ವೈಕುಂಠ ಏಕಾದಶಿ ಪ್ರಯುಕ್ತ ಒಂದು recipe
ಸರಿ ಇವತ್ತು ವೈಕುಂಠ ಏಕಾದಶಿ. ನಾವು ನೀರುಳ್ಳಿ ಬೆಳ್ಳುಳ್ಳಿ ಬಳಸಲ್ಲ (ಇದನ್ನೆ ಸುಮಾರು ಪೋಸ್ಟ್ ಗಳಲ್ಲಿ ಬರೆದಿದ್ದೇನೆ). ಮಾಲವಿಕ ’ಅಮ್ಮ, ಇವತ್ತು ರಜೆ (ಕೆಲಸಕ್ಕೆ) ಏನಾದರೂ ಸ್ಪೇಷಲ್ ಮಾಡು ಅಂದಾಗ, ಅದನ್ನೆ ಚಾಲೆಂಜ್ ಆಗಿಟ್ಟುಕೊಂಡು ಈ ರೈಸ್ ಐಟಮ್ ಪ್ರಾಯೋಗಿಕವಾಗಿ ಮಾಡಿದ್ದೇನೆ.
ಬೇಕಾಗುವ ಪದಾರ್ಥ:
ಪರಿಮಳದ ಅಕ್ಕಿ (ನಾನು ಬಾಸುಮತಿ ಅಕ್ಕಿಯನ್ನು ಬೆಳಗಾವಿಯಿಂದ ಹೊತ್ತು ತರುವುದು. ಅಲ್ಲಿನ ಸಂತೆಯಲ್ಲಿ ಲೋಕಲ್ ಬಾಸುಮತಿ ಅಂತ ಸಿಗುತ್ತೆ. 38 ರೂ/ಕೆ.ಜಿ (:-))
ಮಿಶ್ರ ತರಕಾರಿ ಒಂದು ಕಪ್ (ಕ್ಯಾರೆಟ್, ಬಟಾಣಿ (ಈಗ ಹೇಗೂ ಸೀಸನ್) ಕಾಲಿಫ್ಲವರ್, ಬೀನ್ಸ್) ಮೊದಲೆ ಬೇಯಿಸಿಡಿ
5 ಹಸಿಮೆಣಸಿನಕಾಯಿ, ಒಂದು ಇಂಚ್ ಶುಂಠಿ- ನೀರು ಹಾಕದೆ ಮಿಕ್ಸಿಯಲ್ಲಿ ರುಬ್ಬಿ
ಎಣ್ಣೆ ಅಥವಾ ತುಪ್ಪ ಒಂದು ದೊಡ್ಡ ಟೇಬಲ್ ಸ್ಪೂನ್ ಬಿಸಿ ಮಾ,ಡಿ ದಾಲ್ಚಿನಿ ಎಲೆ ಎರಡನ್ನು ಹಾಕಿ, ಅಮೇಲೆ ಒಂದು ಸ್ಪೂನ್ ಜೀರಿಗೆ, ನಾಲಕೈದು ಕರಿಬೇವಿನ ಎಲೆ ಹಾಕಿ. ಇದಕ್ಕೆ ಹಸಿಮೆಣಸಿನಕಾಯಿ-ಶುಂಠಿ ಪೇಸ್ಟ್ ಬೆರೆಸಿ. ಹಸಿ ವಾಸನೆ ಹೋಗುವವರೆಗೆ ಕೈಯಾಡಿಸಿ, ಅರಿಸಿನಪುಡಿ ಬೆರೆಸಿ, ಅರೆ ನಿಮಿಷ ಬಿಟ್ಟು ಬೇಯಿಸಿದ ಅನ್ನ-ತರಕಾರಿ ಮಿಶ್ರಣ ಬೆರೆಸಿ, ಉಪ್ಪು, ಚಿಟಿಕೆ ಸಕ್ಕರೆ ಬೆರೆಸಿ. ಬಡಿಸುವ ಮುಂಚೆ ಸಣ್ಣ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ತಾಜಾ ತೆಂಗಿನ ಕಾಯಿಯ ತುರಿ ಬೆರೆಸಿ. ಲಿಂಬೆ ಹುಳಿ ಬೆರೆಸ ಬಹುದು ಅಥವಾ ಮೊಸರಿನೊಟ್ಟಿಗೆ ತಿನ್ನಬಹುದು.
No comments:
Post a Comment