ಬೆಂಗಳೂರಿನಲ್ಲಿ ಮಳೆ and ಚಳಿ. ವೀಕ್ ಎಂಡ್ ಗೆ ಬಿಸಿ ಬಿಸಿ ಕಟ್ಲೆಟ್ ಮಾಡಿ, ನಮ್ಮ ಹಾಗೆ ಕಂಪ್ಯೂಟರ್ ಮುಂದೆ ಫಿಲ್ಮ್ ನೋಡ್ತಾ ತಿನ್ನಿ
ಬೇಕಾಗುವ ಪದಾರ್ಥ
ನಾಲ್ಕು ಬೇಯಿಸಿದ ಆಲೂಗಡ್ಡೆ, ಬೇಯಿಸಿದ ಕ್ಯಾರೆಟ್ ಮತ್ತು ಬಟಾಣಿ
ನೀರುಳ್ಳಿ, ಬೆಳ್ಳುಳ್ಳಿ, ಎರಡು ಬ್ರೆಡ್ ಸ್ಲೈಸ್, ಬ್ರೆಡ್ ಕ್ರಂಬ್ಸ್
ಆಲೂಗಡ್ಡೆಯಸಿಪ್ಪೆ ತೆಗೆದು ಮ್ಯಾಶ್ ಮಾಡಿ ಇದಕ್ಕೆ ಬೇಯಿಸಿದ ಬಟಾಣಿ ಕ್ಯಾರೆಟ್ ಮಿಕ್ಸ್ ಮಾಡಿ. ಎರಡು ಬ್ರೆಡ್ ಸ್ಲೈಸ್ ಅನ್ನು ನೀರಲ್ಲಿ ಅದ್ದಿ ಗಟ್ಟಿಯಾಗಿ ಹಿಂಡಿ ಆಲೂಗಡ್ಡೆ ಮಿಶ್ರಣಕ್ಕೆ ಬೆರೆಸಿ
ಎಣ್ಣೆ ಬಿಸಿ ಮಾಡಿ ಸ್ವಲ್ಪ ಜೀರಿಗೆ, ಸಣ್ಣಕ್ಕೆ ಕತ್ತರಿಸಿದ ನೀರುಳ್ಳಿ+ ಬೆಳ್ಳುಳ್ಳು ಹಾಕಿ ನೀರುಳ್ಳಿ ಕಂದು ಬಣ್ಣ ಬರುವ ತನಕ ಕೈಯಾಡಿಸಿ. ಇದಕ್ಕೆ ಸ್ವಲ್ಪ ಅರಿಶಿನ ಪುಡಿ, ಮೆಣಸಿನ ಪುಡಿ, ಗರಂ ಮಾಸಲೆ ಪುಡಿ ಬೆರೆಸಿ. ಒಲೆಯಿಂದ ಕೆಳಗಿಳಿಸಿ. ತಣ್ಣಗಾದ ಮೇಲೆ ಆಲೂಗಡ್ಡೆ ಮಿಶ್ರಣಕ್ಕೆ ಬೆರೆಸಿ. ರುಚಿಗೆ ಉಪ್ಪು ಬೆರೆಸಿ. ಚೆನ್ನಾಗಿ ಮಿಕ್ಸ್ ಮಾಡಿಡಿ.
ಮಿಶ್ರಣದ ಚಿಕ್ಕ ಚಿಕ್ಕ ಉಂಡೆ ಮಾಡಿ ಅದನ್ನು ಚಪ್ಪಟೆ ಮಾಡಿ, ಬ್ರೆಡ್ ಕ್ರಂಬ್ಸ್ ನಲ್ಲಿ ಮುಳುಗಿಸಿ ಕಾವಲಿ ಮೇಲೆ ಕೆಂಪಾಗುವ crisp ಆಗುವ ತನಕ ಎರಡೂ ಬದಿ ಎಣ್ಣೆ ಹಾಕಿ ಶ್ಯಾಲೋ ಫ್ರೈ ಮಾಡಿ. ಟೊಮ್ಯಾಟೋ ಸಾಸ್ ಜತೆ ಸರ್ವ್ ಮಾಡಿ.

ಟಿಪ್ಸ್: ಬ್ರೆಡ್ ಕ್ರಂಬ್ಸ್ ಹೊರಗಡೆ ಲಭ್ಯ. ಇಲ್ಲದ್ದಿದ್ದಲ್ಲಿ ಮೈಕ್ರೋವೇವ್ ನಲ್ಲಿ ಬ್ರೆಡ್ ಅನ್ನು ಬಿಸಿ ಮಾಡಿ, ತಣ್ಣಗಾದ ಮೇಲೆ ಮಿಕ್ಸಿಯಲ್ಲಿ ಹಾಕಿ ಪುಡಿಮಾಡಿಕೊಳ್ಳಿ. ಮೈಕ್ರೋವೇವ್ ಇಲ್ಲದಿದ್ದರೆ ಕಾವಲಿ ಮೇಲಿಟ್ಟು ಅದನ್ನು ನಿಮ್ಮ ಗ್ಯಾಸ್ ಶೆಗಡಿಯ ಕೆಳಗಿಡಿ. ನಿಮ್ಮ ಅಡಿಗೆಯೆಲ್ಲ ಮುಗಿಯುವ ತನಕ ಅದು ಕಟಕ್ ಆಗಿರುತ್ತದೆ ಆಮೇಲೆ ಮಿಕ್ಸಿಯಲ್ಲಿ ಹಾಕಿ. ಇನ್ನೊಂದು ಆಪ್ಷನ್ ಕಾವಲಿಯ ಮೇಲೆ ಸಣ್ಣ ಉರಿಯಲ್ಲಿಡಿ ಬ್ರೆಡ್ ಗಟ್ಟಿಯಾದೊಡನೆ ತೆಗೆದು ಆರಲು ಬಿಡಿ. ಆಮೇಲೆ ಮಿಕ್ಸಿಯಲ್ಲಿ ಹಾಕಿ ಪೌಡರ್ ಮಾಡಿಡಿ.
ಅಥವಾ
ನಾನು ಇವತ್ತು ಬೇಕರಿಯಿಂದ ಟೋಸ್ಟ್ ತಂದು ಅದನ್ನು ಮಿಕ್ಸಿಯಲ್ಲಿ ಹಾಕಿ ಕ್ರಂಬ್ಸ್ ಮಾಡಿಕೊಂಡಿದ್ದೇನೆ
ಆಲೂಗಡ್ಡೆ ಮಿಶ್ರಣವನ್ನು ಫ್ರಿಜ್ ನಲ್ಲಿ ಎರಡು ಮೂರು ದಿನ ಇಡಬಹುದು. ಸಡನ್ ಆಗಿ ಫ್ರೆಂಡ್ಸ್ ಬಂದರೆ ಮಾಡಿಕೊಡಬಹುದು.
ಫೋಟೊಗೋಸ್ಕರ ಮಾತ್ರ ಮೇಲಿನ ಮೂರು ಕಟ್ ಲೆಟ್ ರೆಡಿ ಮಾಡಿದ್ದೇನೆ. ಉಳಿದದ್ದನ್ನು ಆಮೇಲೆ Land and Freedom ಸಿನಿಮಾ ನೋಡ್ತಾ ತಿನ್ನೋದು. ಹೊರಗಡೆ ಕಪ್ಪು ಮೋಡಗಳು.ಹಾಗಾಗಿ ಹೊರಗೆ ಎಲ್ಲೂ ಹೋಗುವ ಕಾರ್ಯಕ್ರಮ ಇಲ್ಲ. heavy rains will add charm to our cut let eating programme. rain or otherwise our eating prog is fixed. ನೀವು ಇವತ್ತು ಟ್ರೈ ಮಾಡಬಹುದು ಅಥವಾ ನೆಕ್ಸ್ಟ್ ವೀಕ್...ಎಂಜಾಯ್...
No comments:
Post a Comment