Tuesday, October 22, 2013

ಅಕ್ಕಿ ರೊಟ್ಟಿ (ಬಾಳೆ ಎಲೆ ಮೇಲೆ ತಟ್ಟಿ ಮಾಡಿದ್ದು)

3 ಬಟ್ಟಲು- ಅಕ್ಕಿ ಹಿಟ್ಟು
2 ಟೇಬಲ್ ಚಮಚ ತಾಜಾ ಹೆರೆದ ತೆಂಗಿನಕಾಯಿ
3 ಹದ ಗಾತ್ರದ ಈರುಳ್ಳಿ ಸಣ್ಣಗೆ ಹೆಚ್ಚಿದ್ದು
1 ಬಟ್ಟಲು ಮೊಸರು, ಹೆಚ್ಚಿದ ಹಸಿಮೆಣಸಿನಕಾಯಿ, ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು, ಉಪ್ಪು


ಮೇಲೆ ಹೇಳಿದ ಎಲ್ಲ ಪದಾರ್ಥವನ್ನು ಮಿಕ್ಸ್ ಮಾಡಿ ಮೃದುವಾದಕಣಕ ತಯಾರಿಸಿ. ಬಾಳೆ ಎಲೆಗೆ ಸ್ವಲ್ಪ ಎಣ್ಣೆ ಹಚ್ಚಿ. ಬಾಳೆ ಎಲೆ ಮೇಲೆ ಕಣಕದ ಗೋಲವನ್ನು ಇಟ್ಟು ಬೆರಳಿನಿಂದ ತಟ್ಟಿ. ಒದ್ದೆ ಕೈ ಬೆರಳಿನಿಂದ ತಟ್ಟಿ. ಎಲೆಯನ್ನು ನಿಧಾನವಾಗಿ ಎತ್ತಿ ಕಾವಲಿ ಮೇಲೆ ಕವಚಿ.ಸ್ವಲ್ಪ ಎಣ್ಣೆ ಹಾಕಿ ಎರಡೂ ಬದಿ ಕೆಂಪಾಗುವಂತೆ ಕಾಯಿಸಿ
ಅವರೆ ಕಾಳು season ನಲ್ಲಿ ಬೇಯಿಸಿ mash ಮಾಡಿದ ಅವರೆ ಬೇಳೆಯನ್ನು ಬೆರೆಸಬಹುದು.
ತುರಿದ carrot ಕೂಡಾ ಮಿಕ್ಸ್ ಮಾಡಬಹುದು
serve hot with ತಾಜಾ ಬೆಣ್ಣೆ ಮತ್ತು ಬೆಳ್ಳುಳ್ಳಿ ಚಟ್ನಿ

No comments: