Saturday, January 25, 2014

ಆಲೂ ಮೆಥಿ (ಅಲೂಗಡ್ಡೆ ಮೆಂಥ್ಯೆ ಸೊಪ್ಪಿನ ಪಲ್ಯ)

ಒಂದು ಕಟ್ಟು ಮೆಂಥೆ ಸೊಪ್ಪು, ಎರಡು ಹದ ಗಾತ್ರದ ಆಲೂ ಗಡ್ಡೆ, ಮೂರು ಬೆಳ್ಳುಳ್ಳಿ , ಎರಡು ಹಸಿ ಮೆಣಸಿನಕಾಯಿ, ಅರ್ಧ ಇಂಚ್ ಶುಂಠಿ, ಜೀರಿಗೆ,ಜೀರಿಗೆ+ಕೊತ್ತಂಬರಿ+ಹಿಂಗು ಪುಡಿ,  ಅರಿಶಿನ ಪುಡಿ. ಉಪ್ಪು
ಆಲೂಗಡ್ಡೆಯ ಸಿಪ್ಪೆ ತೆಗೆದು ಸ್ವಲ್ಪ ಉಪ್ಪು ಹಾಗೂ ನೀರಿನೊಟ್ಟಿಗೆ ಬೇಯಿಸಿಟ್ಟುಕೊಳ್ಳಿ. ಕುಕ್ಕರ್ ಒಂದು ವ್ಹಿಸಲ್ ಬಂದ ನಂತರ ಎರಡು ನಿಮಿಷ ಬಿಟ್ಟು ಆಫ್ ಮಾಡಿದರೆ ಸಾಕು, ಯಾಕಂದರೆ ಆಲೂಗಡ್ಡೆ ತುಂಬ ಮೆತ್ತಗಾಗಬಾರದು.

ಎಲೆಗಳನ್ನು ನೀರಲ್ಲಿ ತೊಳೆದು ಕತ್ತರಿಸಿಡಿ. ಬೆಳ್ಳುಳ್ಳು ಶುಂಠಿ ಕೂಡ ಚಿಕ್ಕದಾಗಿ ಕತ್ತರಿಸಿ



ಎಣ್ಣೆ ಬಿಸಿ ಮಾಡಿ ಜೀರಿಗೆಯ ಒಗ್ಗ್ಗರಣೆ ಹಾಕಿ. ಇದಕ್ಕೆ ಮೆಣಸಿನಕಾಯಿ ಸೀಳು, ಸಣ್ಣಕ್ಕೆ ಕತ್ತರಿಸಿಟ್ಟ ಬೆಳ್ಳುಳ್ಳಿ+ಶುಂಠಿ  ಬೆರೆಸಿ ಎರಡು ನಿಮಿಷ ಕೈಯಾಡಿಸಿ, ಆಮೇಲೆ ಕ್ರಮವಾಗಿ, ಅರಿಶಿನ ಪುಡಿ, ಜೀರಿಗೆ+ಕೊತ್ತಂಬರಿ+ಹಿಂಗು ಪುಡಿ, ಬೇಯಿಸಿದ ಆಲುಗಡ್ಡೆ, ಮೆಂತೆಸೊಪ್ಪು, ಉಪ್ಪು ಚಿಟಿಕೆ ಸಕ್ಕರೆ ಬೆರೆಸಿ. ಮದ್ಯ ಮಧ್ಯ ಸುಟ್ಟುಗದಿಂದ ಕೈಯಾಡಿಸ್ತಾ ಇರಿ. ಎರಡು ನಿಮಿಷದ ನಂತರ ಗ್ಯಾಸ್ ಆಫ್ ಮಾಡಿ ಪಲ್ಯವನ್ನು  ಮುಚ್ಚಿಡಿ.

ಚಪಾತಿಯೊಂದಿಗೆ ಚೆನ್ನಾಗಿರುತ್ತೆ. (ನಾನು ಕೊನೆಯಲ್ಲಿ ಸ್ವಲ್ಪ ಆಮ್ ಚೂರ್ ಪೌಡರ್ ಬೆರೆಸಿದ್ದೇನೆ. ಇಲ್ಲದಿದ್ದಲ್ಲಿ ಲಿಂಬೆ ರಸ ಸೇರಿಸಬಹುದು
:-)

No comments: