ಬೇಕಾಗುವ ಸಾಮಾನು:
ಅಕ್ಕಿ ಹಿಟ್ಟು, ಮೈದಾ ಹಿಟ್ಟು, ನೀರು, ಉಪ್ಪು, ಸ್ವಲ್ಪ ಎಣ್ಣೆ
ಮೊದಲಿಗೆ ಮೈದಾಗೆ ನೀರು ಹಾಗಿ ಮೆತ್ತಗಿನ ಕಣಕ ತಯಾರಿಸಿಕೊಳ್ಳಿ.
ಒಂದು ಗ್ಲಾಸ್ ನೀರನ್ನು ದಪ್ಪ ತಳೆಯ ಬಾಣಲೆಯಲ್ಲಿ ಬಿಸಿಮಾಡಲು ಇಡಿ. ಇದಕ್ಕೆ ಚಿತಿಕೆ ಉಪ್ಪು ಹಾಗೂ 1/2ಟಿಸ್ಪೂನ್ ಎಣ್ಣೆ ಹಾಕಿ. ನೀರು ಮರಳಲು ಶುರು ಆದಾಗ ಅದಕ್ಕೆ ಮೂರು ಗ್ಲಾಸ್ ಅಕ್ಕಿ ಹಿಟ್ಟು ಬೆರೆಸಿ ಬೇಗ ಬೇಗ ಸಟ್ಟುಗದಿಂದ ಕೈಯಾಡಿಸಿ. ತಣಿದ ಮೇಲೆ ಅದನ್ನು ಚಪಾತಿ ಹಿಟ್ಟಿನಂತೆ ನಾದಿ ಕೊಳ್ಳಿ. ಮೈದಾ ಹಿಟ್ಟನ್ನು ಚಿಕ್ಕ ಚಪಾತಿ ಗಾತ್ರದಲ್ಲಿ ಲಟ್ಟಿಸಿ ಅದರಲ್ಲಿ ಅಕ್ಕಿ ಹಿಟ್ಟಿನ ಒಂದು round ನ್ನ ಇಡಿ.
ಈಗ ಎರಡನ್ನು ಸೇರಿಸಿ ಪುನ: ಉಂಡೆ ಮಾಡಿ,
ಸಾಧರಣ ಗಾತ್ರ ಚಪಾತಿ ಆಕಾರದಲ್ಲಿ ಲಟ್ಟಿಸಿ.
ಬಿಸಿ ಕಾವಲಿಯಲ್ಲಿ ಎಣ್ಣೆ ಹಾಕದೆ ಒಂದು ಬಟ್ಟೆ ಯಿಂದ ಒತ್ತಿ ಒತ್ತಿ ಉಬ್ಬಿಸಿ. ಬಿಳಿ ಹೋಳಿಗೆ ರೆಡಿ. ಇದಕ್ಕೆ ಯಾವುದಾದರೂ ಸೈಡ್ ಡಿಶ್ ನಡೆಯುತ್ತೆ. ನಾನು ಬೆಳ್ಳುಳ್ಳಿ ಚಟ್ನಿ ಮತ್ತು ಮೆಥಿ ದಾಲ ಮಾಡಿದೆ. ಬಿಸಿ ಹೋಳಿಗೆ ಮೇಲೆ ತಾಜ ಬೆಣ್ಣೆ ಕೂಡ ಸವರಬಹುದು.
with Methi daal and Garlic chutney as side dish
ಟ್ರಾವೆಲ್ ಮಾಡುವಾಗ/ಪಿಕ್ ನಿಕ್ ಗೆಲ್ಲ ಒಳ್ಳೆ ಡಿಶ್... soft ಆಗಿರತ್ತೆ ಮತ್ತು filling ಕೂಡ..ಅಂದ್ರೆ ಬೇಗ ಹಸಿವೆಯಾಗಲ್ಲ.ಬಿಳಿ ಹೋಳಿಗೆ ಬಗ್ಗೆ ಹೇಳಿದ್ದು ನನ್ನ ಫೇಸ್ ಬುಕ್ ಸ್ನೇಹಿತೆ ಭಾಗ್ಯಶ್ರೀ... Thank you Bhagya. it was a great hit in our household
No comments:
Post a Comment