Tuesday, October 22, 2013

ಕೊಬ್ಬರಿ ಮಿಠಾಯಿ/ಬರ್ಫಿ

ಕೊಬ್ಬರಿ ಮಿಠಾಯಿ ಮಾಡುವ ಬಗ್ಗೆ. ತುಂಬ ಸುಲಭದಲ್ಲಿ ಮಕ್ಕಳೂ ಕೂಡ ಇದನ್ನು ತಯಾರು ಮಾಡಬಹುದು. ಕೊಬ್ಬರಿ ತುರಿ ಅದರ ಸರಿಸಮಾನ ಅಳತೆಯ ಸಕ್ಕರೆ, ಅಂದರೆ ಒಂದು ಕಪ್ ಕಾಯಿ ತುರಿ ಗೆ ಒಂದು ಕಪ್ ಸಕ್ಕರೆಯ ಲೆಕ್ಕ, 8-10 ಗೇರುಬೀಜ. ಇವನ್ನು ಮಿಕ್ಸಿಯಲ್ಲಿ ಹಾಕಿ ತರಿತರಿಯಾಗಿ ರುಬ್ಬಿ.ಈ ಮಿಶ್ರಣವನ್ನು ದಪ್ಪ ತಳದ ಪಾತ್ರೆಯಲ್ಲಿ ಹಾಕಿ ಒಲೆ ಮೇಲಿಡಿ. ಮೊದಲಿಗೆ ಮಿಶ್ರಣ ಮೆಲ್ಟ್ ಆಗುತ್ತೆ, ಸ್ವಲ್ಪ ಹೊತ್ತಿನಲ್ಲಿ ಗಟ್ಟಿಯಾಗುತ್ತ ತಳ ಬಿಡುತ್ತ ಹೋಗುತ್ತೆ. ಆಗ ಏಲಕ್ಕಿ ಪುಡಿ ಬೆರೆಸಿ ತುಪ್ಪ ಹಚ್ಚಿದ ತಾಟಿಗೆ ಕೂಡಲೆ ಹಾಕಿ ಸುಟ್ಟುಗದಿಂದ ಸಮತಟ್ಟಾಗಿ ಹರಡಿ. ಸ್ವಲ್ಪ ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರಕ್ಕೆ ಕಟ್ ಮಾಡಿಡಿ. 


ಗೀತಾ ಶೆಣೈ ಸಂಪಾದಕತ್ವದಲ್ಲಿ ಹೊರ ತಂದ 'ಆಧುನಿಕ ಕೊಂಕಣಿ ಕತೆಗಳು' ಕೆಲವು ತುಂಬಾ ಚೆನ್ನಾಗಿವೆ.

ಆಲೂ ಪರಾಠಾ

ಆಲೂ ಪರಾಠಾ ಮಾಡಲು:
ಬೇಯಿಸಿದ್ದ ಆಲೂಗಡ್ಡೆ- 4
ಸಣ್ಣಕ್ಕೆ ಕೊಚ್ಚಿದ ಹಸಿಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು, 
ಒಗ್ಗರಣೆಗೆ: ಎಣ್ಣೆ, ಸಾಸಿವೆ, ಮೇಲಿನ ಕೊಚ್ಚಲು, ಅರಿಸಿನ ಪುಡಿ ಮತ್ತು ಹಿಂಗು ಪುಡಿ

ಮಾಡುವ ವಿಧಾನ:
ಆಲುಗಡ್ದೆಯ ಸಿಪ್ಪೆ ಸುಲಿದು, ತುರಿದಿಟ್ಟು ಕೊಳ್ಳಿ.
ಎಣ್ಣೆ ಒಗ್ಗರಣೆಗೆ ಇಟ್ಟು, ಅದಕ್ಕೆ ಸಾಸಿವೆ ಕರಿಬೇವು+ಹಸಿಮೆಣಸಿಕಾಯಿ+ ಕರಿಬೇವು ಕೊಚ್ಚಲು ಸೇರಿಸಿ, ಆಮೇಲೆ ಹಿಂಗಿನ ಪುಡಿ, ಅರಿಸಿನ ಪುಡಿ ಬೆರೆಸಿ.

ಇದನ್ನು ತುರಿದಿಟ್ಟ ಆಲೂಗಡ್ಡೆಗೆ , ಉಪ್ಪಿನ ಜತೆ ಬೆರೆಸಿಟ್ಟುಕೊಂಡು stuffing ತಯಾರಿಸಿಟ್ಟುಕೊಳ್ಳಿ.

ಗೋದಿ ಹಿಟ್ಟಿನಿಂದ ಮೃದುವಾದ ಹಿಟ್ಟು ಕಲಸಿಟ್ಟುಕೊಳ್ಳಿ.
ಚಪಾತಿಯನ್ನು ಚಿಕ್ಕದಾಗಿ ಲಟ್ಟಿಸಿ, ಒಂದು ಸ್ಪೂನ್ ಸ್ಟಫಿಂಗ್ ಇಟ್ಟು ಪುನ: ಉರುಟು ಮಾಡಿ, ಚಪಾತಿ ಲಟ್ಟಿಸಿದ ಹಾಗೆ ಲಟ್ಟಿಸಿ, ಎಣ್ಣೆ ಹಾಕಿ ಎರಡೂ ಬದಿ ಕೆಂಪಗಾಗುವ ತರಹ ಬೇಯಿಸಿ.

ಇದನ್ನು ಬಿಸಿಯಿದ್ದಾಗಲೇ ಯಾವುದೇ ಸೈಡ್ ಸ ಇಲ್ಲದೇ ತಿನ್ನಬಬಹುದು. or ಇದಕ್ಕೆ ಬೆಣ್ಣೆ, ಲಿಂಬೆ ಹಣ್ಣಿನ ಉಪ್ಪಿನ ಕಾಯಿ ಚೆನ್ನಾಗಿರುತ್ತೆ.
ನಾನು ಕೊತ್ತಂಬರಿ ಸೊಪ್ಪು+ ಪುದಿನಾ ಸೊಪ್ಪಿನ ಡಿಪ್ ತಯಾರಿಸಿದೆ
ಇದನ್ನು ಮಾಡುವ ವಿಧಾನ:
ಸ್ವಲ್ಪ ಮೊಸರನ್ನು ಮಲ್ ಬಟ್ಟೆಯಲ್ಲಿ ಕಟ್ಟಿಡಿ. ನೀರೆಲ್ಲ ಬಸಿದು ಹೋಗಲಿ.
ಮಿಕ್ಸಿಯಲ್ಲಿ ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು ಮತ್ತು ಹಸಿಮೆಣಸಿನಕಾಯಿಯನ್ನು ನೈಸ್ ಆಗಿ ರುಬ್ಬಿ, ಇದಕ್ಕೆ ಗಟ್ಟಿಯಾದ ಮೊಸರು(ಕಟ್ಟಿಟ್ಟ ಮೊಸರು) ಬೆರೆಸಿ ಇನ್ನೊಂದು ಸುತ್ತು ರುಬ್ಬಿ. ಉಪ್ಪು ಸಕ್ಕರೆ ಬೆರೆಸಿ. ನಿಮ್ಮ ಡಿಪ್ ತಯಾರ್.

ವಸ್ತಾದ್ ರೊಟ್ಟಿ

ವಸ್ತಾದ್ ರೊಟ್ಟಿ ಮಾಡುವ ವಿಧಾನ

ಒಂದು ಕಪ್ ಮೈದಾ, ಎರಡು ದೊಡ್ಡ ಚಮಚೆ ಮೊಸರು, ಅರ್ಧ ಟೀ ಸ್ಪೂನ್ ಅಡಿಗೆ ಸೋಡಾ, ಒಂದು ಟೀ ಸ್ಪೂನ್ ಜೀರಿಗೆ, ಮಿಕ್ಸಿಯಲ್ಲಿ ಹಾಕಿದ ಎರಡು ಹಸಿ ಮೆಣಸು, ಉಪ್ಪು , ಚಿಟಿಕೆ ಸಕ್ಕರೆ
ಮೊದಲಿಗೆ ಮೊಸರಿನಲ್ಲಿ ಉಪ್ಪು ಸಕ್ಕರೆ ಮತ್ತು ಸೋಡಾ ಪುಡಿ ಬೆರೆಸಿ. ಚೆನ್ನಾಗಿ ಮಿಕ್ಸ್ ಮಾಡಿ. ಅದು ಬುರುಗು ಬರುತ್ತೆ. ಇದಕ್ಕೆ ಹಸಿಮೆಣಸಿನಕಾಯಿಯ ಪೇಸ್ಟ್ ಬೆರೆಸಿ, ಆಮೇಲೆ ಜೀರಿಗೆ, ಕೊನೆಯಲ್ಲಿ ಮೈದಾ ಬೆರೆಸಿ, ನೀರು ಹಾಕಿ ತುಂಬಾ ಅಂದ್ರೆ ತುಂಬಾsssss ಮೆತ್ತಗಿನ ಕಣಕ (dough)ತಯಾರಿಸಿ. 6 ಗಂಟೆಗಳ ಕಾಲ ಇದನ್ನು ಹುದುಗಲು ಬಿಡಿ. ನಾನು ರಾತ್ರಿ ಹಿಟ್ಟು ತಯಾರಿಸಿ ಬೆಳಗ್ಗೆ ಈ ರೊಟ್ಟಿಯನ್ನು ತಯಾರಿಸುವುದು.


6 ಗಂಟೆಗಳ ನಂತರ ಹಿಟ್ಟು ಉಬ್ಬಿ ಎರಡರಷ್ಟಾಗುತ್ತದೆ. ಹಿಟ್ಟಿನ ದೊಡ್ಡ ಗಾತ್ರದ ಉಂಡೆ ಮಾಡಿ. ಸ್ವಲ್ಪವೆ ತಟ್ಟಿ ಕಾವಲಿಯ ಮೇಲೆ ಚಪಾತಿ ತರಹ ಬೇಯಿಸಿ. ಮೊದಲಿಗೆ ಸ್ವಲ್ಪ ಹೊತ್ತು ಮುಚ್ಚಿ ಬೇಯಿಸಿ, ರೊಟ್ಟಿ ಚೆನ್ನಾಗಿ ಉಬ್ಬುತ್ತೆ. ಆಮೇಲೆ ಎಣ್ಣೆ ಹಾಕಿ ಕವುಚಿ ಹಾಕಿ. ಎರಡು ಬದಿ ಕೆಂಪಾಗುವವರೆಗೆ ಬೇಯಿಸಿ. ಒಳಗಡೆ ಸಾಫ್ಟ್ ಬನ್ ತರಹ ಆಗುತ್ತೆ
ಇದನ್ನು ಬಿಸಿ ಬಿಸಿ ಇದ್ದಾಗ ಬೆಣ್ಣೆ ಮೆತ್ತಿ ತಿನ್ನ ಬಹುದು ಅಥವಾ ಮಾಲವಿಕಾಳ fav ದಾಲ್ ತೊವ್ವೆ ಜತೆ. ನಿಹಾಳ ಫ್ರೆಂಡ್ಸ್ ಗೆ ಇದು ತುಂಬಾ ಇಷ್ಟ ಆಗಿದೆ. ನೀವು ಮಾಡಿ ನೋಡಿ. ಹೇಗೂ ರಜೆಗಳ ಸಾಲು. ನೀರುಳ್ಳಿಗೂ ರೇಟ್ ಏರಿದೆ. ಹಾಗಾಗಿ ಬ್ರೇಕ್ ಫಾಸ್ಟ್ ಗೆ  ರೂಟಿನ್ ದೋಸೆ, ಉಪ್ಪಿಟ್ಟು, ಪೂರಿ-ಪಲ್ಯ ದಿಂದ ಚೆಂಜ್ ಇರುತ್ತೆ. ಇದನ್ಯಾಕೆ ಟ್ರೈ ಮಾಡಬಾರದು?
ತಿಂದಾದ ಮೇಲೆ ’ಅರೇ ಹುಜುರ್ ವಾಹ್ ಉಸ್ತಾದ್ ನಹೀಂ ವಾಹ್ ’ವಸ್ತಾದ್’ ಬೊಲಿಯೇ ಅನ್ನಲು  ಹರಕತ್ ಇಲ್ಲ..:-) :-)

ಬ್ರೆಡ್ ಉಪ್ಪಿಟ್ಟು

ಒಂದು ಪೌಂಡ್ whole wheat Atta ಬ್ರೆಡ್ ಅಥವಾ ಬ್ರೌನ್ ಬ್ರೆಡ್. ಅದನ್ನು ಮಿಕ್ಸಿಯಲ್ಲಿ ರವೆ ಗಾತ್ರಕ್ಕೆ ಪುಡಿ ಮಾಡಿಡಿ.

ಒಗ್ಗರಣೆಗೆ: ತುಪ್ಪ, ಸಾಸಿವೆ, ಕರಿಬೇವಿ, ಜೀರಿಗೆ, ಹಸಿಮೆಣಸಿನಕಾಯಿ, ತಾಜಾ ಶುಂಠಿ, ಈರುಳ್ಳಿ.

ತರಕಾರಿ : ಕ್ಯಾರೆಟ್, ಬಟಾಣಿ ಅಥವಾ ಬೇಯಿಸಿದ ಆಲೂಗಡ್ಡೆ.

ಸ್ವಲ್ಪ ಕಾಯಿ ತುರಿ, ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸ

ಬ್ರೆಡ್ ಅನ್ನು ಮಿಕ್ಸಿ ಅಲ್ಲಿ ಹಾಕಿದಾಗ ಹೀಗೆ ಕಾಣುತ್ತೆ.

ಉಳಿದ ವಿಧಾನ ಉಪ್ಪಿಟ್ಟು ಮಾಡುವಂತೆ. ನೀರು ಹಾಕಲಿಕ್ಕಿಲ್ಲ ಅಷ್ಟೆ. ನಿಮಗೆ ಮೆತ್ತಗಿನ ಉಪ್ಪಿಟ್ಟು ಬೇಕಿದ್ದಲ್ಲಿ ಸ್ವಲ್ಪವೇ ಸ್ವಲ್ಪ ನೀರು ಚಿಮುಕಿಸಿ. ಇದು ನಾನೇ ಕಂಡು ಕೊಂಡ ವಿಧಾನ. ನಿಹಾನ ಟಿಫಿನ್ ಬಾಕ್ಸ್ಗೆ ಹೊಸ ಹೊಸ ಉಪಾಯ. ಅವಳಿಗೆ ಅವಳ ಸ್ನೇಹಿತೆಯರಿಗೆ ಮಾತ್ರವಲ್ಲ ಅಕ್ಕನಿಗೂ ಇದು ತುಂಬ ಇಷ್ಟ ಆಯಿತಂತೆ. ನನಗೆ?? ನನಗೆ ಉಳಿಯಲಿಲ್ಲ. ನಾನು ಟ್ರಯಲ್ ಗೋಸ್ಕರ ಸ್ವಲ್ಪವೇ ತಯಾರಿಸಿದ್ದೆ. ಮಾತ್ರವಲ್ಲ ನಮಗೆ ದೋಸೆ part-2 ಇತ್ತು. :-)
ನೀವು ಮಾಡಿ ನೋಡಿ. ಸಂಜೆ ತಿಂಡಿಗೆ ಚೆನ್ನಾಗಿರುತ್ತೆ.

ಇರಲಿ ಡೀಟೈಲ್ ಆಗಿ ಹೇಗೆ ಮಾಡುವುದೆಂದು ಬರೆದೇ ಬಿಡುತ್ತೇನೆ:
ತುಪ್ಪ ಬಿಸಿ ಮಾಡಿ ಅದಕ್ಕೆ ಸಾಸಿವೆ, ಕರಿಬೇವು, ಜೀರಿಗೆ, ಹಸಿಮೆಣಸಿನಕಾಯಿ ಒಗ್ಗರಣೆಗೆ ಇಡಿ. ಇದಕ್ಕೆ ನೀರುಳ್ಳಿ ಬೆರೆಸಿ ಕೆಂಪಗಾಗುವ ತನಕ ಕೈಯಾಡಿಸಿ, ಬಳಿಕ ಸಣ್ಣಕ್ಕೆ ತುರಿದಿಟ್ಟ ಶುಂಠಿ ಬೆರೆಸಿ. ಕೊನೆಗೆ ಬ್ರೆಡ್ ಪುಡಿ, ಉಪ್ಪಿ, ಚಿಟಿಕೆ ಸಕ್ಕರೆ ಬೆರೆಸಿ ಮುಚ್ಚಿಡಿ. 5 ನಿಮಿಷ ಒಲೆಮೇಲಿರಲಿ. ಆಫ್ ಮಾಡಿ ಪಾತ್ರೆ ಕೆಳಗಿಟ್ಟ ಮೇಲೆ ಕಾಯಿತುರಿ, ಕೊತ್ತಂಬರಿ ಸೊಪ್ಪು ಮತ್ತು ನಿಂಬೆ ರಸ ಸೇರಿಸಿ.

ನನ್ನ ಬಳಿ ಕ್ಯಾರೆಟ್ ಇರಲಿಲ್ಲ ಹಾಗಾಗಿ ಓನ್ಲಿ ಹಸಿ ಬಟಾಣಿ ಮಾತ್ರ ಸೇರಿಸಿದ್ದೇನೆ.

ವೆಜಿಟೆಬಲ್ ಕಟ್ಲೆಟ್

ಬೆಂಗಳೂರಿನಲ್ಲಿ ಮಳೆ and ಚಳಿ. ವೀಕ್ ಎಂಡ್ ಗೆ ಬಿಸಿ ಬಿಸಿ ಕಟ್ಲೆಟ್ ಮಾಡಿ, ನಮ್ಮ ಹಾಗೆ ಕಂಪ್ಯೂಟರ್ ಮುಂದೆ ಫಿಲ್ಮ್ ನೋಡ್ತಾ ತಿನ್ನಿ
ಬೇಕಾಗುವ ಪದಾರ್ಥ
ನಾಲ್ಕು ಬೇಯಿಸಿದ ಆಲೂಗಡ್ಡೆ, ಬೇಯಿಸಿದ ಕ್ಯಾರೆಟ್ ಮತ್ತು ಬಟಾಣಿ

ನೀರುಳ್ಳಿ, ಬೆಳ್ಳುಳ್ಳಿ, ಎರಡು ಬ್ರೆಡ್ ಸ್ಲೈಸ್, ಬ್ರೆಡ್ ಕ್ರಂಬ್ಸ್
ಆಲೂಗಡ್ಡೆಯಸಿಪ್ಪೆ ತೆಗೆದು ಮ್ಯಾಶ್ ಮಾಡಿ ಇದಕ್ಕೆ ಬೇಯಿಸಿದ ಬಟಾಣಿ ಕ್ಯಾರೆಟ್ ಮಿಕ್ಸ್ ಮಾಡಿ. ಎರಡು ಬ್ರೆಡ್ ಸ್ಲೈಸ್ ಅನ್ನು ನೀರಲ್ಲಿ ಅದ್ದಿ ಗಟ್ಟಿಯಾಗಿ ಹಿಂಡಿ ಆಲೂಗಡ್ಡೆ ಮಿಶ್ರಣಕ್ಕೆ ಬೆರೆಸಿ

ಎಣ್ಣೆ ಬಿಸಿ ಮಾಡಿ ಸ್ವಲ್ಪ ಜೀರಿಗೆ, ಸಣ್ಣಕ್ಕೆ ಕತ್ತರಿಸಿದ ನೀರುಳ್ಳಿ+ ಬೆಳ್ಳುಳ್ಳು ಹಾಕಿ ನೀರುಳ್ಳಿ ಕಂದು ಬಣ್ಣ ಬರುವ ತನಕ ಕೈಯಾಡಿಸಿ. ಇದಕ್ಕೆ ಸ್ವಲ್ಪ ಅರಿಶಿನ ಪುಡಿ, ಮೆಣಸಿನ ಪುಡಿ, ಗರಂ ಮಾಸಲೆ ಪುಡಿ ಬೆರೆಸಿ. ಒಲೆಯಿಂದ ಕೆಳಗಿಳಿಸಿ. ತಣ್ಣಗಾದ ಮೇಲೆ ಆಲೂಗಡ್ಡೆ ಮಿಶ್ರಣಕ್ಕೆ ಬೆರೆಸಿ. ರುಚಿಗೆ ಉಪ್ಪು ಬೆರೆಸಿ. ಚೆನ್ನಾಗಿ ಮಿಕ್ಸ್ ಮಾಡಿಡಿ.


ಮಿಶ್ರಣದ ಚಿಕ್ಕ ಚಿಕ್ಕ ಉಂಡೆ ಮಾಡಿ ಅದನ್ನು ಚಪ್ಪಟೆ ಮಾಡಿ, ಬ್ರೆಡ್ ಕ್ರಂಬ್ಸ್ ನಲ್ಲಿ ಮುಳುಗಿಸಿ ಕಾವಲಿ ಮೇಲೆ ಕೆಂಪಾಗುವ crisp ಆಗುವ ತನಕ ಎರಡೂ ಬದಿ ಎಣ್ಣೆ ಹಾಕಿ ಶ್ಯಾಲೋ ಫ್ರೈ ಮಾಡಿ. ಟೊಮ್ಯಾಟೋ ಸಾಸ್ ಜತೆ ಸರ್ವ್ ಮಾಡಿ.


ಟಿಪ್ಸ್: ಬ್ರೆಡ್ ಕ್ರಂಬ್ಸ್ ಹೊರಗಡೆ ಲಭ್ಯ. ಇಲ್ಲದ್ದಿದ್ದಲ್ಲಿ ಮೈಕ್ರೋವೇವ್ ನಲ್ಲಿ ಬ್ರೆಡ್ ಅನ್ನು ಬಿಸಿ ಮಾಡಿ, ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ಹಾಕಿ ಪುಡಿಮಾಡಿಕೊಳ್ಳಿ. ಮೈಕ್ರೋವೇವ್ ಇಲ್ಲದಿದ್ದರೆ ಕಾವಲಿ ಮೇಲಿಟ್ಟು ಅದನ್ನು ನಿಮ್ಮ ಗ್ಯಾಸ್ ಶೆಗಡಿಯ ಕೆಳಗಿಡಿ. ನಿಮ್ಮ ಅಡಿಗೆಯೆಲ್ಲ ಮುಗಿಯುವ ತನಕ ಅದು ಕಟಕ್ ಆಗಿರುತ್ತದೆ ಆಮೇಲೆ ಮಿಕ್ಸಿಯಲ್ಲಿ ಹಾಕಿ. ಇನ್ನೊಂದು ಆಪ್ಷನ್ ಕಾವಲಿಯ ಮೇಲೆ ಸಣ್ಣ ಉರಿಯಲ್ಲಿಡಿ ಬ್ರೆಡ್ ಗಟ್ಟಿಯಾದೊಡನೆ ತೆಗೆದು ಆರಲು ಬಿಡಿ. ಆಮೇಲೆ ಮಿಕ್ಸಿಯಲ್ಲಿ ಹಾಕಿ ಪೌಡರ್ ಮಾಡಿಡಿ.
ಅಥವಾ
ನಾನು ಇವತ್ತು ಬೇಕರಿಯಿಂದ ಟೋಸ್ಟ್ ತಂದು ಅದನ್ನು ಮಿಕ್ಸಿಯಲ್ಲಿ ಹಾಕಿ ಕ್ರಂಬ್ಸ್ ಮಾಡಿಕೊಂಡಿದ್ದೇನೆ
ಆಲೂಗಡ್ಡೆ ಮಿಶ್ರಣವನ್ನು ಫ್ರಿಜ್ ನಲ್ಲಿ ಎರಡು ಮೂರು ದಿನ ಇಡಬಹುದು. ಸಡನ್ ಆಗಿ ಫ್ರೆಂಡ್ಸ್ ಬಂದರೆ ಮಾಡಿಕೊಡಬಹುದು.
ಫೋಟೊಗೋಸ್ಕರ ಮಾತ್ರ ಮೇಲಿನ ಮೂರು ಕಟ್ ಲೆಟ್ ರೆಡಿ ಮಾಡಿದ್ದೇನೆ. ಉಳಿದದ್ದನ್ನು ಆಮೇಲೆ Land and Freedom ಸಿನಿಮಾ ನೋಡ್ತಾ ತಿನ್ನೋದು. ಹೊರಗಡೆ ಕಪ್ಪು ಮೋಡಗಳು.ಹಾಗಾಗಿ ಹೊರಗೆ ಎಲ್ಲೂ ಹೋಗುವ ಕಾರ್ಯಕ್ರಮ ಇಲ್ಲ.  heavy rains will add charm to our cut let eating programme. rain or otherwise our eating prog is fixed. ನೀವು ಇವತ್ತು ಟ್ರೈ ಮಾಡಬಹುದು ಅಥವಾ ನೆಕ್ಸ್ಟ್ ವೀಕ್...ಎಂಜಾಯ್...

ಬದನೆಕಾಯಿ ಬಜ್ಜಿ

ಕೆಂಡದಲ್ಲಿ ಸುಟ್ಟ ಬದನೆಕಾಯಿ -2 Nos

(ಅಥವಾ ನನ್ನ ಹೊಸ ಸ್ಟೈಲ್ ಮೈಕ್ರೋವೇವ್ ನಲ್ಲಿ ಐದು ನಿಮಿಷ ಬದನೆಕಾಯಿಗಳನ್ನು cook/start menu option ನಲ್ಲಿ 5 ನಿಮಿಷ ಇಟ್ಟು ಎರಡು ನಿಮಿಷ ಗ್ಯಾಸ್ ನ ಬೆಂಕಿ ಮೇಲೆ ಸುಡೋದು for that smoky aroma



2-3 ಸಣ್ಣಗೆ ಕತ್ತರಿಸಿದ ಹಸಿ ಮೆಣಸಿನಕಾಯಿ, ಉಪ್ಪು, ಕೊತ್ತಂಬ್ರಿ ಸೊಪ್ಪು, ಸಣ್ಣಕ್ಕೆ ಕತ್ತರಿಸಿದ ನೀರುಳ್ಳಿ, ಸ್ವಲ್ಪ ಮೊಸರು.

ಸುಟ್ಟ ಬದನೆಕಾಯಿಯನ್ನು ಬಿಸಿ ಇರುವಾಗಲೇ ಪ್ಲೇಟ್ ಗೆ ಶಿಫ್ಟ್ ಮಾಡಿ ಅದರ ಮೇಲೆ ಒಂದು ದೊಡ್ಡ ಪಾತ್ರೆ ಉಲ್ಟಾ ಇಡಿ. ಐದು ನಿಮಿಷ, ಅಂದ್ರೆ ಬದನೆಕಾಯಿ ಒಳಗಡೆ ಪೂರ್ತಿ ಬೇಯುತ್ತೆ. ಸ್ವಲ್ಪ ತಣ್ಣಗಾದ ಮೇಲೆ ಮೇಲಿನ ಸಿಪ್ಪೆ ತೆಗೆದುಬಿಡಿ. ಇನ್ನು ಸಿಪ್ಪೆ ಉಳಿದಿದ್ದ್ರೆ ನಿಧಾನವಾಗಿ ತೊಳೆದು ಬಿಡಿ. ಆಮೇಲೆ ಅದನ್ನು ಸ್ಪೂನ್ ನಿಂದ ಮ್ಯಾಶ್ ಮಾಡಿ, ಉಳಿದ ಪದಾರ್ಥ ಬೆರೆಸಿ ಬಿಸಿ ಅನ್ನದೊಂದಿಗೆ ವೆರಿ ವೆರಿ ಟೇಸ್ಟೀ

ಅಥವಾ

ಮ್ಯಾಶ್ ಮಾಡಿದ ಬದನೆಕಾಯಿಗೆ ಹಿಂಗು ನೀರು, ಉಪ್ಪು, ಬಿಸಿ ಮಾಡಿದ ತೆಂಗಿನ ಎಣ್ಣೆ ಸುರುವಿ ಮಿಕ್ಸ್ ಮಾಡಿ..ಇದಂತೂ ತಯಾರಾಗುವಾಗ ಘಮ ಘಮ ಅನ್ನುತ್ತೆ. ಬಿಸಿ ಅನ್ನದ ಜತೆ ಕಲಿಸಿಕೊಂಡು ಎರಡು ತುತ್ತು ಹೆಚ್ಚಿಗೆ ಊಟ ಮಾಡಿ ಮರುದಿನ ಒಂದು ರೌಂಡ್ extra ವಾಕ್ ಹೋಗಿ :-) ನನ್ನ ಆಶೀರ್ವಾದ ಸದಾ ನಿಮ್ಮೊಂದಿಗೆ...ಮಾತೆ ಮಾಲತಿ ಅಂತ ಸುಮ್ಮನೇನಾ ಮತ್ತೆ?

ಅಥವಾ ನಾರ್ಥ್ ಇಂಡಿಯನ್ ಸ್ಟೈಲ್ (will add the picture when i prepare this)

ಬೆಳ್ಳುಳ್ಳಿ-ಶುಂಠಿ ಪೇಸ್ಟ್, ನೀರುಳ್ಳಿ, ಟೊಮೇಟೊ ಅಥವಾ ಮೊಸರು, ಕೊತ್ತಂಬರಿ ಸೊಪ್ಪು, ಗರಂ ಮಸಾಲೆ, red chilly powder, turmeric powder

ಮೊದಲಿಗೆ ಬಿಸಿ ಎಣ್ಣೆಯಲ್ಲಿ ಬೆಳ್ಳುಳ್ಳಿ ಶುಂಠಿ ಪೇಸ್ಟ್ ಕೆಂಪಗೆ ಹುರಿಯಿರಿ ಇದಕ್ಕೆ ಸಣ್ಣಕ್ಕೆ ಕತ್ತರಿಸಿದ ನೀರುಳ್ಳಿ ಹಾಕಿ ಪಿಂಕ್ ಆಗುವ ತನಕ ಹುರಿಯಿರಿ. ಸ್ವಲ್ಪ ಅರಿಶಿನ ಪುಡಿ ಹಾಕಿ, ಇದಕ್ಕೆ ಟೊಮೇಟೊ ಅಥ್ವಾ ಮೊಸರು ಬೆರೆಸಿ, ಮೆಣಸಿನ ಪುಡಿ, ಗರಂ ಮಸಾಲೆ ಬೆರೆಸಿ ಎರಡು ನಿಮಿಷ ಕೈಯಾಡಿಸಿ, ಕೊನೆಯಲ್ಲಿ ಮ್ಯಾಶ್ಡ ಬದನೆಕಾಯಿ ಬೆರೆಸಿ ಎರಡು ನಿಮಿಷ  ಒಲೆ ಮೇಲಿರಲಿ..ಅಮೇಲೆ ಚಪಾತಿ/ಫುಲ್ಕಾ ಜತೆ ಸರ್ವ್ ಮಾಡಿ..

ತಿಮರೆ/ಒಂದೆಲಗ/ಬ್ರಾಹ್ಮಿ/ಏಕ್ಪಾನಿ/ಊರಗೆ ತಂಬ್ಳಿ


ತಂಪು ಮತ್ತು ಹುಳಿ ಸೇರಿ ತಂಪುಳಿ. ಇದೇ ತಂಬುಳಿ, ತಂಬಳಿ, ತಂಬ್ಳಿ ಆಗಿರಬಹುದೇ? ಇದು ತಣ್ಣಗಿನ ಪದಾರ್ಥ. ಆರೋಗ್ಯಕರ ಸಹಜ ಆಹಾರ

ತಿಮರೆ ಒಂದು ಹಿಡಿ/ಮುಷ್ಠಿ, ಅರ್ಧ ಕಪ್ ಹೆರೆದ ತಾಜಾ ತೆಂಗಿನಕಾಯಿ ತುರಿ, 8-10 ಕಾಳು ಮೆಣಸು, 1/2 ಟೀ ಚಮಚೆ ಜೀರಿಗೆ, ಚಿಕ್ಕ ತುಂಡು ಹುಣಸೆ ಹುಳಿ, (ಬೇಕಾದರೆ ಹಸಿ ಶುಂಠಿಯನ್ನು ಕೂಡ ಬಳಸಬಹುದು) ರುಚಿಗೆ ಉಪ್ಪು

ಒಗ್ಗರಣೆಗೆ- ತುಪ್ಪ, ಸಾಸಿವೆ, ಒಣಮೆಣಸು

ಎಲ್ಲವನ್ನು ಸೇರಿಸಿ ನುಣ್ಣಗೆ ರುಬ್ಬಿ,ಉಪ್ಪು ಬೆರೆಸಿ 4 ಕಪ್ ಮಜ್ಜಿಗೆ ಬೆರೆಸಿ ಮತ್ತು ತುಪ್ಪದಲ್ಲಿ ಒಗ್ಗರಣೆ ಹಾಕಿ ಈ ತಂಬ್ಳಿ ಗೆ ಬೆರೆಸಿ.
ಬೇಸಗೆಗೆ ಹೇಳಿ ಮಾಡಿಸಿದ್ದು

ತಿಮರೆಯ ಔಷಧೀಯ ಗುಣಗಳು: ನೆನಪಿನ ಶಕ್ತಿಯನ್ನು ಚುರುಕುಗೊಳಿಸುತ್ತದೆ. ಮುಂಜಾನೆ (ಭ್ರಾಹ್ಮಿ ಮುಹೂರ್ತದಲ್ಲಿ) ಎದ್ದು ಖಾಲಿಹೊಟ್ಟೆಯಲ್ಲಿ ಒಂದೆಲಗವನ್ನು ತಿನ್ನಬೇಕಂತ ನಮ್ಮ ಅಜ್ಜ ಹೇಳುತ್ತಿದ್ದರು..

ಮೇಲೆ ಹೇಳಿಕೊಟ್ಟ ತಂಬ್ಳಿಗೆ ಒಂದೆಲಗದ ಬದಲಾಗಿ ಸೀಬೆಮರದ ಕುಡಿ, ಸಾಂಬಾರ್ ಬಳ್ಳಿ ಎಲೆ ಕೂಡ ಬಳಸಿ ತಂಬ್ಳಿ ಮಾಡಿ ಬಾಯಿರುಚಿ ಹೆಚ್ಚಿಸಿ ಕೊಳ್ಳಬಹುದು

ನಾವೆಲ್ಲ ಸಾಧರಣವಾಗಿ ಏಕಾದಶಿಯ ಉಪವಾಸದ ನಂತರ ಉದ್ದಿನ ದೋಸೆಗೆ ಒಂದೆಲಗದ ಚಟ್ನಿ ಮಾಡುತ್ತಿದ್ದ ನೆನಪು.
ಯಶವಂತಪುರ ಭಾನುವಾರದ ಸಂತೆಯಲ್ಲಿ ಎಲ್ಲ ತರದ ಸೊಪ್ಪು ಧಾರಾಳವಾಗಿ ಲಭ್ಯ.
ಒಂದು ಪೋಸ್ಟ್ ಸ್ಕ್ರಿಪ್ಟ್: ನಿಹಾ ಕಾಲೆಜ್ ನಲ್ಲಿ 'ಫೈಯರ್ ಲೆಸ್ ಕುಂಕಿಂಗ್' ಅಂತ ಎಕ್ಸಿಭಿಷನ್ ಹಮ್ಮಿಕೊಂಡಿದ್ರು. ಆಗ ನಿಹಾ ಸಾಲ್ಟ್ ಬಿಸ್ಕಿಟ್ಸ್ ಮೇಲೆ ಹಾಲಿನ ಕ್ರೀಮ್, ಬೊಯ್ಲಡ್ -ಮ್ಯಾಶ್ಡ್ ಆಲೂಗಡ್ಡೆ, ತುರಿದ ಕ್ಯಾರೆಟ್, ಸೌತೆಕಾಯಿ ಮತ್ತು ಕರಿಮೆಣಸಿನ ಪುಡಿ ಉದುರಿಸಿ ಕೊಟ್ಟಿದ್ದಳು. ಆಗ ನಾನು ಅವಳಿಗೆ ನಮ್ಮ ತಂಬಳಿಗಳು ಪರ್ಫೆಕ್ಟ್ ಎಕ್ಸಾಂಪಲ್ಸ್ ಫಾರ್ ಬೆಂಕಿರಹಿತ ಅಡುಗೆ ಅಂತ ಹೇಳಿದ್ದೆ. ಒಗ್ಗರಣೆ ಹಾಕದಿದ್ರೆ ಅದೇ ಬೆಂಕಿರಹಿತ ಆಯ್ತಲ್ಲವಾ?? ರುಬ್ಬುವ ಕೆಲಸಕ್ಕೆ ಮಿಕ್ಸಿ ಬಳಸದೇ ರುಬ್ಬುವ ಕಲ್ಲು ಬಳಸಿದರೆ ರೆ???

ಹಲಸಿನಕಾಯಿಯ ಕಟ್ ಲೆಟ್

ಹಲಸಿನ ಕಾಯಿಯ ಹೋಳನ್ನು ಉಪ್ಪು  ಮತ್ತು ಸ್ವಲ್ಪವೆ ನೀರು ಸಿಂಪಡಿಸಿ ಬೇಯಿಸಿ. ಆ ಮೇಲೆ ನೀರು ಸಂಪುರ್ಣ ವಾಗಿ ಬಸಿದು ಬಿಡಿ. ಇದಕ್ಕೆ ಬೇಯಿಸಿದ ಕ್ಯಾರೆಟ್ ಬಟಾಣಿ ಕಾಳು, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಜೀರಿಗೆ-ಕೊತ್ತಂಬರಿ ಪುಡಿ, ಸಣ್ಣಗೆ ಕತ್ತರಿಸಿದ ನೀರುಳ್ಳಿ, ಆಮ್ ಚೂರ್ ಪುಡ /.ಅಥ್ವಾ ಹುಣಸೆ ಹಣ್ಣಿನ ಪೇಸ್ಟ್, ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು- ಬೆರೆಸಿ. ಚೆನ್ನಾಗಿ ಮಿಕ್ಸ್ ಮಾಡಿ. ಕೆಳಗಿನ ಆಕಾರದಲ್ಲಿ ಮಾಡಿ ಇಡಿ.  ಇವನ್ನು ಅಕ್ಕಿ ಹಿಟ್ಟು/ ಬ್ರೆಡ್ ಕ್ರಂಬ್ಸ್ ನಲ್ಲಿ ಮುಳುಗಿಸಿ/ಹೊರಳಿಸಿ (i am not getting that word in Kannada) ಕಾವಲಿ ಮೇಲೆ ಸ್ವಲ್ಪವೇ ಎಣ್ಣೆ ಹಾಕಿ shallow fry ಅಥವ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ ಟೊಮೇಟೊ ಕೆಚ್ ಅಪ್ ನೊಂದಿಗೆ ಸರ್ವ್ ಮಾಡಿ
ತವಾ ಫ್ರೈ

Deep Fry

Steam the raw jackfruit pieces with salt and little water till soft. drain the excess water. Add boiled peas and carrot, garlic-ginger paste, cumin-coriander seed powder, finely chopped onions, raw mango powder or tamarind paste, chopped coriander leaves- mix well. roll into balls and flatten.Coat these balls in rice flour or  bread crumbs and either shallow fry on a griddle or deep fry in oil and serve with Tomato ketchup.
This is a filling and nutritious food.

ತೆಂಗಿನಹಾಲಿನಲ್ಲಿ ತರಬೂಜ



ಏನಿಲ್ಲ. ಎಲ್ಲರೂ ಮಾಡಬಹುದು. ಚಿಕ್ಕ ಮಕ್ಕಳು ಕೂಡ. ಬೇಸಿಗೆಯಲ್ಲಿ ನಾ ಬೆಳಿಗ್ಗೆ ಎದ್ದು ಮಾಡೋದು ಜ್ಯೂಸ್. ಜ್ಯೂಸ್ ನಲ್ಲಿ ಮಾವಿನಕಾಯಿ ಪನ್ನಾ, ಕಲ್ಲಂಗಡಿ ಹಣ್ಣಿನ ಜ್ಯೂಸ್, ಲಿಂಬೆ ಹಣ್ಣಿನ ಜ್ಯೂಸ್, ಮೂಸಂಬಿ + ಆರೆಂಜ್ ಜ್ಯೂಸ್ (ಗಂಗಾ-ಜಮುನಾ), ಪುನರ್ಪುಳಿ ಜ್ಯೂಸ್, ರಾಗಿ ಜ್ಯೂಸ್, ಹೆಸರುಕಾಳಿನ ಜ್ಯೂಸ್ ಮುಂತಾದವು. ಬೆಳಿಗ್ಗೆ ಎದ್ದು ಅದನ್ನು ತಯಾರಿಸಿ ಫ್ರಿಜ್ ನಲ್ಲಿಟ್ಟರೆ ನನ್ನ ಕೆಲಸ ಮುಗೀತು. ಮನೆಗೆ ನೆಂಟರು, ಇಷ್ಟರು ಬಂದರೆ ನನ್ನ ಜ್ಯೂಸ್ ರೆಡಿ ಇರುತ್ತೆ. ಸೋಡಾ ಕೂಡ ಫ್ರಿಜ್ ನಲ್ಲಿರುತ್ತೆ.


ತೆಂಗಿನ ಹಾಲಿನಲ್ಲಿ ಸಣ್ಣಕ್ಕೆ ಕಟ್ ಮಾಡಿದ ತರಬೂಜ ಹಣ್ಣನ್ನು, ಬೆಲ್ಲ ಹಾಗೂ ಏಲಕ್ಕಿ ಬೆರೆಸುವುದು. ಅಷ್ಟೆ. ಈಗಂತು ತೆಂಗಿನ ಹಾಲು/ ತೆಂಗಿನ ಹಾಲಿನ ಪೌಡರ್ ಕೂಡ ಸಿಗುತ್ತೆ. ಏಲಕ್ಕೆ ಪುಡಿ ಮಾಡಿ ಫ್ರಿಜ್ ನಲ್ಲಿಡಬಹುದು. ಯಾವಾಗಬೇಕೆಂದಾಗ ಕಾಯಿ ರಸ ಮುಂತಾದವುಗಳನ್ನು ಮಾಡಬಹುದು. ಅಥವ ಬಲಿತ ಹಣ್ಣನ್ನು ಮಿಕ್ಸಿಯಲ್ಲಿ ಹಾಕಿ ಸಕ್ಕ್ರೆ ಹಾಲು ಬೆರೆಸಿದರೆ ಮಿಲ್ಕ್ ಶೇಕ್ ಮಾಡಬಹುದು. ಅಥವ ಸುಮ್ನೆ ತಿರುಳಿಗೆ ನೀರು ಸಕ್ಕರೆ ಬೆರೆಸಿ ಜ್ಯೂಸ್ ಮಾಡಬಹುದು. ಶಕ್ರೆ/ಬೆಲ್ಲ ಬಳಸವುದಕ್ಕಿಂತ ಜೇನುತುಪ್ಪ ಬೆರೆಸುವುದು ಆರೋಗ್ಯಕ್ಕೆ ಇನ್ನೂ ಉತ್ತಮ.
ಬೇಸಗೆಯಲ್ಲಿ ಮಸಾಲೆ ಪದಾರ್ಥಗಳಿಗಿಂತ ಕಾಯಿ ರಸ, ತಂಬುಳಿ ಮುಂತಾದವು ಒಳ್ಳೆಯದು.

ಒಂದು ಬಿಸಿ ಬಿಸಿ ಹೊಸ ರುಚಿ: ಮೊನ್ನೆ Nataraju (ಇದರ ಮುಂಚಿನ ಪೋಸ್ಟ್) ಪುಸ್ತಕ ಬಿಡುಗಡೆಯ ಖುಶಿಗೆ ಮನೆಗೆ ಬರುವಾಗ ನಂದಿನಿ ಪೇಡಾ ತಂದಿದ್ದರು. ಸಿಕ್ಕಾಪಟ್ಟೆ ಸಿಹಿ. ತಿನ್ನಕ್ಕೆ ಆಗದಷ್ಟು. ಮತ್ತೆ ಕೊಂಕಣಿಗಳು ನಾವು ಸುಮ್ಮನೆ ಇರ್ತೀವಾ? ಪೇಡಾ ಜತೆ ಸ್ವಲ್ಪ ಕರಬೂಜ ಹಣ್ಣಿನ ತಿರುಳು ಬೆರೆಸಿ ಮಿಕ್ಸಿಗೆ ಹಾಕಿ ಫ್ರೀಜ್ ಮಾಡಿ..ಒಂದು ಹೊಸ ತರಹ ಐಸ್ ಕ್ರೀಮ್ ರೆಡಿ..:-) ಅಕ್ಕ ಮಹಾ ಜ್ಣಾನಿಯಂತೆ ತಲೆಯೆಲ್ಲ ಅಲ್ಲಾಡಿಸಿ not bad ಅಂದಾಗ ನಂಗೆ ಖುಶಿಯೋ ಖುಶಿ. ಇದಕ್ಕೆ ನಾವು orange + banana slice ಹಾಕಿ ತಿಂದಿದ್ದು...it was tasty..ಬೇಕಾದರೆ ನಂಬಿ....:-)


you need diced cantaloupes also popularly known as muskmelons, jaggery(cane sugar) and powdered cardamom to prepare this cool summer drink. Add the diced cantaloupe pieces in coconut milk and serve chilled, or you can make a pulp of this fruit in a blender and add milk and sugar and have a nice cool milk shake. :-) Alternatively blend the pulp add sufficient water, sugar to taste and chill and have muskmelon juice. instead of sugar/jaggery u can even add honey which is an healthier option
I absolutely detest summer and think of various ways to keep my cool. This is but one of them.

ಹಾಗಲಕಾಯಿ-ಮಾವಿನಕಾಯಿ ಮೆಣ್ಸಗಾಯಿ

1 ಒಂದು ಹದ ಗಾತ್ರದ ಮಾವಿನಕಾಯಿ
2 ಹಾಗಲಕಾಯಿ
1/2 ಟೀ ಚಮಚ ಉದ್ದಿನ ಬೇಳೆ
1/2 ಟೀ ಚಮಚ ಕಡಲೆ ಬೇಳೆ
1/2 ಟೀ ಚಮಚ ಮೆಂತೆ
1 ಚಮಚ ಕೊತ್ತಂಬರಿ
1/4 ಟೀ ಚಮಚ ಜೀರಿಗೆ
1 ಟೇಬಲ್ ಸ್ಪೂನ್ ಕಾಯಿ ತುರಿ
ಸಣ್ಣ ಹಿಂಗಿನ ತುಂಡು
ಹುರಿದ ಕೆಂಪು ಮೆಣಸು 5-6
ಎರಡು ಹಸಿಮೆಣಸಿನಕಾಯಿ
ದೊಡ್ಡ ಚೂರು ಬೆಲ್ಲ, ರುಚಿಗೆ ಉಪ್ಪು, ಸ್ವಲ್ಪ ಹುಣಸೆ ಹುಳಿ






ಮಾವಿನ ಕಾಯಿ ಹೋಳು ಮಾಡಿಡಿ. ಹಾಗಳಕಾಯಿಯ ಹೋಳಿ ಗೆ ಉಪ್ಪು ಹಚ್ಚಿಡಿ. ಅರ್ಧ ಗಂಟೆ ಬಿಟ್ಟು ನೀರಲ್ಲಿ ಹಾಕಿ. ಮೇಲಿನ ಪಟ್ಟಿಯಲ್ಲಿದ್ದ ಸಾಂಬಾರು ಪದಾರ್ಥಗಳನ್ನು ಒಂದೊಂದಾಗಿ ಎಣ್ಣೆಯಲ್ಲಿ ಕೆಂಪಗೆ ಹುರಿಯಿರಿ. ಕೊನೆಯಲ್ಲಿ ಕಾಯಿ ತುರಿ ಹಾಕಿ ಕೆಂಪಗೆ ಹುರಿಯಿರಿ. ಹುಣಸೆ ಹುಳಿ ಕೆಂಪು ಮೆಣಸಿನ ಒಟ್ಟಿಗೆ ತರಿತರಿಯಾಗಿ ರುಬ್ಬಿ. ಎಣ್ಣೆ ಯಲ್ಲಿ ಸಾಸಿವೆ ಕರಿಬೇವಿನಿಂದ ಒಗ್ಗರಣೆ ಹಾಕಿ. ಅದಕ್ಕೆ ಉದ್ದಕ್ಕೆ ಸೀಳಿದ ಎರಡು ಹಸಿಮೆಣಸಿನಕಾಯಿ ಹಾಕಿ ಕೈಯಾಡಿಸಿ. ಇದಕ್ಕೆ ಹೋಳುಮಾಡಿಟ್ಟುಕೊಂಡ ಮಾವಿನಕಾಯಿ + ಹಾಗಲಕಾಯಿ ಹಾಕಿ ನೀರು ಹಾಕಿ ಬೇಯಿಸಿ.ರುಬ್ಬಿಟ್ಟ ಮಸಾಲೆ ಬೆರೆಸಿ. ಕುದಿ ಬರುವಾಗ ಉಪ್ಪು ಬೆಲ್ಲ ಬೆರೆಸಿ.

ಬಿಸಿ ಬಿಸಿ ಅನ್ನದೊಂದಿಗೆ ಚೆನ್ನಾಗಿರುತ್ತೆ.

ಮಜ್ಜಿಗೆ ಕಡಿ ಮತ್ತು ವಡಿ

ಹಿಂದಿನ ವಾರ ಮನೆಯಲ್ಲಿ ಕೋಲ್ಡ್, ಗಂಟಲು ನೋವು ಕೆಮ್ಮು ಅಂತ ನನ್ನ ಬಳಿ ಮಜ್ಜಿಗೆ stock ಸುಮಾರು ಉಳ್ಕೊಂಡಿತ್ತು ಫ್ರಿಜ್ ನಲ್ಲಿ. ಹೀಗೆ ಸುಮಾರು ದಿನ ಮಜ್ಜಿಗೆ ಸ್ಟಾಕ್ ಆದಾಗೆಲ್ಲ ಈ ಕಡಿ ಮಾಡುತ್ತೇನೆ. ನನ್ನ ಫೇವರಿಟ್ ಹಾಗೂ ಒಂದು ತುತ್ತು ಹೆಚ್ಚೇ ಊಟ ಒಳಸೇರುತ್ತೆ.
ಮಜ್ಜಿಗೆ (ಹುಳಿಯಾದಷ್ಟು ಹೆಚ್ಚು ರುಚಿ) 4ಗ್ಲಾಸ್, ಅರ್ಧ ಟೀ ಸ್ಪೂನ್ ಕಡಲೆ ಹಿಟ್ಟು ಹಾಕಿ ಗಂಟಾಗದಂತೆ ಮಿಶ್ರ ಮಾಡಿದಿ
ಎಣ್ಣೆಯಲ್ಲಿ ಜೀರಿಗೆ, ಸಾಸಿವೆ, ಕರಿಬೇವು, ಎರಡು ಬೆಳ್ಳುಳ್ಳಿ ಎಸಳು, ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ, ಒಂದು ಒಣಮೆಣಸಿನಕಾಯಿ, ಸ್ವಲ್ಪ ಅರಿಶಿನ ಪುಡಿ (ಲಭ್ಯವಿದ್ದಲ್ಲಿ ಎರಡು- ಮೂರು ಮೆಂತೆ ಎಲೆ ಅಥವ ಕಾಲು ಟಿಸ್ಪೂನ್ ಕಸೂರಿ ಮೇಥಿ) ಹಾಕಿ ಒಗ್ಗರಣೆ ತಯಾರು ಮಾಡಿಕೊಳ್ಳಿ. ಇದಕ್ಕೆ ಮಜ್ಜಿಗೆಯನ್ನು ಬೆರೆಸಿ. ಒಂದು ಕುದಿ ಬರೆಸಿ ಕೆಳಗಿಡಿ. ಕೊತ್ತಂಬರಿ ಸೊಪ್ಪು ಉದುರಿಸಿ
ವಡಿ:
usually ನಾನು ದೊಣ್ಣ ಮೆಣಸಿನಕಾಯಿ ಚಿಕ್ಕದಾಗಿ ಕತ್ತರಿಸಿ ಅದರ ಬೋಂಡಾ ಮಾಡಿ, ಕಡಿ ಬಡಿಸುವ ಮುನ್ನ ಅದನ್ನು ಕಡಿಯಲ್ಲಿ ಬೆರೆಸುವುದು.
ಈ ಸಲ ಸ್ವಲ್ಪ ಬೇರೆ ತರಹ ವಡಿ ಮಾಡಿದೆ
ಬೆಂಡೆಕಾಯಿ, ಹಸಿಮೆಣಸಿನಕಾಯಿ, ನೀರುಳ್ಳಿ, ದೊಣ್ಣಮೆಣಸು ಇವೆಲ್ಲವನ್ನು ಚಿಕ್ಕ ಚಿಕ್ಕದಾಗಿ ಕತ್ತರಿಸಿ ಉಪ್ಪು ಹಚ್ಚಿಟ್ಟೆ. ಸ್ವಲ್ಪ ಸಮಯಕ್ಎ ನೀರು ಬಿಟ್ಟಿತು. ಈ ನೀರಿಗೆ ಬೇಕಾದಷ್ಟೆ ಬೇಸನ/ಕಡಲೆಹಿಟ್ಟು ಬೆರೆಸಿ ಎಣ್ಣೆಯಲ್ಲಿ ಚಿಕ್ಕ ಚಿಕ್ಕ ಬೋಂಡ ಕರೆದಿಟ್ಟೆ. ಬೆಂಡೆಕಾಯಿಯಿಂದ ಬೋಂಡ ಕ್ರಿಸ್ಪ್ ಆಯ್ತು ಮತ್ತು ನೀರುಳ್ಳಿಯಿಂದ ಒಳ್ಳೆ ಪರಿಮಳ. ನಮ್ಮ ಮನೆಯಲ್ಲಿ ಎಲ್ಲರಿಗೂ ಇಷ್ಟ ಆಯ್ತು. ಇನ್ನು ನೀವು ಟ್ರೈ ಮಾಡಿ ನನಗೆ ಹೇಳಿ
ನಾನಂತು ಆಗಾಗ ಇದನ್ನು ಮಾಡ್ತಿರ್ತೀನಿ.
:-)

ಕೋಕೊನಟ್ ರೈಸ್



ಅದನ್ನು ತಯಾರಿಸಲು: 
1. ಅನ್ನ ಮಾಡಿಟ್ಟುಕೊಂಡು ಅದು ತಣ್ಣಗಾಗಲು ಬಿಡಿ. ಅನ್ನ ಬಿಡಿ ಬಿಡಿಯಾಗಿರಲಿ
2. ಜೀರಿಗೆ, ಮೆಂತೆ, ಹಿಂಗು ಇವುಗಳನ್ನು ಎಣ್ಣೆ ಹಾಕದೇ ಹುರಿದು, ಅದು ತಣ್ಣಗಾದ ನಂತರ ಪುಡಿಮಾಡಿಟ್ಟುಕೊಳ್ಳಿ.
3. ಒಗ್ಗರಣೆಗೆ ಉದ್ದಿನ ಬೇಳೆ, ಸಾಸಿವೆ, ಸ್ವ್ಲಲ್ಪ ಹೆಚ್ಚೆ ಕರಿಬೇವು ಹಾಕಿ, ನಾಲ್ಕೈದು ಉದ್ದಕ್ಕೆ ಸೀಳಿದ ಹಸಿಮೆಣಸಿನಕಾಯಿ ಹಾಕಿ. 
ಇದಕ್ಕೆ ಮಾಡಿಟ್ಟುಕೊಂಡ ಪುಡಿ ಬೆರೆಸಿ. ಅನ್ನ ಬೆರೆಸಿ ಉಪ್ಪು ಸಕ್ಕರೆ ಹಾಕಿ. ೫ ನಿಮಿಷ ಮುಚ್ಚಿಡಿ. ಆಮೇಲೆ ಅದರ ಮೇಲೆ ತಾಜಾ ಹೆರೆದ ಕಾಯಿ ತುರಿ ಸಿಂಪಡಿಸಿ.
kerala coconut rice ರೆಡ್ಡಿ ಟು ಈಟ್..

ನೆಲ್ಲಿಕಾಯಿ ಅನ್ನ

ಬೇಕಾಗುವ ಪದಾರ್ಥ:
ಮೂರು ದೊಡ್ಡ ನೆಲ್ಲಿಕಾಯಿ. ಅದನ್ನು ತುರಿದು ಹೀಗೆ ಉಪ್ಪು ಸಕ್ಕರೆ ಬೆರೆಸಿಡಿ.

ಮೆಂತೆ+ಜೀರಿಗೆ+ಹಿಂಗು ಎಣ್ಣೆ ಹಾಕದೆ ಹುರಿಯಿರಿ. ತಣ್ಣಗಾದ ಮೇಲೆ ಕುಟ್ಟಿ ಪುಡಿ ಮಾಡಿ

ಒಗ್ಗರಣೆಗೆ:
ಉದ್ದಿನಬೇಳೆ, ಸಾಸಿವೆ, ಕರಿಬೇವು, ಶೆಂಗಾ, ಮೂರು ಹಸಿ ಮೇಣಸಿನಕಾಯಿ

ಮೊದಲಿಗೆ ಕಾದ ಎಣ್ಣೆಯಲ್ಲಿ ಒಗ್ಗರಣೆಗೆ ಹಾಕಿ. ಇದಕ್ಕೆ ಪುಡಿ ಮಾಡಿದ ಮಿಶ್ರಣ ಬೆರೆಸಿ. ಒಂದು ನಿಮಿಷ ಬಿಟ್ಟು ತುರಿದ ನೆಲ್ಲಿಕಾಯಿ ಸೇರಿಸಿ ಸರೀ ಕೈಯಾಡಿಸಿ. ಅರಶಿನ ಪುಡಿ ಬೆರೆಸಿ.



ತಣ್ಣಗಿನ ಅನ್ನವನ್ನು ಬೆರೆಸಿ . ಉಪ್ಪು ರುಚಿ ನೋಡಿ ಬೇಕಿದ್ದಲ್ಲಿ ಉಪ್ಪು ಬೆರೆಸಿ. 5 ನಿಮಿಷ ಮುಚ್ಚಿಡಿ.
ಒಂದು ಟೇಸ್ಟಿ ಟಿಫಿನ್ ಬಾಕ್ಸ್ ಐಟಮ್ ರೆಡಿ. ಈ ಒಂದು ತಿಂಗಳಲ್ಲಿ ಹಲವಾರು ರಜೆಗಳಿದ್ದಾವೆ. ಮಾಡಿಕೊಂಡು ಪಿಕ್ ನಿಕ್ ಹೋಗಿ ಬನ್ನಿ.

ನಿಹಾ ಳ ಕಾಲೇಜ್ ಮೇಟ್ಸ್ ಗೆ ಇದು ಇಷ್ಟ ಆಗಿದೆ...ನೀವು ಟ್ರೈ ಮಾಡಿ ನೋಡಿ ನನಗೆ ಹೇಳುವಿರಾ??
(ನಾನು ಶೆಂಗಾ ಹಾಕಕ್ಕೆ ಮರೆತಿದ್ದೆ. ಮತ್ತೆ ರಾಯರು ವ್ಹಾಟ್ ಇಸ್ ಎ ಚಿತ್ರಾನ್ನ ವಿಥೌಟ್ ಶೆಂಗಾ ಅನ್ನುತ್ತಾರಂತ, ಬೇಗ ಒಂದು ಹಿಡಿ ಶೆಂಗಾವನ್ನು ಮೈಕ್ರೋವೇವಿಸಿ ಒಗ್ಗರಣೆಗೆ ಬೆರೆಸಿದೆ .ಹೆಂಗೆ ನನ್ನ ಐಡಿಯಾ??)
ಎಂಜಾಯ್

ಬಾಳೆಹಣ್ಣಿನ ಫೋಡಿ ಮತ್ತು ಮೂಲಂಗಿ ಕಟ್ಲೆಟ್

ನೇಂದ್ರಬಾಳೆಹಣ್ಣಿನ ಫೋಡಿ (ಇದು ಕೊಂಕಣಿ preparation)
ಎರಡು ನೇಂದ್ರಬಾಳೆ ಹಣ್ಣು ಬಿಲ್ಲೆ ಅಥವಾ rectangle ಆಗಿ ಕಟ್ ಮಾಡಿ
ಅದಕ್ಕೆ ಉಪ್ಪು, ಹಿಂಗು, ಕಾರದಪುಡಿ ಹಚ್ಚಿಡಿ

ಅದನ್ನು ಅಕ್ಕಿಹಿಟ್ಟು+ಕಡಲೆಹಿಟ್ಟು+ಚಿಟಿಕೆ ಉಪ್ಪು ಮಿಕ್ಸ್ ನಲ್ಲಿ ಹೊರಳಿಸಿ ಕಾವಲಿ ಮೇಲೆ ಶ್ಯಾಲೋ ಫ್ರೈ ಮಾಡಬಹುದು ಅಥವ ಎಣ್ಣೆಯಲ್ಲಿ ಕರಿಯಬಹುದು


ಮೂಲಂಗಿ ಕಟ್ಲೆಟ್
ತುರಿದು ನೀರು ಹಿಂಡಿ ಇಟ್ಟ ನಾಲ್ಕು ಮೂಲಂಗಿ
ಇದಕ್ಕೆ ಹಸಿಮೆಣಸು, ಕೊತ್ತಂಬರಿಸೊಪ್ಪು, ಬೆಳ್ಳುಳ್ಳಿ + ಶುಂಠಿ ತರಿತರಿಯಾಗಿ ರುಬ್ಬಿ ಮಿಕ್ಸ್ ಮಾಡಿ. ಕಡಲೆಬೇಳೆಯನ್ನು ಮಿಕ್ಸಿಯಲ್ಲಿ ಹಾಕಿ ಹಿಟ್ಟುಮಾಡಿಟ್ಟು ಕೊಂಡು ಈ ಮಿಶ್ರಣಕ್ಕೆ ಉಪ್ಪಿನ ಜತೆ ಬೆರೆಸಿ.ಕೈ ನಲ್ಲಿ ಉರುಟು (round ball) ಮಾಡಿ ಚಪ್ಪಟೆ (flatten) ಮಾಡಿ. ಆಮೇಲೆ ಕಾವಲಿ ಮೇಲೆ ಇಟ್ಟು ಎಣ್ಣೆ ಹಾಕಿ ಫ್ರೈ ಮಾಡಿ. ಟೊಮ್ಯಾಟೋ ಸಾಸ್ ಜತೆ serve ಮಾಡಿ

 (ಇದು ನಿಹಾಳ ಫ್ರೆಂಡ್ ಅಖಿಲಾಳ ಅಮ್ಮನ ರೆಸಿಪಿ). ನಮ್ಮ ಮನೆಯಲ್ಲಿ ನಿಹಾ ಮಾಡಿದ್ದು. ಸಖತ್ ಟೇಸ್ಟಿ ಅನ್ನಿಸ್ತು. ಈಗ ನೀವು ಟ್ರೈ ಮಾಡಿ.

ಬಿಳಿ ಹೋಳಿಗೆ

ಬೇಕಾಗುವ ಸಾಮಾನು:
ಅಕ್ಕಿ ಹಿಟ್ಟು, ಮೈದಾ ಹಿಟ್ಟು, ನೀರು, ಉಪ್ಪು, ಸ್ವಲ್ಪ ಎಣ್ಣೆ
ಮೊದಲಿಗೆ ಮೈದಾಗೆ ನೀರು ಹಾಗಿ ಮೆತ್ತಗಿನ ಕಣಕ ತಯಾರಿಸಿಕೊಳ್ಳಿ. 
ಒಂದು ಗ್ಲಾಸ್ ನೀರನ್ನು ದಪ್ಪ ತಳೆಯ ಬಾಣಲೆಯಲ್ಲಿ ಬಿಸಿಮಾಡಲು ಇಡಿ. ಇದಕ್ಕೆ ಚಿತಿಕೆ ಉಪ್ಪು ಹಾಗೂ 1/2ಟಿಸ್ಪೂನ್ ಎಣ್ಣೆ ಹಾಕಿ. ನೀರು ಮರಳಲು ಶುರು ಆದಾಗ ಅದಕ್ಕೆ ಮೂರು ಗ್ಲಾಸ್ ಅಕ್ಕಿ ಹಿಟ್ಟು ಬೆರೆಸಿ ಬೇಗ ಬೇಗ ಸಟ್ಟುಗದಿಂದ ಕೈಯಾಡಿಸಿ. ತಣಿದ ಮೇಲೆ ಅದನ್ನು ಚಪಾತಿ ಹಿಟ್ಟಿನಂತೆ ನಾದಿ ಕೊಳ್ಳಿ. ಮೈದಾ ಹಿಟ್ಟನ್ನು ಚಿಕ್ಕ ಚಪಾತಿ ಗಾತ್ರದಲ್ಲಿ ಲಟ್ಟಿಸಿ ಅದರಲ್ಲಿ ಅಕ್ಕಿ ಹಿಟ್ಟಿನ ಒಂದು round ನ್ನ ಇಡಿ.

ಈಗ ಎರಡನ್ನು ಸೇರಿಸಿ ಪುನ: ಉಂಡೆ ಮಾಡಿ,


ಸಾಧರಣ ಗಾತ್ರ ಚಪಾತಿ ಆಕಾರದಲ್ಲಿ ಲಟ್ಟಿಸಿ.

ಬಿಸಿ ಕಾವಲಿಯಲ್ಲಿ ಎಣ್ಣೆ ಹಾಕದೆ ಒಂದು ಬಟ್ಟೆ ಯಿಂದ ಒತ್ತಿ ಒತ್ತಿ ಉಬ್ಬಿಸಿ. ಬಿಳಿ ಹೋಳಿಗೆ ರೆಡಿ. ಇದಕ್ಕೆ ಯಾವುದಾದರೂ ಸೈಡ್ ಡಿಶ್ ನಡೆಯುತ್ತೆ. ನಾನು ಬೆಳ್ಳುಳ್ಳಿ ಚಟ್ನಿ ಮತ್ತು ಮೆಥಿ ದಾಲ ಮಾಡಿದೆ. ಬಿಸಿ ಹೋಳಿಗೆ ಮೇಲೆ ತಾಜ ಬೆಣ್ಣೆ ಕೂಡ ಸವರಬಹುದು.

with Methi daal and Garlic chutney as side dish
ಟ್ರಾವೆಲ್ ಮಾಡುವಾಗ/ಪಿಕ್ ನಿಕ್ ಗೆಲ್ಲ ಒಳ್ಳೆ ಡಿಶ್... soft ಆಗಿರತ್ತೆ ಮತ್ತು filling ಕೂಡ..ಅಂದ್ರೆ ಬೇಗ ಹಸಿವೆಯಾಗಲ್ಲ.
ಬಿಳಿ ಹೋಳಿಗೆ ಬಗ್ಗೆ ಹೇಳಿದ್ದು ನನ್ನ ಫೇಸ್ ಬುಕ್ ಸ್ನೇಹಿತೆ ಭಾಗ್ಯಶ್ರೀ... Thank you Bhagya. it was a great hit in our household