ಬೇಕಾಗುವ ಸಾಮಗ್ರಿ:
ಮೈದಾ- 1 ಕಪ್
ಎಣ್ಣೆ - 1 ಟೇಬಲ್ ಸ್ಪೂನ್ ಹಿಟ್ಟಿಗೆ ಬೆರೆಸಲು
Optional ಅರ್ಧ ಟೀ ಸ್ಪೂನ್ ಸೋಡಾ ಪುಡಿ
ಉಪ್ಪು, ಚಿಟಿಕೆ ಸಕ್ಕರೆ
ಸ್ಟಫಿಂಗ್ ಗೆ
ಬೇಯಿಸಿದ ಆಲೂಗಡ್ಡೆ, ಕ್ಯಾರೆಟ್, ಬಟಾಣಿ, ನೀರುಳ್ಳಿ, ಬೆಳ್ಳುಳ್ಳಿ, ಹಸಿ ಶುಂಠಿ, ಹಸಿಮೆಣಸಿನಕಾಯಿ, ಗರಂ ಮಸಾಲೆ ಪುಡಿ, ಕೊತ್ತಂಬರಿ ಸೊಪ್ಪು
ಒಗ್ಗರಣೆಗೆ ಜೀರಿಗೆ
ಒಗ್ಗರಣೆಗೆ ಸ್ವಲ್ಪ ಎಣ್ಣೆ ಇಟ್ಟು ಅದಕ್ಕೆ ಜೀರಿಗೆ ಹಾಕಿ. ನಂತರ ಸಣ್ಣಕ್ಕೆ ಕತ್ತರಿಸಿದ ನೀರುಳ್ಳಿ ಹಾಕಿ ಕೆಂಪಗೆ ಹುರಿಯಿರಿ. ಇದಕ್ಕೆ ಹಸಿ ಶುಂಠಿ + ಬೆಳ್ಳುಳ್ಳಿ ಪೇಸ್ಟ್ ಬೆರೆಸಿ, ಕತ್ತರಿಸಿದ ಹಸಿಮೆಣಸಿನಕಾಯಿ ಬೆರೆಸಿ, ಗರಂ ಮಸಾಲೆ ಬೆರೆಸಿ ಎರಡು ನಿಮಿಷ ಕೈಯಾಡಿಸಿ. ಇದಕ್ಕೆ ಬೇಯಿಸಿದ ಆಲೂಗಡ್ಡೆ, ಕ್ಯಾರೆಟ್, ಬಟಾಣಿ ಹಾಕಿ, ಕೊನೆಗೆ ಉಪ್ಪು. ಕೊತ್ತಂಬರಿ ಸೊಪ್ಪು ಉದುರಿಸಿ. ತಣ್ಣಗಾಗಲು ಬಿಡಿ
ಮೈದಾಗೆ ಉಪ್ಪು, ಚಿಟಿಕೆ ಸಕ್ಕರೆ ಬೆರೆಸಿ. ಎಣ್ಣೆ ಬಿಸಿ ಮಾಡಿ ಬೆರೆಸಿ. ತಣ್ಣಗಿನ ನೀರಿನಲ್ಲಿ ಪೂರಿ ಹಿಟ್ಟಿನಂತೆ ಗಟ್ಟಿಯಾಗಿ ಕಲಸಿ. 5 ನಿಮಿಷ ಹಾಗೆ ಬಿಡಿ. ಸಮೋಸಾ ಚಿತ್ರದಲ್ಲಿದ್ದಂತೆ ಮಾಡಿಡಿ. ಆಮೇಲೆ ಕಾದ ಎಣ್ಣೆಯಲ್ಲಿ ಒಂದೊಂದಾಗಿ ಕೆಂಪಗೆ ಕರಿದಿಡಿ.
ಮೈಕ್ರೋವೇವ್ ಇದ್ದಲ್ಲಿ ತಣ್ಣಗಾದ ಸಮೋಸಾವನ್ನು ಎರಡು ಟಿಸ್ಯೂ ಪೇಪರ್ ಮಧ್ಯೆ ಇಟ್ಟು 30 ಸೆಕೆಂಡ್ quick/start menu ನಲ್ಲಿ ಹಾಕಿ ಬಿಸಿ ಮಾಡಿ ಸರ್ವ್ ಮಾಡಿ.
ಎಂಜಾಯ್ ಯುವರ್ ವೀಕೆಂಡ್
:-)
:-)
No comments:
Post a Comment