ಚಳಿಗಾಲ ಶುರುವಾಗಿದೆ. ಸಂಜೆ ಮಾಲವಿಕ ಕೆಲಸದಿಂದ ಬರುವಾಗ, ವಾರಕ್ಕೆರಡು ಸಲವಾದರೂ ಅವಳಿಗೆ ಬಿಸಿ ಬಿಸಿ ತಿಂಡಿ, ಅವಳ ಇಷ್ಟದ್ದು ಏನಾದರೂ ಮಾಡುತ್ತೇನೆ. ಕಾಟಿ ರೋಲ್ಸ್ ಅವಳ favorite. ಅವಳು ಬಂದು ನನ್ನನ್ನು ಹಗ್ ಮಾಡಿ oh mommy u r so sweeet!! thank you!! ಅಂದಾಗ ನನಗೂ ತುಂಬ ಖುಶಿಯಾಗುತ್ತೆ!! :-)
ಕಾಟಿ ರೋಲ್ಸ್ ಗೆ ಬೇಕಾಗುತ್ತದೆ
ಚಪಾತಿ, ಯಾವುದಾದರೊಂದು ಫಿಲ್ಲಿಂಗ್, ಹಸಿರು ಚಟ್ನಿ, ಕಾಲಾ ನಮಕ್, ಹಸಿ ನೀರುಳ್ಳಿ + ಕೊತ್ತಂಬರಿ ಸೊಪ್ಪು
3 ಲೋಟ ಗೋದಿ ಹಿಟ್ಟಿಗೆ ಅರ್ಧ ಲೋಟ ಮೈದಾ , ಒಂದು ಟೆಬಲ್ ಚಮಚ ಎಣ್ಣೆ ಬೆರೆಸಿ ಚಪಾತಿ ಹಿಟ್ಟಿನಂತೆ ಕಲಿಸಿಡಿ.
ಫಿಲ್ಲಿಂಗ್ ನಿಮಗೆ ಬೇಕಾದ ಹಾಗೆ ಮಾಡ ಬಹುದು. ನಾನು ಮಾಲವಿಕನ ಇಷ್ಟದ ಪನೀರ್ ನ ಫಿಲ್ಲಿಂಗ್ ಮಾಡಿದ್ದೆ. ಅದಕ್ಕೆ ಬೇಕಾಗುವ ಸಾಮಗ್ರಿ:
1 ಪ್ಯಾಕೆಟ್ ನಂದಿನಿ ಪನೀರ್
1 ದೊಡ್ಡ ಈರುಳ್ಳಿ, ಮೂರು ಬೆಳ್ಳುಳ್ಳು ಎಸಳು, ಟೋಮೇಟೋ, ಖಾರದ ಪುಡಿ, ಗರಂ ಮಸಾಲೆ ಪುಡಿ, ಕೊತ್ತಂಬರಿ ಸೊಪ್ಪು, ಉಪ್ಪು.
ಎಣ್ಣೆಯಲ್ಲಿ ,ಸಣ್ಣಗೆ ಕತ್ತರಿಸಿದ ಈರುಳ್ಳಿ ಯನ್ನು ಹಾಕಿ ಬಾಡಿಸಿ. ಕೆಂಪು ಬಣ್ಣ ಬರುತ್ತಿದ್ದ ಹಾಗೆ ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ ಬೆರೆಸಿ. 2 ನಿಮಿಷ ಬಿಟ್ಟು ಗರಂ ಮಸಾಲೆ ಪುಡಿ, ಖಾರದ ಪುಡಿ, ಅರಿಸಿನ ಪುಡಿ ಬೆರೆಸಿ ಆಮೇಲೆ ಸಣ್ಣ ಹಚ್ಚಿದ ಟೊಮೇಟೊ ಹಾಕಿ. 2 ನಿಮಿಷ ಬಿಟ್ಟು ಪನೀರ್ ನ ಚೂರು ಮತ್ತು ಕೊತ್ತಂಬರಿ ಸೊಪ್ಪು ಹಾಕಿ, ಸ್ವಲ್ಪ ಹೊತ್ತು ಕೈಯಾಡಿಸಿ ಕೆಳಗಿಡಿ.
ಹಸಿರು ಚಟ್ನಿಗೆ : ಸಣ್ಣ ಕಟ್ಟು ಕೊತ್ತಂಬರಿ ಸೊಪ್ಪು, 2-3 ಪುದೀನಾ ಎಲೆ, 3-4 ಹಸಿ ಮೆಣಸಿನಕಾಯಿ, ಉಪ್ಪು. ಇವೆಲ್ಲವನ್ನು ರುಬ್ಬಿ ಅರ್ಧ ಲಿಂಬೆ ಹಣ್ಣಿನ ರಸ ಬೆರೆಸಿಡಿ
ಹದ ಗಾತ್ರದ ಚಪಾತಿ ಲಟ್ಟಿಸಿ ಕಾವಲಿ ಮೇಲೆ ಬೇಯಿಸಿ. ಹಿಟ್ಟು ಕಲಸುವಾಗ ಎಣ್ಣೆ ಹಾಕಿದ್ದರಿಂದ, ಚಪಾತಿ ಕಾಯಿಸುವಾಗ ಬೇಕಾದರೆ ಮಾತ್ರ ಎಣ್ಣೆ ಬಳಸಿ.
ಆ ಮೇಲೆ ಚಿತ್ರದಲ್ಲಿನ ಹಾಗೆ ಸ್ಟಫ್ಫಿಂಗ್ ಸೇರಿಸಿ, ರೋಲ್ಸ್ ನ ಫೋಲ್ಡ್ ಮಾಡಿ.
ಸ್ಟಫಿಂಗ್ ನ ಬೇರೆ choice : Cauliflower + ಆಲುಗಡ್ಡೆ ಅಥವಾ ಮಿಶ್ರ ತರಕಾರಿ (ಬಟಾಣಿ-ಕ್ಯಾರೆಟ್- ಆಲುಗಡ್ಡೆ ಇತ್ಯಾದಿ). ಮಾಡುವ ವಿದಾನ ಮೇಲಿನದ್ದೆ. ತರಕಾರಿ ಬೇಯಿಸಬೇಕಾಗುತ್ತೆ ಅಷ್ಟೆ.
:-)
ಫೋಟೊ : ನಿಹಾರಿಕಾ
ಕಾಟಿ ರೋಲ್ಸ್ ಗೆ ಬೇಕಾಗುತ್ತದೆ
ಚಪಾತಿ, ಯಾವುದಾದರೊಂದು ಫಿಲ್ಲಿಂಗ್, ಹಸಿರು ಚಟ್ನಿ, ಕಾಲಾ ನಮಕ್, ಹಸಿ ನೀರುಳ್ಳಿ + ಕೊತ್ತಂಬರಿ ಸೊಪ್ಪು
3 ಲೋಟ ಗೋದಿ ಹಿಟ್ಟಿಗೆ ಅರ್ಧ ಲೋಟ ಮೈದಾ , ಒಂದು ಟೆಬಲ್ ಚಮಚ ಎಣ್ಣೆ ಬೆರೆಸಿ ಚಪಾತಿ ಹಿಟ್ಟಿನಂತೆ ಕಲಿಸಿಡಿ.
ಫಿಲ್ಲಿಂಗ್ ನಿಮಗೆ ಬೇಕಾದ ಹಾಗೆ ಮಾಡ ಬಹುದು. ನಾನು ಮಾಲವಿಕನ ಇಷ್ಟದ ಪನೀರ್ ನ ಫಿಲ್ಲಿಂಗ್ ಮಾಡಿದ್ದೆ. ಅದಕ್ಕೆ ಬೇಕಾಗುವ ಸಾಮಗ್ರಿ:
1 ಪ್ಯಾಕೆಟ್ ನಂದಿನಿ ಪನೀರ್
1 ದೊಡ್ಡ ಈರುಳ್ಳಿ, ಮೂರು ಬೆಳ್ಳುಳ್ಳು ಎಸಳು, ಟೋಮೇಟೋ, ಖಾರದ ಪುಡಿ, ಗರಂ ಮಸಾಲೆ ಪುಡಿ, ಕೊತ್ತಂಬರಿ ಸೊಪ್ಪು, ಉಪ್ಪು.
ಎಣ್ಣೆಯಲ್ಲಿ ,ಸಣ್ಣಗೆ ಕತ್ತರಿಸಿದ ಈರುಳ್ಳಿ ಯನ್ನು ಹಾಕಿ ಬಾಡಿಸಿ. ಕೆಂಪು ಬಣ್ಣ ಬರುತ್ತಿದ್ದ ಹಾಗೆ ಸಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ ಬೆರೆಸಿ. 2 ನಿಮಿಷ ಬಿಟ್ಟು ಗರಂ ಮಸಾಲೆ ಪುಡಿ, ಖಾರದ ಪುಡಿ, ಅರಿಸಿನ ಪುಡಿ ಬೆರೆಸಿ ಆಮೇಲೆ ಸಣ್ಣ ಹಚ್ಚಿದ ಟೊಮೇಟೊ ಹಾಕಿ. 2 ನಿಮಿಷ ಬಿಟ್ಟು ಪನೀರ್ ನ ಚೂರು ಮತ್ತು ಕೊತ್ತಂಬರಿ ಸೊಪ್ಪು ಹಾಕಿ, ಸ್ವಲ್ಪ ಹೊತ್ತು ಕೈಯಾಡಿಸಿ ಕೆಳಗಿಡಿ.
ಹಸಿರು ಚಟ್ನಿಗೆ : ಸಣ್ಣ ಕಟ್ಟು ಕೊತ್ತಂಬರಿ ಸೊಪ್ಪು, 2-3 ಪುದೀನಾ ಎಲೆ, 3-4 ಹಸಿ ಮೆಣಸಿನಕಾಯಿ, ಉಪ್ಪು. ಇವೆಲ್ಲವನ್ನು ರುಬ್ಬಿ ಅರ್ಧ ಲಿಂಬೆ ಹಣ್ಣಿನ ರಸ ಬೆರೆಸಿಡಿ
ಹದ ಗಾತ್ರದ ಚಪಾತಿ ಲಟ್ಟಿಸಿ ಕಾವಲಿ ಮೇಲೆ ಬೇಯಿಸಿ. ಹಿಟ್ಟು ಕಲಸುವಾಗ ಎಣ್ಣೆ ಹಾಕಿದ್ದರಿಂದ, ಚಪಾತಿ ಕಾಯಿಸುವಾಗ ಬೇಕಾದರೆ ಮಾತ್ರ ಎಣ್ಣೆ ಬಳಸಿ.
ಆ ಮೇಲೆ ಚಿತ್ರದಲ್ಲಿನ ಹಾಗೆ ಸ್ಟಫ್ಫಿಂಗ್ ಸೇರಿಸಿ, ರೋಲ್ಸ್ ನ ಫೋಲ್ಡ್ ಮಾಡಿ.
ಚಟ್ನಿ ತುಂಬ ಖಾರವಾಗಿದ್ದರಿಂದ ನಾನು ಸ್ವಲ್ಪ ನೆ spread ಮಾಡಿದ್ದೇನೆ
filling ಚಪಾತಿ ಮಧ್ಯದಲ್ಲಿ
ಸಣ್ಣಗೆ ಕತ್ತರಿಸಿದ ನೀರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು filling na ಮೇಲೆ ಹಾಕಿ, ಮತ್ತದರ ಮೇಲೆ rock salt ಕಾಲಾನಮಕ್ ಸಿಂಪಡಿಸಿ
ಚಪಾತಿ ಮಡಚುವ ವಿಧಾನ:
step 1
step 2
step 3
ಕಾಟಿ ರೋಲ್ಸ್ ರೆಡಿ ಟು ಈಟ್. ಮೊದಲೆ ಏನಾದರೂ ಮಾಡಿಟ್ಟರು ಪರವಾಗಿಲ್ಲ, ಪುನ: ಕಾವಲಿಯಲ್ಲಿ ಅಥವಾ ಮೈಕ್ರೋವೇವ್ ನಲ್ಲಿ ಬಿಸಿ ಮಾಡಬಹುದು. ಫಿಲ್ಲಿಂಗ್ ಸ್ವಲ್ಪ dry-dry ಆಗಿರಲಿ!ಸ್ಟಫಿಂಗ್ ನ ಬೇರೆ choice : Cauliflower + ಆಲುಗಡ್ಡೆ ಅಥವಾ ಮಿಶ್ರ ತರಕಾರಿ (ಬಟಾಣಿ-ಕ್ಯಾರೆಟ್- ಆಲುಗಡ್ಡೆ ಇತ್ಯಾದಿ). ಮಾಡುವ ವಿದಾನ ಮೇಲಿನದ್ದೆ. ತರಕಾರಿ ಬೇಯಿಸಬೇಕಾಗುತ್ತೆ ಅಷ್ಟೆ.
:-)
ಫೋಟೊ : ನಿಹಾರಿಕಾ
No comments:
Post a Comment