Tuesday, October 22, 2013

ಬ್ರೆಡ್ ಪುಲಾವ್/ಉಸ್ಲಿ


ಒಂದು ಪೌಂಡ್ ಸಾಲ್ಟ ಬ್ರೆಡ್,ಉಪ್ಪು ಹಾಕಿ ಬೇಯಿಸಿಟ್ಟ ಹಸಿ ಬಟಾಣಿ  ಎಣ್ಣೆ, ಸಾಸಿವೆ, ಕರಿಬೇವು, ಹಸಿ ಮೆಣಸಿನಕಾಯಿ, ಅರಿಸಿನ ಪುಡಿ, ಬೆಳ್ಳುಳ್ಳಿ, ನೀರುಳ್ಳಿ, ಕೊತ್ತಂಬರಿ ಸೊಪ್ಪು, ಜೀರಿಗೆ, ಉಪ್ಪು, ಚಿಟಿಕೆ ಸಕ್ಕರೆ.
ಬ್ರೆಡ್ ನ್ನು ಚಿತ್ರದಲ್ಲಿರುವಂತೆ ಚೂರುಮಾಡಿಡಿ.
ಒಂದು ಹಿಡಿ ಕೊತ್ತಂಬರಿ  ಸೊಪ್ಪು, 3/4 ಹಸಿ ಮೆಣಸಿನಕಾಯಿ,ಚಿಕ್ಕ ತುಂಡು ಶುಂಠಿ, 4 ಬೆಳ್ಳುಳ್ಳಿ ಮಿಕ್ಸಿಗೆ ಹಾಕು ತರಿತರಿಯಾಗಿ ರುಬ್ಬಿಡಿ
ಎಣ್ಣೆ ಅಥವ ತುಪ್ಪ ಬಿಸಿ ಮಾಡಿ ಒಗ್ಗರಣೆಗೆ ಸಾಸಿವೆ, ಕರಿಬೇವು, ಜೀರಿಗೆ ಹಾಗಿ. ನಂತರ ನೀರುಳ್ಳಿಯನ್ನು ಹಾಕಿ ಕೆಂಪಗೆ ಹುರಿಯಿರಿ. ಇದಕ್ಕೆ ರುಬ್ಬಿದ ಪದಾರ್ಥ ಬೆರೆಸಿ ಎರಡು ನಿಮಿಶ ಕೈಯಾಡಿಸಿ. ಇದಕ್ಕೆ ಬೇಯಿಸಿದ ಬಟಾಣಿ. ಅರಸಿನ ಪುಡಿ ಉಪ್ಪು ಸಕ್ಕರೆ ಬೆರೆಸಿ. ಇನ್ನೂ ಒಂದು ನಿಮಿಷ ಕೈಯಾಡಿಸಿ ಬ್ರೆಡ್ ಚೂರುಗಳನ್ನು ಬೆರೆಸಿ ಬೇಗ ಬೇಗ ಕೈಯಾಡಿಸಿ..(ಮಸಾಲೆ ಎಲ್ಲ ಬ್ರೆಡ್ ಚೂರುಗಳಿಗೂ ತಗುಲಬೇಕು). 3 ನಿಮಿಷ  ಬಾವಡೆಯಿಂದ ಮುಚ್ಚಿಡಿ. ಬಿಸಿ ಬಿಸಿ ಬ್ರೆಡ್ ಪಲಾವ್ ರೆಡ್ಡಿ.. ಮಾಲು ನಿಹಾ ರ ಫೇವರಿಟ್ ಲಂಚ್ ಬಾಕ್ಸ್ ಐಟಮ್...also because it is non messy...
ನಿಹಾರಿಕಾಳ ಕಾಲೇಜ್ ಮೇಟ್ ಗಳಿಗೆ ಇಷ್ಟ ನಾನು ಮಾಡುವ ಬ್ರೆಡ್ ಪಲಾವ್/ಬ್ರೆಡ್ ಉಸ್ಲೀ. ಅವರು ಹೇಳಿ ಕಳಿಸಿದ್ದಾಗೆಲ್ಲ ನಾನು ಮಾಡಿ ಕೊಡ್ತೀನಿ..:-)malathi the eternal mother..


ನೀರುಳ್ಳಿ ಬೆಳ್ಳುಳ್ಳಿ ಹಾಕದೇ ಕೂಡ ಮಾಡಬಹುದು. ಆಗ ಅದರ ಮೇಲೆ ತಾಜಾ ಹೆರೆದ ತೆಂಗಿನ ಕಾಯಿ ತುರಿ ,ಸಣ್ಣಕ್ಕೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಸಿಂಪಡಿಸಿ, ಒಂದು ನಿಂಬೆ ಹಣ್ಣಿನ ರಸ ಕೂಡ ಸೇರಿಸಬಹುದು.
watch this space for bread ಬೋಂಡಾ :-))
:-)

No comments: