Tuesday, May 6, 2014

ಪವರ್ ಪ್ಯಾಕ್ಡ ಪೊಂಗಲ್ (power packed pongal)

aka ಪಾಲಕ್  ಪೊಂಗಲ್


ಮೂರು ವರ್ಷದ ಹಿಂದೆ ಶ್ರೀಕಾಂತ ಗೆ ಆಫಿಸ್ ಕೆಲಸದ ಮೇಲೆ ಯೂರೊಪ್ ಗೆ ಹೋಗಲಿಕ್ಕಿತ್ತು. ಯೂರೊ ಡೊಲರ್ಸ್ ತೆಗೆದುಕೊಳ್ಳಲ್ಲು ರಿಚ್ ಮಂಡ್ ರೋಡ್ ಗೆ ಹೋಗಬೇಕಿತ್ತು. ಮತ್ತು ಅಲ್ಲಿಂದ ಪ್ರವಾಸಕ್ಕೆ ಬೇಕಾದ ಬಟ್ಟೆ ಬರೆಗಳನ್ನು ಕೊಳ್ಳಲು ಕಮರ್ಶಿಯಲ್ ಸ್ಟೀಟ್ ಗೆ ಹೋಗಲಿಕ್ಕೆದೆಯೆಂದು ನನಗೂ ಅವರ ಜತೆ ಬರಲು ಹೇಳಿದರು. ಆ ದಿನ ನಿಂಪಿ ಗೆ ರಜೆ. ಅವಳನ್ನೂ ಕರೆದುಕೊಂಡು ಹೋದೆವು. ರಿಚ್ ಮಂಡ್ ರೋಡ್ ಗೆ ಹೋಗಿ ಕ್ಯಾಶ್ ಕೊಟ್ಟು ಅದನ್ನು ಯೂರೊ ಡಾಲರ್ಸ್ ಗೆ ಬದಲಾಯಿಸಿ ( ಆ ಆಫಿಸ್ ತೆರೆಯುವುದೇ ಬೆಳಿಗ್ಗೆ 11.00 ಗಂಟೆಗೆ. ನಾವು ತಲುಪುವಾಗ 11.45. ಅಲ್ಲಿಯ ಫಾರ್ಮೆಲಿಟಿಸ್ ಮುಗಿಯ ಬೇಕಾದರೆ ಸುಮಾರು ಹೊತ್ತು ಕಳೆಯಿತು. ಹೊಟ್ಟೆ ತಾಳಹಾಕಲಾರಂಭಿಸಿತು. ಶ್ರೀಕಾಂತ ನಮ್ಮನ್ನು ಅಲ್ಲಿಯೆ ಬಳಿ ಯಿದ್ದ ವುಡ್ ಲ್ಯಾಂಡ್ಸ್ ಹೋಟಲ್ ಗೆ ಕರೆದುಕೊಂಡು ಹೋದರು. ಅಲ್ಲಿ ಮೊದಲ ಬಾರಿಗೆ ಸವಿದಿದ್ದು ಪಾಲಕ್ ಪೊಂಗಲ್. ನನಗಂತೂ ತುಂಬಾ ಇಷ್ಟ ಆಗಿ ಈಗ ನನ್ನದೇ ವರ್ಶನ್ ಗಳಲ್ಲಿ ಇದನ್ನು ಮಾಡುತ್ತೇನೆ.

ಬೇಕಾಗುವ ಸಾಮಾನು:
ಜವೆ ಗೋದಿ ಸದಕು (ಬ್ರೊಕನ್ ವ್ಹೀಟ್), ಹಸಿರು ಬೇಳೆ ಸಮ ಪ್ರಮಾಣದಲ್ಲಿ



ಮೊದಲಿಗೆ ನಾನು ಹೆಸರು ಬೇಳೆಯನ್ನು ಸ್ವಲ್ಪ ಹುರಿದುಕೊಳ್ಳುತ್ತೇನೆ.ತಣ್ಣಗಾದ ನಂತರ ಜವೆ ಗೋದಿಯೊಂದಿಗೆ ಮಿಕ್ಸ್ ಮಾಡಿ ಚೆನ್ನಾಗಿ ತೊಳೆದು ಮೂರು ಪಟ್ಟು ನೀರು ಹಾಕಿ ಬೇಯಿಸಬೇಕು.
ಪಾಲಕ್ ಸೊಪ್ಪು ಚೆನ್ನಾಗಿ ತೊಳೆದು ಎರಡು ನಿಮಿಷ ಬಿಸಿ ನೀರಿನಲ್ಲಿ ಹಾಕಿ, ಅದರಿಂದ್ದ ತೆಗೆದು ತಣ್ಣೀರಿನಲ್ಲಿ ಹಾಕಿಡಿ. ಆ ಮೇಲೆ ಮಿಕ್ಸಿಯಲ್ಲಿ ರುಬ್ಬಿ ಪಕ್ಕಕ್ಕಿಡಿ.
ನೀರುಳ್ಳಿ ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಿ (optional), ಸ್ವಲ್ಪ ಹಸಿ ಶುಂಠಿಯನ್ನು ಚಿಕ್ಕದಾಗಿ ಕತ್ತರಿಸಿಟ್ಟುಕೊಳ್ಳಿ.
ಸ್ವಲ್ಪ ಎಣ್ಣೆ/ತುಪ್ಪ ಬಿಸಿ ಮಾಡಿ. ಇದಕ್ಕೆ ಜೀರಿಗೆ, ಕರಿಬೇವು, ಇಡೀ ಕರಿ ಮೆಣಸು ಒಗ್ಗರಣೆಗೆ ಇಡಿ. ಇದಕ್ಕೆ ನೀರುಳ್ಳಿ ಬೆರೆಸಿ ಕೆಂಪಗಾಗುವ ತನಕ ಹುರಿಯಿರಿ, ನಂತರ ಶುಂಠಿ ಚೂರು ಹಾಕಿ. ಸ್ವಲ್ಪ ಅರಿಶಿನ ಪುಡಿ ಬೆರೆಸಿ. ರುಬ್ಬಿಟ್ಟ ಪಾಲಕ್ ಸೊಪ್ಪು ಬೆರೆಸಿ ಎರಡು ನಿಮಿಷ ಕೈಯಾಡಿಸಿ. ಸ್ವಲ್ಪ ನೀರು ಬೆರೆಸಿ. ಇದಕ್ಕೆ ಬೇಯಿಸಿಟ್ಟ ಗೋದಿ+ಹಸಿರುಬೆಳೆ ಹಾಕಿ. ಉಪ್ಪು ಚೂರು ಬೆಲ್ಲ ಬೆರೆಸಿ ಬೇಕಾದಷ್ಟು ನೀರು ಹಾಕಿ ಒಂದು ಕುದಿ ಬಂದ ನಂತರ ಕೆಳಗಿಳಿಸಿ. ಇದಕ್ಕೆ ಕಾಯಿ ಚಟ್ನಿ ಅಥವಾ ಟ್ಯೋಮೇಟೋ ನೀರುಳ್ಳಿ+ಮೊಸರು ಸ್ಯಾಲಾಡ್ ಜತೆ ಸೆರ್ವ್ ಮಾಡಿ.
ಇರಲಿ ಅಂತ ಪ್ಲೈನ್ ಪೊಂಗಲ್ ಕೂಡ ಮಾಡಿದೆ. ಈ ಚಳಿಯಲ್ಲಿ (ಇಲ್ಲಿ ಮಳೆ ಬಂದು ಮತ್ತು ನಮ್ಮ ಓಪನ್ ಬಾಲ್ಕನಿಯಿಂದಾಗಿ ಮನೆಯಲ್ಲಿ ತುಂಬಾ ತಂಪಾಗಿದೆ) ಬಿಸಿ ಬಿಸಿ ಪೊಂಗಲ್ ಎಶ್ಟು ಬೇಗ ಖಾಲಿಯಾಯ್ತು ಗೊತ್ತಾ??!! :-)

ಬೇಗ ಹಸಿವೆ ಆಗಲ್ಲ. ಮತ್ತು ಇಡೀ ದಿನ್ active ಆಗಿರುತ್ತೆ ದೇಹ/ಮನಸ್ಸು. ಶುಗರ್ complaint ಇರುವವರಿಗೆ ಇದು ಉಪಯುಕ್ತ. 
ಎಂಜಾಯ್

Monday, May 5, 2014