1/2 ಕಪ್ ಹೆಸರು ಬೇಳೆ
1 ಕಪ್ ಅಕ್ಕಿ
11/2 ಕಪ್ ಸಕ್ಕರೆ
1/2 ತೆಂಗಿನ ಕಾಯಿ ತುರಿ
3 ಏಲಕ್ಕಿ, 2 ಚ. ತುಪ್ಪ
ಅಲಂಕರಿಸಲು ತುಪ್ಪದಲ್ಲಿ ಹುರಿದ ಗೋಡಂಬಿ, ಚಕ್ರಾಕಾರದಲ್ಲಿ ಕಟ್ ಮಾಡಿದ ಬಾಳೆ ಹಣ್ಣಿನ pieces
ಹೆಸರು ಬೇಳೆಯನ್ನು ನಸು ಕಂದು ಬಣ್ಣ (ಪರಿಮಳ)ಬರುವ ತನಕ ಬಾಣಲೆಯಲ್ಲಿ ಹುರಿಯಿರಿ. ತಣ್ಣಗಾದ ಮೇಲೆ ಅಕ್ಕಿಯೊಂದಿಗೆ ತೊಳೆದು, 3 ಕಪ್ ನೀರು ಹಾಕಿ ಕುಕ್ಕರ್ ನಲ್ಲಿ ಬೇಯಿಸಿ.
ಕುಕ್ಕರ್ ತಣ್ಣಗಾದ ಮೇಲೆ, ಬೆಂದ ಅನ್ನ ಹಾಗೂ ಹೆಸರು ಬೇಳೆಯನ್ನು ಸಕ್ಕರೆ ಮತ್ತು ತೆಂಗಿನಕಾಯಿ ತುರಿಯೊಂದಿಗೆ ಬೆರೆಸಿ ಸಣ್ಣ ಉರಿ ಮೇಲಿಡಿ. ಗಟ್ಟಿಯಾಗುತ್ತ ಬಂದಂತೆ ಏಲಕ್ಕಿ ಪುಡಿ ಬೆರೆಸಿ. ತುಪ್ಪ ಹಚ್ಚಿದ ತಾಟಿಗೆ ವರ್ಗಾಯಿಸಿ ಸಟ್ಟುಗ(spatula)ದಿಂದ ಸಮಾನವಾಗಿ spread ಮಾಡಿ. ಸ್ವಲ್ಪ ತಣಿದ ಮೇಲೆ ಚೌಕಾಕಾರ ಅಥವ diamond ಆಕಾರದಲ್ಲಿ ಕತ್ತರಿಸಿ, ಬಾಳೆಹಣ್ಣು ಹಾಗೂ ಗೋಡಂಬಿಯೊಂದಿಗೆ ಅಲಂಕರಿಸಿ.(ಚಿತ್ರದಲ್ಲಿದ್ದ ಹಾಗೆ)
for pongal made with Jaggery : ಬೆಲ್ಲದ ಪೊಂಗಲ್ ಮಾಡಲು click on the link below
No comments:
Post a Comment