Monday, January 6, 2014

ಬಾಳೆಕಾಯಿಯ ಕೂಟು


ಬೇಕಾಗುವುದು: ಎರಡು ಬಾಳೆ ಕಾಯಿ, 2 ಟೇಬಲ್ ಸ್ಪೂನ್ ಕಾಯಿ ತುರಿ, ಅರ್ಧ ಟೀ ಸ್ಪೂನ್ ಮೆಂತೆ+ಸಾಸಿವೆ, ಸಣ್ಣ ತುಂಡು ಹಿಂಗು, ಹಸಿಮೆಣಸಿನಕಾಯಿ, ಹುಣಸೆ ಹುಳಿ, ಉಪ್ಪು. ಒಗ್ಗರಣೆಗೆ ಸಾಸಿವೆ ಕರಿಬೇವು.

ಬಾಳೆಕಾಯಿಯನ್ನು ಚಿಕ್ಕದಾಗಿ (ಚಿತ್ರದಲ್ಲಿರುವಂತೆ)ಚಿಕ್ಕದಾಗಿ ತುಂಡರಿಸಿ ಸ್ವಲ್ಪ ಹೊತ್ತು ನೀರಿನಲ್ಲಿಡಿ. ಆ ಮೇಲೆ ನೀರು ಬಸಿದು ಒಂದು ಹತ್ತು ನಿಮಿಷ ಉಪ್ಪು ಹಚ್ಚಿಡಿ. ಎಣ್ಣೆ ಬಿಸಿ ಮಾಡಿ ಉಪ್ಪು ಹಚ್ಚಿಟ್ಟ ಬಾಳೆಕಾಯಿ ತುಂಡುಗಳನ್ನು ಹಿಂಡಿ ಎಣ್ಣೆಯಲ್ಲಿ ಹಾಕಿ ಗರಿಗರಿಯಾಗಿ ಹುರಿದು ಪಕ್ಕಕ್ಕಿಡಿ. ತಣಿದ ನಂತರ ಡಬ್ಬಿಯಲ್ಲಿ ಹಾಕಿಡಿ

ಸ್ವಲ್ಪ ಎಣ್ಣೆಯಲ್ಲಿ ಮೆಂತೆ, ಸಾಸಿವೆ, ಹಿಂಗು ಮತ್ತು ಮೆಣಸಿನಕಾಯಿಯನ್ನು ಹುರಿದು, ಇವನ್ನು ಕಾಯಿತುರಿ, ಹುಣಸೆಹುಳಿ ಉಪ್ಪು ಇದರೊಂದಿಗೆ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿ. ಊಟಕ್ಕೆ ಬಡಿಸುವ ಮುನ್ನ ಹುರಿದ ಬಾಳೆಕಾಯಿಯನ್ನು ಬೆರೆಸಿ ಸಾಸಿವೆ ಕರಿಬೇವಿನಿಂದ ಒಗ್ಗರಣೆ ಹಾಕಿ. ಬಿಸಿ ಅನ್ನಕ್ಕೆ ಕಲಿಸಿ, ಒಂದು ತುತ್ತು ಹೆಚ್ಚಿಗೆ ಉಣ್ಣಬಹುದು. :-)
ಇದೇ ರೀತಿ ಸುವರ್ಣಗೆಡ್ಡೆ , ಆಲೂಗಡ್ಡೆ, ಹಾಗಲಕಾಯಿಯ ಕೂಟು ಮಾಡಬಹುದು
:-)

1 comment:

Swarna said...

Oh Malthi madam.ಇದು ನಿಮ್ಮ ಬ್ಲಾಗ್ ಅಂತ ಗೊತ್ತಿರ್ಲಿಲ್ಲ. ಸೂಪರ್ ರೆಸಿಪಿ. ಟ್ರೈ ಮಾಡ್ತೇನೆ. Thanks