ಮರಕೆಸು ಮಳೆಗಾಲ ಅಥವಾ ಹೆಚ್ಚು ನಿಖರವಾಗಿ ಹೇಳಬೇಕಾದರೆ ಚೌತಿ ಹಬ್ಬದ ಆಸು ಪಾಸು ಮರದ ಪೊಟರೆ ಅಥವಾ ಕಲ್ಲು ಸಂಧಿಯಲ್ಲಿ ಬೆಳೆಯುತ್ತದೆ. ಪತ್ರೋಡೆ ಮಾಡುವುದಕ್ಕಿಂತ ಸ್ವಲ್ಪ ಕೆಲಸ ಜಾಸ್ತಿ ಇದರಲ್ಲಿ. ಮಸಾಲೆ ಹಚ್ಚಿ ಸುರುಳಿ ಸುತ್ತಿ, ಕತ್ತಿಯಿಂದ ಚಿಕ್ಕ ಚಿಕ್ಕ slices ಗಳನ್ನಾಗಿ ಮಾಡಿ,ದಾರದಿಂದ ಕಟ್ಟಿ ಎಣ್ಣೆಯಲ್ಲಿ ಸಣ್ಣ ಉರಿಯಲ್ಲಿ crisp ಆಗುವ ತನಕ ಕರಿಬೇಕು ( deep fry)
ಇವಳಿಗೇನಪ್ಪ ಮನೆಯಲ್ಲೇ ಇರುತ್ತಾಳೆ, ಮರಕೆಸುವಿನ ಫೋಡಿ ಮಾಡಲು ಏನು ಧಾಡಿ ಅನ್ನಕೋ ಬಹುದು ನೀವೆಲ್ಲ, ಆದರೆ ನಾನು ಆಫಿಸ್ ಗೆ ಹೋಗುವಾಗ ಇಂತಹ ಸ್ಪೆಶಲ್ ತಿಂಡಿಗಳನ್ನು ಮಾಡಿ ನನ್ನ ಸಹೋದ್ಯೋಗಿಗಳಿಗೆ ತೆಗೆದು ಕೊಂಡು ಹೋಗುತ್ತಿದ್ದೆ. ಬಹುಪಾಲು ಜನರು ತುಂಬ ಊರು ಸುತ್ತಿದ್ದರಿಂದ, ನಾನು ಮಾಡುವ ತಿಂಡಿ experiment ಗಳನ್ನೆಲ್ಲ ಅವರು ಎಂಜಾಯ್ ಮಾಡುತ್ತಿದ್ದರು. ಜೋರು ಮಳೆಯಿದ್ದಾಗ ಅಥವಾ ಅಫಿಸ್ ನಲ್ಲಿ ತುರ್ತು ಪರಿಸ್ಥಿತಿ ಇದ್ದು ಲೇಟ್ ಆಗಿ ಕೆಲಸ ಮಾಡುವವರಿದ್ದಾಗ ಕರಿದ ಹಲಸಿನ ಹಪ್ಪಳ, ಕಾಡು ಪೀರೆ (ಮಾಡ ಹಾಗಲಕಾಯಿ) ಫೋಡಿ, ಆಲು ಬೋಂಡ, ಗೋಳಿ ಬಜೆ, ನೀರುಳ್ಳಿ ಪಕೋಡ ವಗೈರೆ ಮಾಡಿ ಕಳುಹಿಸುತ್ತಿರುತ್ತೇನೆ. ಆಫಿಸ್ ಮಂಜಣ್ಣಂಗೆ ’ಮಂಜು ಆಫಿಸ್ ನಲ್ಲಿ ಎಷ್ಟು ಜನರಿದ್ದಾರೆ’ ಅಂದ ಕೇಳಿದ್ರೆ, ’ತಿಂಡಿ ಕಳಿಸ್ತಿದ್ದಿರಾ ಮ್ಯಾಡಂ ಅಂತ ಕೇಳುತ್ತಾನೆ. :-) ತಿಂದು ಎಂಜಾಯ್ ಮಾಡುವವರಿದ್ದರೆ ಮಾಡಲು ಹುಮ್ಮಸ್ಸು ಬರುತ್ತದೆ.
ಮರಕೆಸುವಿನ ಫೋಡಿ ಮಾಡುವ ಬಗೆ. ಇದು exclusively ಕೊಂಕಣಿ preparation.
ಸಾಧಾರಣ ಕೆಸುವಿನ ಎಲೆಗಿಂತ ಇದರ ಗಾತ್ರ ಚಿಕ್ಕದು ಹಾಗೂ thick texture. underneath light purple coloured
ಹತ್ತು ಮರಕೆಸುವಿನ ಎಲೆ, ಚೆನ್ನಾಗಿ ತೊಳೆದು, ಒರೆಸಿಡಿ.
1 ಗ್ಲಾಸ್ ಉದ್ದಿನ ಬೇಳೆ, 1 ಗ್ಲಾಸ್ ಅಕ್ಕಿ. ಉದ್ದಿನ ಬೆಳೆಯನ್ನು ಬಾಣಲೆಯಲ್ಲಿ ಎಣ್ಣೆ ಹಾಕದೆ ಹುರಿದು ಅಕ್ಕಿ ಜತೆಗೆ ಅರ್ಧ ಗಂಟೆ ನೀರಲ್ಲಿ ನೆನೆಸಿಡಿ . ನಂತರ ನೀರು ಪೂರ್ತಿ ಬಸಿದು ಕೆಂಪು ಮೆಣಸು, ಹುಣಸೆ ಹುಳಿ, ಹಿಂಗು ಮತ್ತು ಉಪ್ಪು ಹಾಕಿ ತರಿತರಿಯಾಗಿ ರುಬ್ಬಿ.
ಎಲೆ ಹಿಂಭಾಗಕ್ಕೆ ಮಸಾಲೆಯನ್ನು ಹೀಗೆ ಸವರಿ:
ಹೀಗೆ ಎಲೆಯನ್ನು ಉಲ್ಟಾ ಮಾಡಿ
ಮಾಸಾಲೆ ಹಚ್ಚುವ ಬಗೆ
ಒಂದರ ಮೇಲೆ ಒಂದು ಎಲೆಗಳನ್ನು ಇಡುತ್ತ ಮಸಾಲೆ ಯನ್ನು ಹಚ್ಚಿ
ಮಧ್ಯದಲ್ಲಿ ಫೋಲ್ಡ್ ಮಾಡಿ ಹೀಗೆ:
ಹಾಸಿಗೆ ಸುತ್ತಿದ ಹಾಗೆ ಸುರುಳಿ ಸುತ್ತುವುದು
ಹೀಗೆ ಕಟ್ ಮಾಡಿ
ಅಕ್ಕಿ ಹಿಟ್ಟಲ್ಲಿ ಫೋಡಿಗಳನ್ನು ಹೊರಳಿಸಿ, ಬಿಸಿ ಎಣ್ಣೆಯಲ್ಲಿ, ಸಣ್ಣ ಉರಿಯಲ್ಲಿ fry ಮಾಡಿ
ಡಾ. ರಹಮತ್ ತರಿಕೆರೆಯವರ ಬರಹ ’ಹಿಮನದಿಯ ದಡಗಳಲ್ಲಿ ನಡೆದ ನೆನಪು’ ಓದುತ್ತ ತಿಂದ ಪರಿ :-) ನಾನು ದಾರ ಗಿರ ಹಾಕಲ್ಲ. ಸುಮ್ಮನೆ ಅಕ್ಕಿ ಹಿಟ್ಟಿನಲ್ಲಿ ಹೊರಳಿಸಿ, ಕೈನಿಂದ ಗಟ್ಟಿ ಪ್ರೆಸ್ ಮಾಡಿ deep fry ಮಾಡುತ್ತೇನೆ. ಇಲ್ಲದಿದ್ದರೆ ತಿನ್ನುವಾಗ ಕಿರಿ ಕಿರಿ. ದಾರ ತೆಗಿಲಿಕ್ಕೆ 5 ನಿಮಿಷ ಹೋಗುತ್ತೆ. ಪೂರ್ವಜರೆಲ್ಲ ಬಾಳೆ ನಾರಿನಿಂದ ಫೋಡಿಯನ್ನು ಕಟ್ಟುತ್ತಿದ್ದರಂತೆ.
actually ಈ ಫೋಡಿಗಳನ್ನ ಧುಂಪದ ಎಣ್ಣೆಯಲ್ಲಿ ಕರಿ ಬೇಕಂತೆ. dont know what is dhoomp. ಅದಕ್ಕೆ ನಾವು ರಿಫೈನ್ಡ್ ಎಣ್ಣೆ ಉಪಯೋಗಿಸುವುದು. ಮತ್ತು ಮುಂಬೈನಲ್ಲಿ ನಮಗೆ ಈ ತಿಂಡಿಯ ಬಗ್ಗೆ ಗೊತ್ತಿರಲಿಲ್ಲ. ನಾನು ಮದುವೆಯಾಗಿ ತೀರ್ಥಹಳ್ಳಿಗೆ ಬಂದ ಮೇಲೆ ಅಲ್ಲಿ ಮಾಡಿದ್ದನ್ನು ನೋಡಿದ್ದು, ತಿಂದಿದ್ದು etc. ಮೊನ್ನೆ ಶ್ರೀಕಾಂತ ತೀರ್ಥಹಳ್ಳಿಗೆ ಹೋಗಿದ್ರು ಆಗ ಮರಕೆಸುವಿನ ಎಲೆ ತಂದಿದ್ರು. ಮಾಡಿ ನಾವು ತಿಂದು, ನಿಮಗೋಸ್ಕರ ಚಿತ್ರಗಳನ್ನು ಹಾಕಿದ್ದೇನೆ. :-)
ಕೊನೆಯ ಎರಡು ಫೋಟೊ ನಾನು ತೆಗೆದಿದ್ದು. settings change ಆಗಿ ಆ ತರಹ ಕಾಣುತ್ತ ಇದೆ. ಪುನ: ಫೋಟೊ ತೆಗೆಯುವ ಅಂದ್ರೆ ಫೋಡಿ ಖಲ್ಲಾಸ್.
ಕೊನೆಯ ಎರಡು ಫೋಟೊ ನಾನು ತೆಗೆದಿದ್ದು. settings change ಆಗಿ ಆ ತರಹ ಕಾಣುತ್ತ ಇದೆ. ಪುನ: ಫೋಟೊ ತೆಗೆಯುವ ಅಂದ್ರೆ ಫೋಡಿ ಖಲ್ಲಾಸ್.
No comments:
Post a Comment