾಡಿದ್ದೆ.  ಇನ್ನು ಸ್ವಲ್ಪ ಮಿಕ್ಸ್ ಉಳಿದಿತ್ತು.

ತಡ ಮಾಡದೆ ಉಳಿದ ಜಾಮುನು ಮಿಕ್ಸ್ ಗೆ ಸಕ್ಕರೆ ಪುಡಿ, ಮಾವಿನ ಪಲ್ಪ್ ಸೇರಿಸಿ ಜಾಮೂನು ಮಾಡಿದೆ, ಮಾತ್ರವಲ್ಲ ಕೆಲ ಬಿಸ್ಕೂಟ ಕೂಡ ಮಾಡಿದೆ
ಅಕ್ಕನ ಬಳಿ ಕ್ರೀಮ್ ಪಡೆದು ಅದರಿಂದ ಮಂಗೋ ಕ್ರೀಮ್ ಕೂಡ ಮಾಡಿದೆ
Instagram ಮತ್ತು ವಾಟ್ಸಾಪ್ ನಲ್ಲಿ ಹಾಕಿದ್ದರಿಂದ ಹಲವರಿಗೆ ಇದನ್ನು ಮಾಡುವ ವಿಚಾರ ಬಂದಿದೆ.
ದೊಡ್ಡವಳಿಗೆ ಜಾಮೂನು ಇಷ್ಟವಾದರೆ, ಚಿಕ್ಕವಳಿಗೆ ಬಿಸ್ಕತ್.







Sunday, April 26, 2020

ಅಪ್ಪೆ ಸಾರು

ಇನ್ನು ಮಾವಿನಕಾಯಿ ಮಾವಿನ ಹಣ್ಣಿನ season ಶುರು.
ಪರಿಮಳ ಯುಕ್ತ ಮಾವಿನ ಕಾಯಿಯನ್ನು ನೀರಲ್ಲಿ ಬೇಯಿಸಿ. ಇದಕ್ಕೆ ಹಸಿ ಮೆಣಸಿನ ಕಾಯಿ, ಹಿಂಗು ಸೇರಿಸಿ ಎಲ್ಲವನ್ನೂ ನುಣ್ಣಗೆ ರುಬ್ಬಿ.  ತೆಂಗಿನ ಎಣ್ಣೆ ಕೊನೆಯಲ್ಲಿ ಸೇರಿಸಿ. ಅಥವಾ ಸಾಸಿವೆ, ಜೀರಿಗೆ, ಕರಿಬೇವಿನ, ಒಣ ಮೆಣಸಿನ ಒಗ್ಗರಣೆ ಹಾಕಿ. ಸೂಪ್ ತರಹ ಸೇವಿಸಬಹುದು ಅಥವಾ ಅನ್ನಕ್ಕೆ ಕಲಿಸಿ ಉಣ್ಣ ಬಹುದು.
ಅಪ್ಪೆಮಿಡಿ ಉಪ್ಪಿನಕಾಯಿಗೆ ಹಾಕಲು ತಂದಿದ್ದೆವು. ಅದರಲ್ಲಿ ಏಟಾದ ಕೆಲವು ಕಾಯಿ ಇತ್ತು. ಅದನ್ನು ಉಪಯೋಗಿಸಿ ಅಪ್ಪೆ ಸಾರು ಮಾಡಿದ್ದು




ಹಲಸಿನ ಹಣ್ಣಿನ ಶ್ರೀಖಂಡ




ಹಿಂದಿನ ವರ್ಷ ಮಾಡಿಟ್ಟ ಹಲಸಿನ ಹಣ್ಣಿನ ಪಲ್ಪ್ -  ಒಂದು ಬಟ್ಟಲು.
(ಅದಿಲ್ಲದಿದ್ದಲ್ಲಿ ಮುಕ್ಕಾಲು ಬಟ್ಟಲು ಹಲಸಿನ ಹಣ್ಣು)
ಮೊಸರು ಒಂದು ಬಟ್ಟಲು, ಏಲಕ್ಕಿ ಸ್ವಲ್ಪ...ಬೇಕಿದ್ದಲ್ಲಿ ಗೋಡಂಬಿ ದ್ರಾಕ್ಷಿ ಸೇರಿಸಬಹುದು
ಮೊಸರನ್ನು strainer ನಲ್ಲಿ ಹಾಕಿಡಿ, ಅಥವಾ ಮಲ್ ಬಟ್ಟೆಯಲ್ಲಿ ಕಟ್ಟಿಡಿ. ನೀರೆಲ್ಲ ಬಸಿದು ಹೋದ ಮೇಲೆ, ಹ ಹ ಪಲ್ಪ್, ಮೊಸರು , ಏಲಕ್ಕಿ ಪುಡಿ ಸೇರಿಸಿ, ಬ್ಲೆಂಡ್ ಮಾಡಿ. ಮೇಲಿನಿಂದ ಗೋಡಂಬಿ ದ್ರಾಕ್ಷಿ ಚೂರುಗಳನ್ನು ಹಾಕಿ. ಪೂರಿ ಒಟ್ಟಿಗೆ ಒಳ್ಳೆಯ ಸಾಥ್
 👌
ಹ ಹ ತುಂಬಾ ಸಿಹಿಯಾಗಿತ್ತು ಆದ್ದರಿಂದ ಸಕ್ಕರೆ/ಬೆಲ್ಲ ಸೇರಿಸಿಲ್ಲ

Thursday, April 16, 2020

pepper mushroom ಪೆಪ್ಪರ್ ಮಶ್ರೂಮ್

ನಿನ್ನೆ instagram ನಲ್ಲಿ ಇದರ ರೆಸಿಪಿ ವಿಡಿಯೋ ಹಾಕಿದ್ದೆ. ತುಂಬಾ ಜನರಿಗೆ ಇಷ್ಟವಾಗಿ ಮಾಡಿದರೂ ಕೂಡ. ಹಾಗಾಗಿ ಇಲ್ಲಿ ಕೂಡ ನಿಮ್ಮ ಜತೆ ಶೇರ್ ಮಾಡುವಾ ಅಂತ   ಎರಡು ವರ್ಷದ ನಂತರ ಇಲ್ಲಿಗೆ ಬರ್ತಾ ಇದ್ದೀನಿ.

ಬೇಕಾಗಿರುವ ಸಾಮಾನು
ಒಂದು ಪ್ಯಾಕ್ ಅಣಬೆ. ಎರಡು ಮೂರು ಹಸಿ ಮೆಣಸಿನಕಾಯಿ, ಸ್ವಲ್ಪ ತಾಜಾ ಕರಿಬೇವಿನ ಸೊಪ್ಪು ,ಕುಟ್ಟಿದಾ ತಾಜಾ ಕಾಳುಮೆಣಸು ,ಮೂರು ನಾಲ್ಕು ಬೆಳ್ಳುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು ಒಂದು ಟೀ ಸ್ಪೂನ್ ಅಕ್ಕಿ ಹಿಟ್ಟು.
ಲಾಕ್ ಡೌನ್ ಇದ್ರೂ ನಮಗೆ ತುರ್ತು ಸಾಮಗ್ರಿಗಳು ಲಭ್ಯವಾಗಿವೆ. ಅಪಾರ್ಟ್ಮೆಂಟ್ ಅಂದ್ರೆ ಇದೊಂದು ಲಾಭ. ರಿಲಯನ್ಸ್ ವಾನ್, ಸ್ಪಾರ್  ಬಜಾರ್, ಲೇಡಿ ವೆಂಡರ್ ಎಲ್ಲ ತರಕಾರಿ, ಗ್ರೋಸರಿ ಎಲ್ಲಾ ಆರಾಮಾಗಿ ಸಿಗ್ತಾ ಇದೆ.

ಮೊದಲಿಗೆ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಇದಕ್ಕೆ ಸಣ್ಣಕ್ಕೆ ಕತ್ತರಿಸಿದ ಬೆಳ್ಳುಳ್ಳಿ ಹಾಕಿ. ಅದು ಕೆಂಬಣ್ಣಕ್ಕೆ ತಿರುಗುವಾಗ, ಸೀಳಿದ ಹಸಿಮೆಣಸಿನಕಾಯಿ ಹಾಕಿ. ಎರಡು ನಿಮಿಷ ಬಿಟ್ಟು ಅಣಬೆ ಮತ್ತು ಉಪ್ಪು ಹಾಕಿ. ತುಂಬಾ ನೀರು ಬಿಡುತ್ತಡೇ. ಗ್ಯಾಸ್ ಹೈ ಅಲ್ಲೇ ಇರಲಿ. ಈಗ ಕರಿಬೇವಿನ ಎಲೆ ಹಾಕಿ. ಸಣ್ಣಕ್ಕೆ ಜಜ್ಜಿದ ಕಾಲು ಮೆಣಸಿ ಹಾಗಿ, ಎರಡು ನಿಮಿಷ ಕೈಯಾಡಿಸಿ. ಒಂದು ಟೀ ಸ್ಪೂನ್ ಅಕ್ಕಿ ಹಿಟ್ಟು ಉದುರಿಸಿ. ಡ್ರೈ ಆದ ಮೇಲೆ ಕೆಳಗಿಳಿಸಿ.
೫ ನಿಮಿಷದಲ್ಲಿ ತಯಾರಾಗುವಂತದ್ದು . ರುಚಿಯಾಗಿಯೂ ಇರುತ್ತೆ. ಜಾಸ್ತಿ ಎಣ್ಣೆ ಹಾಕಿದರೆ ಕ್ರಿಸ್ಪಿ ಆಗುತ್ತೆ.