Tuesday, October 22, 2013

ಅವರೆಕಾಳು ಬೆರೆಸಿದ ಅಕ್ಕಿ ರೊಟ್ಟಿ

ಅವರೆ ಕಾಳು ಹಾಕಿ ಮಾಡಿದ ಅಕ್ಕಿ ರೊಟ್ಟಿ.

ಅಕ್ಕಿ ಹಿಟ್ಟು - 3 ಕಪ್
ಬಾಂಬೆ ರವಾ- 1/2 ಕಪ್
ಹಸಿ ಮೆಣಸು - 4 ಅಥವ 5
ಉಪ್ಪು ಹಾಕಿ ಬೇಯಿಸಿದ ಅವರೆಕಾಳು- 1 ಕಪ್
ತಾಜ ತೆಂಗಿನ ತುರಿ- 1/2 ಕಪ್
ಹುಳಿ ಮೊಸರು - 1/2 ಕಪ್
ಸಣ್ಣದಾಗಿ ಕತ್ತರಿಸಿದ ಈರುಳ್ಳಿ, (ಸಬ್ಬಸಿಗೆ (Dill) ಸೊಪ್ಪು-optional), ಹುರಿದು coarsely ಪುಡಿಮಾಡಿದ ಶೆಂಗಾ ಬೀಜ, 1/2 ಟೀ ಸ್ಪೂನ್ ಜೀರಿಗೆ (optional), ಉಪ್ಪು. ಎಲ್ಲವನ್ನೂ ಸೇರಿಸಿ ಹಿಟ್ಟು ಚಿತ್ರದಲ್ಲಿ ತೋರಿಸಿದ ಹಾಗೆ ಹಿಟ್ಟು ತಯಾರಿಸಿ.
ಕೆಳಗಿನ ಲಿಂಕ್ ನಲ್ಲಿ ರೊಟ್ಟಿ ಮಾಡುವ ವಿಧಾನ ಇದೆ

http://malathisanchiyinda.blogspot.com/2009/10/blog-post_30.html

ಕೆಂಪು ಖಾರದ ಚಟ್ನಿ ಮತ್ತು ಪುದಿನ ಬೆರೆಸಿದ ಕಾಯಿ ಚಟ್ನಿ ಜತೆಗೆ home made ತುಪ್ಪ...ಸ್ವರ್ಗಕ್ಕೆ ಮೂರೆ ಗೇಣು 
ಅದು ಶ್ರೀಕಾಂತ್ ಉವಾಚ
ಖಾರದ ಚಟ್ನಿ ಮಾಡಲು:
ಬಿಸಿ ನೀರಿನಲ್ಲಿ ಬ್ಯಾಡಗಿ ಮೆಣಸಿನಕಾಯಿಯನ್ನು ಸ್ವಲ್ಪ ಹೊತ್ತು ನೆನೆಸಿಡಿ. ಅದಕ್ಕೆ ಹುಳಿ, ಎರಡು ಬೆಳ್ಳುಳ್ಳಿ, ಎರಡು ಕಾಳು ಕೊತ್ತಂಬರಿ ಬೀಜ, ಉಪ್ಪು , ಚೂರೆ ಬೆಲ್ಲ ಹಾಕಿ ಮಿಕ್ಸಿ/ರುಬ್ಬೋ ಕಲ್ಲಲ್ಲಿ ತಿರುವಿ. ಚಟ್ನಿ ರೆಡಿ....ಖಾರ ಜಾಸ್ತಿಯಾಗಿ ’ಜೀವನ ಸಾಕ್ಷಾತ್-ಖಾರ’ ಆದ್ರೆ ನಾನು ಜವಾಬ್ದಾರಳಲ್ಲ. ಬೆಳ್ಳುಳ್ಳಿ ಇಷ್ಟ ಪಡದವರು ಹಿಂಗನ್ನು ಸ್ವಲ್ಪ ಬಿಸಿ ಎಣ್ಣೆಯಲ್ಲಿ ಅರಳಿಸಿ ಹಾಕ ಬಹುದು. no problem.
ಅವರೆಕಾಳು ಸೀಸನ್ ಮುಗಿಯುವ ಮುನ್ನ ಒಂದು ಸಲ್ try karke dekho na..
:-)
pic: Niharika Shenoy

No comments: