Tuesday, October 22, 2013

ರಾಜ್ಮಾ ರೈಸ್


usually ಮರುದಿನ ಮಕ್ಕಳಿಗೆ ಲಂಚ್ ಬಾಕ್ಸ್ ಗೆ ಏನು ಮಾಡಬೇಕು ಅಂತ ಹಿಂದಿನ ದಿನ ರಾತ್ರಿನೆ ಆಲೋಚನೆ ಮಾಡಿ ಅದಕ್ಕೆ ತಯಾರು ಮಾಡಿ ಇಡುವುದು ರೂಢಿ.. ಮೊನ್ನೆ ಭಾನುವಾರ ಯಾಕೋ ಸೋಮಾರಿತನ ಬಂತು. ಬೆಳಿಗ್ಗೆ ಫ್ರಿಜ್ ಒಪನ್ ಮಾಡಿದ್ರೆ ಹಿಂದಿನ ದಿನ ಬಿಡಿಸಿಟ್ಟ ಹಸಿ ರಾಜ್ಮಾ ಕಾಳು ಕಾಣಿಸಿತು. ರಾಜ್ಮಾ ರೈಸ್ ಮಾಡಿದ್ರೆ ಹೆಂಗೆ ಅಂತ ಕೂಡಲೆ ಅದಕ್ಕೆ ಶುರು ಹಚ್ಚಿಕೊಂಡು ಬಿಟ್ಟೆ.
ಬಾಸುಮತಿ ಅಕ್ಕಿ ತೊಳೆದು ಅದಕ್ಕೆ ಹಸಿ ಬಟಾಣಿ ಹಾಗೂ ರಾಜ್ಮ ಕಾಳು, ಉಪ್ಪು, ಅರ್ಧ ಟೀ ಸ್ಪುನ್ ತುಪ್ಪ ಮತ್ತು ಅಕ್ಕಿಯ  ಅಳತೆಯ ಒಂದುವರೆ ಅಷ್ಟು ನೀರು ಹಾಕಿ ಕುಕ್ಕರ್ ನಲ್ಲಿ ಬೇಯಿಸಿದೆ. ಕುಕ್ಕರ್ ಮುಚ್ಚಳ ತೆಗೆಯಲು ಬಂದ ಕೂಡಲೇ  ಅದರಿಂದ ಅಕ್ಕಿಯ ಪಾತ್ರೆ ಯನ್ನು ತೆಗೆದು ಡೀಪ್ ಫ್ರೀಜ್ ನಲ್ಲಿ ಹಾಕಿಟ್ಟೆ. ನನ್ನ 26 ವರ್ಷದ ಸಾಥಿ ನನ್ನ ಫ್ರಿಝ್ ನನ್ನ ಜುಲುಮಿಯನ್ನೆಲ್ಲ ಸಹಿಸಿಕೊಂಡು, ನನ್ನ ಅಡಿಗೆ ಮನೆ ಅವತಾರ/ಅವಾಂತರಗಳನ್ನೆಲ್ಲ ನೋಡಿಕೊಂಡು, ನನ್ನ ಜತೆ ಊರು ಊರು ತಿರುಗಿಕೊಂಡು ಇನ್ನೂ ನನ್ನನ್ನು ಸಹಿಸಿಕೊಂಡಿದೆ ಪಾಪ. ಶ್ರೀಕಾಂತ, ಮತ್ತು ನನ್ನ ಅಮ್ಮ, ತಮ್ಮಂದಿರು ನನ್ನ ಮನೆಗೆ ಬಂದಗಲೆಲ್ಲ 'ಹೇ ಹೊಸ ಫ್ರಿಜ್ ಕೊಡಿಸಲಾ ಅಂತ ಕೇಳ್ತಿರುತ್ತಾರೆ. ನನಗೆ ಮಾತ್ರ 'ಫ್ರಿಜ್ ನನ್ನನ್ನು ಬಿಡಬೇಕೆ ಹೊರತು ನಾನು ಫ್ರಿಜ್ ನ್ನು ಬಿಡಲ್ಲ ಅಂತ ಖಂಡಿತವಾಗಿ ಹೇಳಿಟ್ಟಿದ್ದೀನಿ.
ಅರೇ ನಮ್ಮ recipe ಕತೆ ಏನಾಯ್ತು?
ಒಂದು ಹಿಡಿ ಕೊತ್ತಂಬರಿ ಸೊಪ್ಪು, 5 ಬೆಳ್ಳುಳ್ಳಿ ಎಸಳು, ಅರ್ಧ ಇಂಚ್ ಶುಂಠಿ, 5 ಹಸಿಮೆಣಸಿನಕಾಯಿ ಮಿಕ್ಸಿಯಲ್ಲಿ ಹಾಕಿ ರುಬ್ಬಿ. ಈರುಳ್ಳಿ ಯನ್ನು ಸಣ್ಣಕ್ಕೆ ಕತ್ತರಿಸಿ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಒಂದು cinnamon ಎಲೆ ಹಾಕಿ, ಅರ್ಧ ಸ್ಪೂನ್ ಜೀರಿಗೆ. ಜೀರಿಗೆ ಸಿಡಿದ ಮೇಲೆ ಕತ್ತರಿಸಿದ ನೀರುಳ್ಳಿಯನ್ನು ಹಾಕಿ ಕೆಂಪಗೆ ಹುರಿಯಿರಿ followed by ರುಬ್ಬಿದ ಮಸಾಲೆ. ಹಸಿ ವಾಸನೆ ಹೋದ ಮೇಲೆ (ಅಥವ ನಿಮ್ಮ ಮನೆಯಲ್ಲೂ ಒಂದು ನಿಹಾರಿಕಾ ಇದ್ದು, ಅವಳು mmmm mommy what's it? its smelling nice ಅನ್ನುವವರಗೆ) ಚಿಟಿಕೆ ಅರಿಶಿನ ಪುಡಿ, ಚಿಟಿಕೆ ಗರಂ ಮಸಾಲೆ ಪುಡಿ ಬೆರೆಸಿ.ಇದಕ್ಕೆ ಒಂದು ಹದ ಗಾತ್ರದ ಸಣ್ಣಕ್ಕೆ ಕತ್ತರಿಸಿದ ಟೋಮೇಟೋ ವನ್ನು ಹಾಕಿ. ಎರಡು ನಿಮಿಷ ಕೈ ಆಡಿಸಿ. ನಂತರ ತಣ್ಣಗಾದ ಅನ್ನ+ಹಸಿ ಬಟಾಣಿ+ರಾಜಮಾ ಮಿಕ್ಸ್ಚರ್ ಬೆರೆಸಿ. ರುಚಿ ನೋಡಿ ಉಪ್ಪು ಬೆರೆಸಿ ಯಾಕಂದ್ರೆ ಅಕ್ಕಿ ಬೇಯುವಾಗಲೆ ಉಪ್ಪು ಹಾಕಿದೇವಲ್ವಾ? 10 ನಿಮಿಷ ಮುಚ್ಚಳ ಹಾಕಿ ಬೇಯಿಸಿ...flavored ರಾಜ್ಮಾ rice ರೆಡಿ.
ನಿಹಾಳ ಕಾಲೆಜ್ ನಲ್ಲಿ ಮತ್ತು ಅಕ್ಕ ನ ಕಲೀಗ್ಸ್ ರಲ್ಲಿ ಇದು ತುಂಬ hit ಆಗಿದೆ! ಮಾಲವಿಕ ಅವಳು ಕೆಲಸ ಮಾಡುವಲ್ಲಿ ಮೈಕ್ರೋವೇವ್ ನಲ್ಲಿ ಬಿಸಿ ಮಾಡಿ ಒಂದು ಮೊಸರು packet ಕೊಂಡುಕೊಂಡು ರಾಜ್ಮಾ ರೈಸ್ ಜತೆ ತಿಂದಳಂತೆ, ನಿಹಾ ಹಾಗೇ ತಣ್ಣಗೆ...
ಬಿಸಿ or cold... tastes good!
enjoy
P.S: ರಾಜ್ಮಾ ಇಲ್ಲದಿದ್ದರೆ ಹಸಿ ಲೈಮಾ ಬೀನ್ ಅಥವ ಅವರೆಕಾಳು (ಸೀಸನ್ ನಲ್ಲಿ) ಬಳಸಿ ಇದೇ ರೀತಿ ರೈಸ್ ಮಾಡಬಹುದು. ಅಪರೂಪಕ್ಕೆ ನಾನು ಸೊಯ್ (Soya) nuggets ಕೂಡ ಹಾಕುತ್ತೇನೆ.
photo : Niharika

No comments: