Thursday, January 30, 2014

ನವಣೆ ಪಾಯಸ / foxtail millet payasam

ಬೇಕಾಗುವ ಸಾಮಾನು:

ಅರ್ಧ ಬಟ್ಟಲು ನವಣೆ, ಬೆಲ್ಲ, ತೆಂಗಿನಕಾಯಿ ಹಾಲು, ಏಲಕ್ಕಿ, ದ್ರಾಕ್ಷಿ- ಗೋಡಂಬಿ
ನವಣೆಯನ್ನು ಮೂರು ಗ್ಲಾಸ್ ನೀರಲ್ಲಿ ಬೇಯಿಸಿ. ಆ ಮೇಲೆ ಬೆಲ್ಲ ಹಾಕಿ ಚೆನ್ನಾಗಿ ಕುದಿಸಿ. ಗೋಡಂಬಿ ದ್ರಾಕ್ಷಿ ತುಪ್ಪದಲ್ಲಿ ಹುರಿಯಿರಿ. ತೆಂಗಿನ ಹಾಲು ತೆಗೆದು ಇದಕ್ಕೆ ಬೆರೆಸಿ. ಕೊನೆಯಲ್ಲಿ ದ್ರಾಕ್ಷಿ, ಗೋಡಂಬಿ ಏಲಕ್ಕಿ ಪುಡಿ ಬೆರೆಸಿ.
ಚೆನ್ನಾಗಿರುತ್ತೆ. ಟ್ರೈ ಮಾಡಿ
ನವಣೆಯಿಂದ ಮಾಡಿದ ಇತರೇ ತಿಂಡಿ
http://malathihatescooking.blogspot.in/2014/01/blog-post_15.html
:-)

Saturday, January 25, 2014

ಆಲೂ ಮೆಥಿ (ಅಲೂಗಡ್ಡೆ ಮೆಂಥ್ಯೆ ಸೊಪ್ಪಿನ ಪಲ್ಯ)

ಒಂದು ಕಟ್ಟು ಮೆಂಥೆ ಸೊಪ್ಪು, ಎರಡು ಹದ ಗಾತ್ರದ ಆಲೂ ಗಡ್ಡೆ, ಮೂರು ಬೆಳ್ಳುಳ್ಳಿ , ಎರಡು ಹಸಿ ಮೆಣಸಿನಕಾಯಿ, ಅರ್ಧ ಇಂಚ್ ಶುಂಠಿ, ಜೀರಿಗೆ,ಜೀರಿಗೆ+ಕೊತ್ತಂಬರಿ+ಹಿಂಗು ಪುಡಿ,  ಅರಿಶಿನ ಪುಡಿ. ಉಪ್ಪು
ಆಲೂಗಡ್ಡೆಯ ಸಿಪ್ಪೆ ತೆಗೆದು ಸ್ವಲ್ಪ ಉಪ್ಪು ಹಾಗೂ ನೀರಿನೊಟ್ಟಿಗೆ ಬೇಯಿಸಿಟ್ಟುಕೊಳ್ಳಿ. ಕುಕ್ಕರ್ ಒಂದು ವ್ಹಿಸಲ್ ಬಂದ ನಂತರ ಎರಡು ನಿಮಿಷ ಬಿಟ್ಟು ಆಫ್ ಮಾಡಿದರೆ ಸಾಕು, ಯಾಕಂದರೆ ಆಲೂಗಡ್ಡೆ ತುಂಬ ಮೆತ್ತಗಾಗಬಾರದು.

ಎಲೆಗಳನ್ನು ನೀರಲ್ಲಿ ತೊಳೆದು ಕತ್ತರಿಸಿಡಿ. ಬೆಳ್ಳುಳ್ಳು ಶುಂಠಿ ಕೂಡ ಚಿಕ್ಕದಾಗಿ ಕತ್ತರಿಸಿ



ಎಣ್ಣೆ ಬಿಸಿ ಮಾಡಿ ಜೀರಿಗೆಯ ಒಗ್ಗ್ಗರಣೆ ಹಾಕಿ. ಇದಕ್ಕೆ ಮೆಣಸಿನಕಾಯಿ ಸೀಳು, ಸಣ್ಣಕ್ಕೆ ಕತ್ತರಿಸಿಟ್ಟ ಬೆಳ್ಳುಳ್ಳಿ+ಶುಂಠಿ  ಬೆರೆಸಿ ಎರಡು ನಿಮಿಷ ಕೈಯಾಡಿಸಿ, ಆಮೇಲೆ ಕ್ರಮವಾಗಿ, ಅರಿಶಿನ ಪುಡಿ, ಜೀರಿಗೆ+ಕೊತ್ತಂಬರಿ+ಹಿಂಗು ಪುಡಿ, ಬೇಯಿಸಿದ ಆಲುಗಡ್ಡೆ, ಮೆಂತೆಸೊಪ್ಪು, ಉಪ್ಪು ಚಿಟಿಕೆ ಸಕ್ಕರೆ ಬೆರೆಸಿ. ಮದ್ಯ ಮಧ್ಯ ಸುಟ್ಟುಗದಿಂದ ಕೈಯಾಡಿಸ್ತಾ ಇರಿ. ಎರಡು ನಿಮಿಷದ ನಂತರ ಗ್ಯಾಸ್ ಆಫ್ ಮಾಡಿ ಪಲ್ಯವನ್ನು  ಮುಚ್ಚಿಡಿ.

ಚಪಾತಿಯೊಂದಿಗೆ ಚೆನ್ನಾಗಿರುತ್ತೆ. (ನಾನು ಕೊನೆಯಲ್ಲಿ ಸ್ವಲ್ಪ ಆಮ್ ಚೂರ್ ಪೌಡರ್ ಬೆರೆಸಿದ್ದೇನೆ. ಇಲ್ಲದಿದ್ದಲ್ಲಿ ಲಿಂಬೆ ರಸ ಸೇರಿಸಬಹುದು
:-)

Tuesday, January 21, 2014

ಒಂದು wholesome ಸಲಾಡ್

ಬೇಕಾಗುವ ಪದಾರ್ಥ: ಒಂದು ಮೂಲಂಗಿ, ಎರಡು ತಾಜಾ ಮೂಲಂಗಿ ಎಲೆ, ಸಣ್ಣಗಾತ್ರ್ದ ನೀರುಳ್ಳಿ, ಚಿಕ್ಕ ಕ್ಯಾರೆಟ್, ಮೊಳಕೆ ಬರಿಸಿದ ಹೆಸರು ಕಾಳು, ಒಂದು ಹುಳಿ ಕಿತ್ತಳೆ ಹಣ್ಣು, ಉಪ್ಪು, ಖಾರದ/ಕಾಳು ಮೆಣಸು ಪುಡಿ, ಚಿಟಿಕೆ ಸಕ್ಕರೆ.


ಮೂಲಂಗಿ ಎಲೆ ಚೆನ್ನಾಗಿ ತೊಳೆದು ಸಣ್ಣಕ್ಕೆ ಕತ್ತರಿಸಿ, ಮೂಲಂಗಿಯನ್ನೂ ಸಣ್ಣಕ್ಕೆ ಕತ್ತರಿಸಿ, ಕಿತ್ತಳೆ ಹಣ್ಣಿನ ಹೊರಗಿನ ಸಿಪ್ಪೆ, ನಾರು, ಬೀಜಗಳನ್ನು ತೆಗೆದು ಚಿಕ್ಕದಾಗಿ ಕತ್ತರಿಸಿ, ನೀರುಳ್ಳಿ, ಕ್ಯಾರೆಟ್ ಕತ್ತರಿಸಿ ಕಾಳಿನೊಂದಿಗೆ ಮಿಕ್ಸ್ ಮಾಡಿ. ಹಸಿವೆಯಾದಾಗ ತಿನ್ನಿ. ರುಚಿಕರ ಮಾತ್ರವಲ್ಲ ಬೊಜ್ಜು ಇಳಿಸಲು ಸಹಾಯಕ ಈ ಸಲಾಡ್.

ಎಂಜಾಯ್
:-)

Wednesday, January 15, 2014

ಸಂಕ್ರಾಂತಿಗೆ ಪೊಂಗಲ್ (ಸಿಹಿ & ಖಾರಾ)

ಎಲ್ಲರಿಗೂ happy ಮಕರ ಸಂಕ್ರಾಂತಿ



ಬೇಕಾಗುವ ಪದಾರ್ಥ
ಅರ್ಧ ಕಪ್ ಹೆಸರು ಬೇಳೆ, ಒಂದು ಕಪ್ ನವಣೆ.
ಬಾಣಲೆಯಲ್ಲಿ ಎಣ್ಣೆ ಹಾಕದೆ ಮೊದಲಿಗೆ ಹೆಸರು ಬೇಳೆ ಮಂದ ಕೆಂಪು ಬಣ್ಣ ಬರುವ ತನಕ ಹುರಿದುಕೊಳ್ಳಿ. ನಂತರ ನವಣೆಯನ್ನು ಸ್ವಲ್ಪ ಬಿಸಿ ಮಾಡಿ. ಎರಡೂ ತಣ್ಣಗಾದ ಮೇಲೆ ನೀರಿನಲ್ಲಿ ತೊಳೆದು, ಮೂರು ಕಪ್ ನೀರು ಹಾಕಿ ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ



ಸಿಹಿ ಪೊಂಗಲ್:
ಬೆಲ್ಲ ಒಂದು ಸರಿಗೆ ಪಾಕ ಬರಲಿ. ಇದಕ್ಕೆ ತುರಿದಿಟ್ಟ ಕಾಯಿ ಬೆರೆಸಿ. ಸ್ವಲ್ಪ ಗಟ್ಟಿಯಾಗುತ್ತಿದೆ ಅನಿಸುವಾದ ಬೆಂದ ಪದಾರ್ಥ ಬೆರೆಸಿ. ಕೊನೆಗೆ ತುಪ್ಪ, ಹುರಿದ ಗೋಡಂಬಿ, ದ್ರಾಕ್ಷಿ, ಏಲಕ್ಕಿ ಪುಡಿ ಬೆರೆಸಿ.


ಖಾರ ಪೊಂಗಲ್:
ಎಣ್ಣೆ ಬಿಸಿ ಮಾಡಿ ಒಗ್ಗರಣೆಗೆ ಜೀರಿಗೆ, ಕಾಳುಮೆಣಸು, ತುರಿದ ಶುಂಠಿ, ಗೋಡಂಬಿ ಕರಿಬೇವು ಹಾಕಿ. ಇದಕ್ಕೆ ಬೆಂದ ಪದಾರ್ಥ್ ಬೆರೆಸಿ. ಉಪ್ಪು ಸೇರಿಸಿ. ಬಡಿಸುವಾಗ ತುಪ್ಪ ಹಾಕಿ. ಕಾಯಿ ಚಟ್ನಿ, ಬೂಂದಿ ಅಥವಾ ಮೊಸರಿನ ಜತೆ serve ಮಾಡಿ

ಖಾರದ ಪೊಂಗಲ್ ನ ರುಚಿ ರಾಯರಿಗೆ ಮಕ್ಕಳಿಗೆ ಎಷ್ತು ಹಿಡಿಸಿತು ಎಂದರೆ ನನಗೋಸ್ಕರ ಒಂದು ಸ್ಪೂನ್ ಮಾತ್ರ ಉಳಿದಿತ್ತು.
ನೀವು ಟ್ರೈ ಮಾಡಿ, ಶೇರ್ ಮಾಡಿ
:-)

Friday, January 10, 2014

ಈ ವಾರ್`ಯ್ಯಾಂತ್ಯ ಸಮೋಸಾ ಮಾಡಿ

ಬೇಕಾಗುವ ಸಾಮಗ್ರಿ:
ಮೈದಾ- 1 ಕಪ್
ಎಣ್ಣೆ - 1 ಟೇಬಲ್ ಸ್ಪೂನ್ ಹಿಟ್ಟಿಗೆ ಬೆರೆಸಲು
Optional  ಅರ್ಧ ಟೀ ಸ್ಪೂನ್ ಸೋಡಾ ಪುಡಿ
ಉಪ್ಪು, ಚಿಟಿಕೆ ಸಕ್ಕರೆ

ಸ್ಟಫಿಂಗ್ ಗೆ
ಬೇಯಿಸಿದ ಆಲೂಗಡ್ಡೆ, ಕ್ಯಾರೆಟ್, ಬಟಾಣಿ, ನೀರುಳ್ಳಿ, ಬೆಳ್ಳುಳ್ಳಿ, ಹಸಿ ಶುಂಠಿ, ಹಸಿಮೆಣಸಿನಕಾಯಿ, ಗರಂ ಮಸಾಲೆ ಪುಡಿ, ಕೊತ್ತಂಬರಿ ಸೊಪ್ಪು
ಒಗ್ಗರಣೆಗೆ ಜೀರಿಗೆ

ಒಗ್ಗರಣೆಗೆ ಸ್ವಲ್ಪ ಎಣ್ಣೆ ಇಟ್ಟು ಅದಕ್ಕೆ ಜೀರಿಗೆ ಹಾಕಿ. ನಂತರ ಸಣ್ಣಕ್ಕೆ ಕತ್ತರಿಸಿದ ನೀರುಳ್ಳಿ ಹಾಕಿ ಕೆಂಪಗೆ ಹುರಿಯಿರಿ. ಇದಕ್ಕೆ ಹಸಿ ಶುಂಠಿ + ಬೆಳ್ಳುಳ್ಳಿ ಪೇಸ್ಟ್ ಬೆರೆಸಿ, ಕತ್ತರಿಸಿದ ಹಸಿಮೆಣಸಿನಕಾಯಿ ಬೆರೆಸಿ, ಗರಂ ಮಸಾಲೆ ಬೆರೆಸಿ ಎರಡು ನಿಮಿಷ ಕೈಯಾಡಿಸಿ. ಇದಕ್ಕೆ ಬೇಯಿಸಿದ ಆಲೂಗಡ್ಡೆ, ಕ್ಯಾರೆಟ್, ಬಟಾಣಿ ಹಾಕಿ, ಕೊನೆಗೆ ಉಪ್ಪು. ಕೊತ್ತಂಬರಿ ಸೊಪ್ಪು ಉದುರಿಸಿ. ತಣ್ಣಗಾಗಲು ಬಿಡಿ

ಮೈದಾಗೆ ಉಪ್ಪು, ಚಿಟಿಕೆ ಸಕ್ಕರೆ ಬೆರೆಸಿ. ಎಣ್ಣೆ ಬಿಸಿ ಮಾಡಿ ಬೆರೆಸಿ. ತಣ್ಣಗಿನ ನೀರಿನಲ್ಲಿ ಪೂರಿ ಹಿಟ್ಟಿನಂತೆ ಗಟ್ಟಿಯಾಗಿ ಕಲಸಿ. 5 ನಿಮಿಷ ಹಾಗೆ ಬಿಡಿ. ಸಮೋಸಾ ಚಿತ್ರದಲ್ಲಿದ್ದಂತೆ ಮಾಡಿಡಿ. ಆಮೇಲೆ ಕಾದ ಎಣ್ಣೆಯಲ್ಲಿ ಒಂದೊಂದಾಗಿ ಕೆಂಪಗೆ ಕರಿದಿಡಿ. 








ಮೈಕ್ರೋವೇವ್ ಇದ್ದಲ್ಲಿ ತಣ್ಣಗಾದ ಸಮೋಸಾವನ್ನು ಎರಡು ಟಿಸ್ಯೂ ಪೇಪರ್ ಮಧ್ಯೆ ಇಟ್ಟು 30 ಸೆಕೆಂಡ್ quick/start menu ನಲ್ಲಿ ಹಾಕಿ ಬಿಸಿ ಮಾಡಿ ಸರ್ವ್ ಮಾಡಿ.
ಎಂಜಾಯ್ ಯುವರ್ ವೀಕೆಂಡ್
:-)

Monday, January 6, 2014

ಬಾಳೆಕಾಯಿಯ ಕೂಟು


ಬೇಕಾಗುವುದು: ಎರಡು ಬಾಳೆ ಕಾಯಿ, 2 ಟೇಬಲ್ ಸ್ಪೂನ್ ಕಾಯಿ ತುರಿ, ಅರ್ಧ ಟೀ ಸ್ಪೂನ್ ಮೆಂತೆ+ಸಾಸಿವೆ, ಸಣ್ಣ ತುಂಡು ಹಿಂಗು, ಹಸಿಮೆಣಸಿನಕಾಯಿ, ಹುಣಸೆ ಹುಳಿ, ಉಪ್ಪು. ಒಗ್ಗರಣೆಗೆ ಸಾಸಿವೆ ಕರಿಬೇವು.

ಬಾಳೆಕಾಯಿಯನ್ನು ಚಿಕ್ಕದಾಗಿ (ಚಿತ್ರದಲ್ಲಿರುವಂತೆ)ಚಿಕ್ಕದಾಗಿ ತುಂಡರಿಸಿ ಸ್ವಲ್ಪ ಹೊತ್ತು ನೀರಿನಲ್ಲಿಡಿ. ಆ ಮೇಲೆ ನೀರು ಬಸಿದು ಒಂದು ಹತ್ತು ನಿಮಿಷ ಉಪ್ಪು ಹಚ್ಚಿಡಿ. ಎಣ್ಣೆ ಬಿಸಿ ಮಾಡಿ ಉಪ್ಪು ಹಚ್ಚಿಟ್ಟ ಬಾಳೆಕಾಯಿ ತುಂಡುಗಳನ್ನು ಹಿಂಡಿ ಎಣ್ಣೆಯಲ್ಲಿ ಹಾಕಿ ಗರಿಗರಿಯಾಗಿ ಹುರಿದು ಪಕ್ಕಕ್ಕಿಡಿ. ತಣಿದ ನಂತರ ಡಬ್ಬಿಯಲ್ಲಿ ಹಾಕಿಡಿ

ಸ್ವಲ್ಪ ಎಣ್ಣೆಯಲ್ಲಿ ಮೆಂತೆ, ಸಾಸಿವೆ, ಹಿಂಗು ಮತ್ತು ಮೆಣಸಿನಕಾಯಿಯನ್ನು ಹುರಿದು, ಇವನ್ನು ಕಾಯಿತುರಿ, ಹುಣಸೆಹುಳಿ ಉಪ್ಪು ಇದರೊಂದಿಗೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ಊಟಕ್ಕೆ ಬಡಿಸುವ ಮುನ್ನ ಹುರಿದ ಬಾಳೆಕಾಯಿಯನ್ನು ಬೆರೆಸಿ ಸಾಸಿವೆ ಕರಿಬೇವಿನಿಂದ ಒಗ್ಗರಣೆ ಹಾಕಿ. ಬಿಸಿ ಅನ್ನಕ್ಕೆ ಕಲಿಸಿ, ಒಂದು ತುತ್ತು ಹೆಚ್ಚಿಗೆ ಉಣ್ಣಬಹುದು. :-)
ಇದೇ ರೀತಿ ಸುವರ್ಣಗೆಡ್ಡೆ , ಆಲೂಗಡ್ಡೆ, ಹಾಗಲಕಾಯಿಯ ಕೂಟು ಮಾಡಬಹುದು
:-)

Friday, January 3, 2014

ಮೈಕ್ರೋವೇವ್ ನಲ್ಲಿ ಝಟ್ ಪಟ್ ಚಟ್ನಿಪುಡಿ



ಕೊಬ್ಬರಿಯನ್ನು ತುರಿದಿಟ್ಟುಕೊಳ್ಳಿ.ತಾಜಾ  ಕರಿಬೇವನ್ನು(10ಗರಿಗಳು) ತೊಳೆದಿಡಿ. ಎರಡು ಟೀ ಸ್ಪೂನ್ ಕಡ್ಲೆ ಬೇಳೆ, ಎರಡು ಟೀ ಸ್ಪೂನ್ ಉದ್ದಿನಬೆಳೆ, ಚಿಕ್ಕ ತುಂಡು ಹಿಂಗು, 8-10(ನಿಮಗೆಷ್ಟು ಖಾರ ಬೇಕೋ ಅಷ್ಟು)ಬ್ಯಾಡಗಿ ಮೆಣಸಿನಕಾಯಿ ಇವೆಲ್ಲವನ್ನು ಮೈಕ್ರೋವೇವ್ ನ quick/star menu ನಲ್ಲಿ 30 ಸೆಕೆಂಡ್ ಬಿಸಿ ಮಾಡಿ. ಕೈಯಾಡಿಸಿ ಪುನ: 30 ಸೆಕೆಂಡ್ ಬಿಸಿ ಮಾಡಿ ಪಕ್ಕಕ್ಕಿಡಿ. ಈಗ ತೊಳೆದಿಟ್ಟ ಕರಿಬೇವಿನ ಎಲೆಗಳನ್ನು ಗರಿಯಿಂದ ಬೇರ್ಪಡಿಸಿ ಗರಿಗರಿಯಾಗುವಷ್ಟು ಬಿಸಿ ಮಾಡಿ. ಕೊನೆಗೆ ತುರಿದಿಟ್ಟ ಕೊಬ್ಬರಿಯನ್ನುಕಂದುಬಣ್ಣ ಬರುವವರೆಗೆ ಮೈಕ್ರೋವೇವಿಸಿ  2 ನಿಮಿಷ ಸಾಕಾಗುತ್ತದೆ. ಹೇಗೂ ಚಳಿಗಾಲ ಹುರಿದಿಟ್ಟ ದಿನಸುಗಳು ಬೇಗನೆ ತಣ್ಣಗಾಗುತ್ತೆ. ಉಪ್ಪು, ಚಿಕ್ಕ ತುಂಡು ಹುಣಸೆ ಹುಳಿ , ಚಿಟಿಕೆ ಸಕ್ಕರೆ ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿ. ಮಿಕ್ಸಿ ಸ್ವಲ್ಪ ಸ್ವಲ್ಪವೇ ರನ್ ಮಾಡಿ, ಸ್ಪೂನ್ ನಿಂದ ಕೆದಕುತ್ತ ಇರಿ. ತಣ್ಣಗಾದ ಮೇಲೆ ಬಾಟಲ್ ನಲ್ಲಿ ತುಂಬಿಡಿ.
೧.ನಿಹಾ ಲಂಚ್ ಬಾಕ್ಸ್ ಗೆ ಬ್ರೆಡ್ ಗೆ ಬೆಣ್ಣೆ ಹಚ್ಚಿ ಅದರ ಮೇಲೆ ಈ ಚಟ್ನಿ ಪುಡಿ ಉದುರಿಸಿ ಕೊಟ್ಟಿದ್ದೆ.
೨.ನೀರು ದೋಸೆಗೆ ಒಳ್ಳೆಯ ಕಾಂಬಿನೇಶನ್. ರಾಯರು ಈ ಚಟ್ನಿ ಪುಡಿ ಮೇಲೆ ತೆಂಗಿನ ಎಣ್ಣೆ ಸುರುವಿ ಎಂಜಾಯಿಸುತ್ತಾರೆ. :-)
೩. ಚಪಾತಿಯೊಳಗೆ ಚಟ್ನಿಪುಡಿ ಸ್ಟಫ್ ಮಾಡಿ ಲಟ್ಟಿಸಿ ಹೊಸ ರುಚಿ ಮಾಡಿ. ನಿಹಾಳ ಫ್ರೆಂಡ್ಸ್ ಗೆ ಇದು ತುಂಬಾ ಇಷ್ಟ.
೪.ಯು ಎಸ್ ನಲ್ಲಿರುವ ತಂಗಿ ಮಕ್ಕಳಿಗೆ ಬಿಸಿ ಚಪಾತಿಗೆ vegetable fat/margarine(ಪಾಪ ಅವರಿಗೆ lactose intolerance) ಹಚ್ಚಿ ಅದರ ಮೇಲೆ ಚಟ್ನಿ ಪುಡಿ ಉದುರಿಸಿ ರೋಲ್ ಮಾಡಿ ಕೊಟ್ಟರೆ ತುಂಬ ಇಷ್ಟಪಟ್ಟು ತಿನ್ನುತ್ತಾರೆ
೫.ನಾನು ಪೊಂಗಲ್ ಮೇಲೆ, ಉಪ್ಪಿಟ್ಟಿನ ಮೇಲೆ ಚಟ್ನಿ ಪುಡಿ ಹಾಕಿ ಅದರ ಮೇಲೆ ಮೊಸರು ಸುರಿದು ತಿನ್ನಲು ಇಷ್ಟಪಡುತ್ತೇನೆ.
ಚಟ್ನಿ ಪುಡಿ ಒಂದು ಬಳಸುವ ದಾರಿ ಎಷ್ಟೊಂದು??
ಎಂಜಾಯ್
:-)

Thursday, January 2, 2014

ಖಾರ ದೋಸೆ/ಸಾನ್ನಾಪೋಳೊ

ಈ ಖಾರದ ದೋಸೆಯನ್ನು(ಸಾನ್ನಾಪೋಳೊ) ನಾವು ಕೊಂಕಣಿಯವರು ಊಟದ ಜತೆ ನಂಚಿಕೊಳ್ಳಲು/side dish ಆಗಿ ತಯಾರಿಸುತ್ತೇವೆ

ಬೇಸಿಕ್ ಮಸಾಲೆ ಒಂದೇ


ಕಾಯಿ ತುರಿ, ಕೆಂಪು ಮೆಣಸು, ಚಿಕ್ಕ ತುಂಡು ಹುಣಸೆ ಹುಳಿ, ನೀರಿನಲ್ಲಿ ಎರಡು ತಾಸು ನೆನೆಸಿದ ಅಕ್ಕಿ+ ಕಡಲೆ ಬೇಳೆ.
ಮೊದಲು ಕಾಯಿತುರಿ+ಮೆಣಸು+ಹುಳಿ ನುಣ್ಣಗೆ ರುಬ್ಬಬೇಕು. ಆಮೇಲೆ ಅಕ್ಕಿ ಕಡಲೆ ಬೇಳೆ ಹಾಕಿ ತರಿತರಿಯಾಗಿ(coarse) ರುಬ್ಬಬೇಕು. ಉಪ್ಪು ಬೆರೆಸಿ.
ಇದಕ್ಕೆ ಕ್ಯಾಬೇಜ್ ಅಥವಾ ಮೆಂತೆ ಸೊಪ್ಪುಅಥವಾ ಪಡವಳಕಾಯಿಯ ತಿರುಳು+ಬೀಜ ಬೆರೆಸಿ ಕಾವಲಿ ಮೇಲೆ ದೋಸೆ ತರಹ ಹುಯ್ಯಬಹುದು


ಈ ಚಿತ್ರದಲ್ಲಿ ನಾನು ಕ್ಯಾಬೇಜ್ ಮತ್ತು ನೀರುಳ್ಳಿ ,ಸಣ್ಣಕ್ಕೆ ಕತ್ತರಿಸಿ ಬೆರೆಸಿ ಮಾಡಿರುವುದು. ನೀರುಳ್ಳಿ ಬೇಡದಿದ್ದಲ್ಲಿ  ಹಿಂಗನ್ನು ಬೆರೆಸಿ ಈ ತರಹದ ಖಾರಾ ದೋಸೆ ಮಾಡಬಹುದು ಮಾಡಬಹುದು.
ಮಾಲವಿಕಳ ಪ್ರಕಾರ ಈ ಕ್ಯಾಬೆಜ್ ನ ಸಣ್ಣಾಪೋಳೊ ದಾಳಿತೊವ್ವೆ ಜತೆ terrific combination.
ನನ್ನ fav ಪಡವಲ್ ಕಾಯಿಯ ಬೀಜದ ಸಣ್ಣಾಪೋಳೊ
ಸುಮಾರು ಸಮಯ ಆಗಿತ್ತು food post  ಹಾಕದೆ. ಹಾಗಾಗಿ ಒಪ್ಪಿಸಿಕೊಳ್ಳಿ:
ಮುಂದಿನ experiment ಮೂಲಂಗಿ ಸೊಪ್ಪು ಬೆರೆಸಿ ಮಾಡುವುದು.
:-)