Tuesday, October 22, 2013

ತಿಮರೆ/ಒಂದೆಲಗ/ಬ್ರಾಹ್ಮಿ/ಏಕ್ಪಾನಿ/ಊರಗೆ ತಂಬ್ಳಿ


ತಂಪು ಮತ್ತು ಹುಳಿ ಸೇರಿ ತಂಪುಳಿ. ಇದೇ ತಂಬುಳಿ, ತಂಬಳಿ, ತಂಬ್ಳಿ ಆಗಿರಬಹುದೇ? ಇದು ತಣ್ಣಗಿನ ಪದಾರ್ಥ. ಆರೋಗ್ಯಕರ ಸಹಜ ಆಹಾರ

ತಿಮರೆ ಒಂದು ಹಿಡಿ/ಮುಷ್ಠಿ, ಅರ್ಧ ಕಪ್ ಹೆರೆದ ತಾಜಾ ತೆಂಗಿನಕಾಯಿ ತುರಿ, 8-10 ಕಾಳು ಮೆಣಸು, 1/2 ಟೀ ಚಮಚೆ ಜೀರಿಗೆ, ಚಿಕ್ಕ ತುಂಡು ಹುಣಸೆ ಹುಳಿ, (ಬೇಕಾದರೆ ಹಸಿ ಶುಂಠಿಯನ್ನು ಕೂಡ ಬಳಸಬಹುದು) ರುಚಿಗೆ ಉಪ್ಪು

ಒಗ್ಗರಣೆಗೆ- ತುಪ್ಪ, ಸಾಸಿವೆ, ಒಣಮೆಣಸು

ಎಲ್ಲವನ್ನು ಸೇರಿಸಿ ನುಣ್ಣಗೆ ರುಬ್ಬಿ,ಉಪ್ಪು ಬೆರೆಸಿ 4 ಕಪ್ ಮಜ್ಜಿಗೆ ಬೆರೆಸಿ ಮತ್ತು ತುಪ್ಪದಲ್ಲಿ ಒಗ್ಗರಣೆ ಹಾಕಿ ಈ ತಂಬ್ಳಿ ಗೆ ಬೆರೆಸಿ.
ಬೇಸಗೆಗೆ ಹೇಳಿ ಮಾಡಿಸಿದ್ದು

ತಿಮರೆಯ ಔಷಧೀಯ ಗುಣಗಳು: ನೆನಪಿನ ಶಕ್ತಿಯನ್ನು ಚುರುಕುಗೊಳಿಸುತ್ತದೆ. ಮುಂಜಾನೆ (ಭ್ರಾಹ್ಮಿ ಮುಹೂರ್ತದಲ್ಲಿ) ಎದ್ದು ಖಾಲಿಹೊಟ್ಟೆಯಲ್ಲಿ ಒಂದೆಲಗವನ್ನು ತಿನ್ನಬೇಕಂತ ನಮ್ಮ ಅಜ್ಜ ಹೇಳುತ್ತಿದ್ದರು..

ಮೇಲೆ ಹೇಳಿಕೊಟ್ಟ ತಂಬ್ಳಿಗೆ ಒಂದೆಲಗದ ಬದಲಾಗಿ ಸೀಬೆಮರದ ಕುಡಿ, ಸಾಂಬಾರ್ ಬಳ್ಳಿ ಎಲೆ ಕೂಡ ಬಳಸಿ ತಂಬ್ಳಿ ಮಾಡಿ ಬಾಯಿರುಚಿ ಹೆಚ್ಚಿಸಿ ಕೊಳ್ಳಬಹುದು

ನಾವೆಲ್ಲ ಸಾಧರಣವಾಗಿ ಏಕಾದಶಿಯ ಉಪವಾಸದ ನಂತರ ಉದ್ದಿನ ದೋಸೆಗೆ ಒಂದೆಲಗದ ಚಟ್ನಿ ಮಾಡುತ್ತಿದ್ದ ನೆನಪು.
ಯಶವಂತಪುರ ಭಾನುವಾರದ ಸಂತೆಯಲ್ಲಿ ಎಲ್ಲ ತರದ ಸೊಪ್ಪು ಧಾರಾಳವಾಗಿ ಲಭ್ಯ.
ಒಂದು ಪೋಸ್ಟ್ ಸ್ಕ್ರಿಪ್ಟ್: ನಿಹಾ ಕಾಲೆಜ್ ನಲ್ಲಿ 'ಫೈಯರ್ ಲೆಸ್ ಕುಂಕಿಂಗ್' ಅಂತ ಎಕ್ಸಿಭಿಷನ್ ಹಮ್ಮಿಕೊಂಡಿದ್ರು. ಆಗ ನಿಹಾ ಸಾಲ್ಟ್ ಬಿಸ್ಕಿಟ್ಸ್ ಮೇಲೆ ಹಾಲಿನ ಕ್ರೀಮ್, ಬೊಯ್ಲಡ್ -ಮ್ಯಾಶ್ಡ್ ಆಲೂಗಡ್ಡೆ, ತುರಿದ ಕ್ಯಾರೆಟ್, ಸೌತೆಕಾಯಿ ಮತ್ತು ಕರಿಮೆಣಸಿನ ಪುಡಿ ಉದುರಿಸಿ ಕೊಟ್ಟಿದ್ದಳು. ಆಗ ನಾನು ಅವಳಿಗೆ ನಮ್ಮ ತಂಬಳಿಗಳು ಪರ್ಫೆಕ್ಟ್ ಎಕ್ಸಾಂಪಲ್ಸ್ ಫಾರ್ ಬೆಂಕಿರಹಿತ ಅಡುಗೆ ಅಂತ ಹೇಳಿದ್ದೆ. ಒಗ್ಗರಣೆ ಹಾಕದಿದ್ರೆ ಅದೇ ಬೆಂಕಿರಹಿತ ಆಯ್ತಲ್ಲವಾ?? ರುಬ್ಬುವ ಕೆಲಸಕ್ಕೆ ಮಿಕ್ಸಿ ಬಳಸದೇ ರುಬ್ಬುವ ಕಲ್ಲು ಬಳಸಿದರೆ ರೆ???

No comments: