ಸ್ಟಫ್ಡ್ ಬೆಂಡೆಕಾಯಿ recipe . ಬೆಂಡೆಕಾಯಿ APMC yard ಮಾರುಕಟ್ಟೆಯಿಂದ :-)
300 ಗ್ರಾಂ ಎಳೆ (tender) ಬೆಂಡೆಕಾಯಿ
3 ಟೇಬಲ್/ ದೊಡ್ಡ ಚಮಚ ಕೊತ್ತಂಬರಿ ಬೀಜದ ಪುಡಿ
2 ಟೀ ಚಮಚ ಜೀರಿಗೆ ಪುಡಿ
1 ಅಥವ 11/2 ಚಮಚ ಕೆಂಪು ಮೆಣಸಿನ ಪುಡಿ
ಅರ್ಧ ಟೀ ಸ್ಪೂನ್ ಗರಂ ಮಸಾಲೆ ಪುಡಿ
ಸ್ವಲ್ಪ ಪುಡಿ, ಹಿಂಗು, ಉಪ್ಪು, ಚಿಟಿಕೆ ಸಕ್ಕರೆ, ಮಾವಿನಕಾಯಿ ಪುಡಿ (ಅಂಗಡಿಯಲ್ಲಿ ಆಮ್ ಚೂರ್ powder ಅಂತ ಸಿಗುತ್ತೆ) ಅಥವ ಇದರ ಬದಲಿಗೆ ಹುಣಸೆ ಹಣ್ಣಿನ ಪೇಸ್ಟ್ ಅಥವ ರಸ ಅಥವ ನಿಂಬೆ ರಸ ಕೂಡ ಹಾಕಬಹುದು) ಎಲ್ಲವನ್ನೂ ಚೆನ್ನಾಗಿ ಮಿಕ್ಸ್ ಮಾಡಿ ಇಡಿ
ಸ್ವಲ್ಪ ಎಣ್ಣೆ, ಒಗ್ಗರಣೆಗೆ ಜೀರಿಗೆ
ಸ್ವಲ್ಪ ಎಣ್ಣೆ, ಒಗ್ಗರಣೆಗೆ ಜೀರಿಗೆ
ಬೆಂಡೆಕಾಯಿಗಳನ್ನು ಚೆನ್ನಾಗಿ ತೊಳೆದು, ಒರೆಸಿ, ಬುಡವನ್ನು ಕತ್ತರಿಸಿ ಉದ್ದಕ್ಕೆ ಕಟ್ ಮಾಡಿ ಹೀಗೆ. ಈಗಂತು ಕಣ್ಣು ಮುಚ್ಚಿ ಬೆಂಡೆಕಾಯಿಯನ್ನು ಕಟ್ ಮಾಡಬಹುದು. ಮೊದಲೆಲ್ಲ ಹುಳು ಇರುತ್ತೋ ಅಂತ ತುಂಬ ಪರೀಕ್ಷಿಸಬೇಕಿತ್ತು. ತರಕಾರಿಗಳಿಗೆ ಎಷ್ಟು ಔಷಧಿ ಸಿಂಪಡಿಸುತ್ತಾರೆಂದರೆ , ತರಕಾರಿ ಏನು ,ಏಳು ಜನ್ಮಕ್ಕೆ ನಮ್ಮ ಹೊಟ್ಟೆಯಲ್ಲಿ ಹೂಳ ಆಗಲಿಕ್ಕಿಲ್ಲ ಬಿಡಿ.
ಹೀಗೆ ಉದ್ದಕ್ಕೆ ಸೀಳಿ
ಮಸಾಲೆ ಪುಡಿಗಳ ಮಿಶ್ರಣ
ಹೀಗೆ ತುಂಬಿಸಿ
ಸ್ವಲ್ಪ ಅಗಲ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಜೀರಿಗೆ ಒಗ್ಗರಣೆ ಕೊಟ್ಟು, ಅದರಲ್ಲಿ ತುಂಬಿಸಿದ ಬೆಂಡೆಕಾಯಿಗಳನ್ನು ಒಂದರ ಪಕ್ಕ ಒಂದು ಇಡಿ. ಮಸಾಲೆ ಪುಡಿ ಏನಾದರು ಉಳಿದರೆ ಅದನ್ನು ಬೆಂಡೆಕಾಯಿ ಮೇಲೆ ಹಾಕಿ ಬಿಟ್ಟು, ಬಾವಡಿಯಿಂದ ಮುಚ್ಚಿ. (ಚಪಾತಿ ಕಾವಲಿ ಮೇಲೆ ಕೂಡ ಇದನ್ನು ಬೇಯಿಸಬಹುದು) 5 ನಿಮಿಷ ಬಿಟ್ಟು ಬೆಂಡೆಕಾಯಿಗಳನ್ನು ಕೈಯಾಡಿಸಿ. 15 ನಿಮಿಷದಲ್ಲಿ ರೆಡಿ. ನೀರುಳ್ಳಿ ಬೆಳ್ಳುಳ್ಳಿ ಹಾಕದೆ, ನಾವು ಹೆಚ್ಚಾಗಿ ಇದನ್ನು ಶ್ರಾವಣ ಮಾಸದಲ್ಲಿ ಮಾಡುತ್ತೇವೆ. ಶ್ರಾವಣದಲ್ಲಿ ಕೆಲವರು ನೀರುಳ್ಳಿ ಬೆಳ್ಳುಳ್ಳಿ ತಿನ್ನಲ್ಲ.
Stuffed Ladies finger ready
No comments:
Post a Comment