Tuesday, October 22, 2013

ಧೊಡ್ಡಕ್

ನಮ್ಮ ಮನೆಯಲ್ಲಿ ಇಡ್ಲಿ ಹಿಟ್ಟು ಸ್ವಲ್ಪ ಜಾಸ್ತಿ ನೆ ಮಾಡಿ ಇಡ್ತೇನೆ.

ಮೊದಲ ದಿನ ಇಡ್ಲಿ ಪಾತ್ರೆ ಯಲ್ಲಿ conservative ಇಡ್ಲಿ. ಹಿಂಗಿನ ಚಟ್ನಿ ಮತ್ತು  ಸಾಂಬಾರ್. 

ಎರಡನೆ ದಿನ ಅದರ ಹೆಸರು ಇಡ್ಲಿ part -2 ಬಾಳೆ ಎಲೆಯಲ್ಲಿ ಹಿಟ್ಟು ಹಾಕಿ ಬೇಯಿಸುವುದು. ಕೊಂಕಣಿಯಲ್ಲಿ ರಮ್ದಣ್ ಅನ್ತೇವೆ. ಇದನ್ನು ಖಾರ ಖಾರ ಕೆಂಪು ಮೆಣಸು ಶುಂಠಿ ಚಟ್ನಿ...:-) ಟೈಪ್ ಮಾಡಬೇಕಾದ್ರೆ ಬಾಯಲ್ಲಿ ನೀರೂರ್ತಾ ಇದೆ. 

ಮೂರನೆ ದಿನ part-3 ನಲ್ಲಿ ದೊಡ್ಡಕ್ . ದೊಡ್ಡಕ್ ಅಂದ್ರೆ nothing but ದಪ್ಪ ದೋಸೆ.ಮೊದಲಿಗೆ ಇಡ್ಲಿ ಹಿಟ್ಟಿಗೆ ಶುಂಠಿ+ ಹಸಿ ಮೆಣಸಿನಕಾಯಿ ಪೇಸ್ಟ್ ಬೆರೆಸಿ.  ಬಾಣಲೆಯಲ್ಲಿ ಎಣ್ಣೆ ಹಾಕಿ ಅದಕ್ಕೆ ಉದ್ದಿನ ಬೇಳೆ, ಸಾಸಿವೆ, ಕರಿಬೇವು, ಕೆಂಪು ಮೆಣಸು, ಮೆಂತೆ ಹಾಕಿ ಒಗ್ಗರಣೆ ಕೊಡುವುದು ಅದರಲ್ಲಿ 5-6- ಸೌಟು (ಸೌಟು and ಸಟ್ಟುಗ words taught to me by ಮೇಲಿನ ಮನೆ ಪುಟ್ಟು ದಿಶಾಂತ್) ಇಡ್ಲಿ ಹಿಟ್ಟು ಹಾಕಿ, ಬಾವಡಿಯಿಂದ ಮುಚ್ಚಿ, ಎರಡು ಬದಿ ಕೆಂಪಾಗುವವರೆಗೆ ಬೇಯಿಸುವುದು. fresh ಬೆಣ್ಣೆಯೊಂದಿಗೆ ಗುಳುಂ ಮಾಡುವುದು :-))
ಹಾಂ ಪೇಟೆ ಯಲ್ಲಿ ಸಿಗುವ ಇಡ್ಲಿ ಹಿಟ್ಟಿಂದ ದೊಡ್ಡಕ್ ಮಾಡಿದ್ರೆ ಚೆನ್ನಾಗಿರಲ್ಲ..ಮನೆಯಲ್ಲೇ ಮಾಡಿ... ನನ್ನ ಇಡ್ಲಿ ಹಿಟ್ಟಿನ ಅಳತೆ ಒಂದು ಕಪ್ ಉದ್ದಿನಬೇಳೆ ಗೆ ಎರಡು ಕಪ್ ಬೆಳ್ತಿಗೆ ಅಕ್ಕಿ...ಕೆಂಪಕ್ಕಿ ಇದ್ರೆ ಇನ್ನೂ ಸೂಪರ್..in terms of.taste as well as texture...ಈ ದೊಡ್ಡಕ್ ಗೆ ಮಾಲವಿಕ ಇಟ್ಟ ಹೆಸರು the great Indian Konkani Pizza...ಬಿಸಿ ಬಿಸಿ ಇದ್ದಾಗಲೆ ಸ್ವಾಹಾ ಮಾಡಬೇಕು
ನಿಹಾಗೆ ಈಗ ಹೊಸ ಕ್ಯಾಮೆರ ಸಿಕ್ಕಿದೆ Nikon...ಅವಳದ್ದೆ ಕ್ಲಿಕ್


The flip side of thedoddak
:-)

No comments: