Tuesday, October 22, 2013

ಆಲೂ ಪೋಹಾ (ಬಟಾಟಾ ಅವಲಕ್ಕಿ/ಆಲುಗಡ್ಡೆ ಅವಲಕ್ಕಿ)

ಆಲು ಪೋಹ


ಅಲೂ ಪೋಹಾ (ಉಹಾಪೋಹ ಅಲ್ಲಾ)


ಬೇಕಾಗುವ ಪದಾರ್ಥಗಳು:


ದಪ್ಪ ಅವಲಕ್ಕಿ 2 1/2 ಕಪ್ (ಎರಡುವರೆ ಕಪ್)

1 ನೀರುಳ್ಳಿ ದೊಡ್ಡದು, ಸಣ್ಣಗೆ ಕತ್ತರಿಸಿ

ಆಲೂಗಡ್ಡೆ- ಬೇಯಿಸಿದ್ದು ಹದಗಾತ್ರದ್ದು, ಸಣ್ಣಗೆ ಕತ್ತರಿಸಿ

ಒಗ್ಗರಣೆ - ಎಣ್ಣೆ, ಉದ್ದಿನ ಬೇಳೆ, ಸಾಸಿವೆ, ಕರಿಬೇವು, ಹಸಿಮೆಣಸು, ಅರಿಸಿನ ಪುಡಿ

ರುಚಿಗೆ - ಉಪ್ಪು, ಸಕ್ಕರೆ, ನಿಂಬೆ ರಸ, ಕೊತ್ತಂಬರಿ ಸೊಪ್ಪು, fresh grated coconut (optional)


ಮಾಡುವ ವಿಧಾನ


ಅವಲಕ್ಕಿಯನ್ನು ಮೆತ್ತಗಾಗುವ ತನಕ ಅಂದರೆ ಸಾಧಾರಣ ೧೦ ನಿಮಿಷ ನೀರಲ್ಲಿ ನೆನೆಸಿಡಿ. ಆಮೇಲೆ ನೀರು ಬಸಿದಿಡಿ. ಬೆಂದ ಆಲೂಗಡ್ಡೆ ಸಣ್ಣ ತುಂಡುಗಳನ್ನಾಗಿ ಕತ್ತರಿಸಿ ಸ್ವಲ್ಪ ಉಪ್ಪು ಚಿಮುಕಿಸಿಡಿ. ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಉದ್ದಿನ ಬೇಳೆ, ಸಾಸಿವೆ, ಕರಿಬೇವಿನ ಒಗ್ಗರಣೆಗಿಡಿ. ಹಸಿಮೆಣಸಿನಕಾಯಿಯನ್ನು ಹಾಕಿ ಕೈಯಾಡಿಸಿ. ನಂತರ ನೀರುಳ್ಳಿ ಹಾಕಿ ಕೆಂಪಾಗುವ ತನಕ ಫ್ರೈ ಮಾಡಿ. ಇದಕ್ಕೆ ಅರಿಸಿನ ಪುಡಿ, ಬೇಯಿಸಿದ ಆಲೂಗಡ್ಡೆಯ ತುಂಡುಗಳನ್ನು ಹಾಕಿ, ಸ್ವಲ್ಪ ಹೊತ್ತು ಮುಚ್ಚಿಡಿ. ಆ ಬಳಿಕ ಬಸಿದಿಟ್ಟ ಅವಲಕ್ಕಿ ಯನ್ನು ಸೇರಿಸಿ ಕೈಯಾಡಿಸಿ, ಉಪ್ಪು ಸ್ವಲ್ಪ ಸಕ್ಕರೆ ಹಾಕಿ ಮುಚ್ಚಿಡಿ. ಬಡಿಸುವ ಮುನ್ನ ಕೊತ್ತಂಬರಿ ಸೊಪ್ಪು ಮತ್ತು ೧/೨ ನಿಂಬೆಯ ರಸ ಬೆರೆಸಿ. ಆಲೂ-ಪೋಹಾ ತೈಯಾರ್. ಇದು ಮಹಾರಾಷ್ಟ್ರದ ರುಚಿಕರವಾದ ತಿಂಡಿ. ಮಳೆಗಾಲದಲ್ಲಿ ಬಿಸಿ ಮೆಣಸಿನಕಾಯಿ ಬೋಂಡಾದ ಸಾತ್ ಇದ್ದರೆ ರುಚಿ ಇನ್ನಷ್ಟು ಹೆಚ್ಚು.
pic: the Net

No comments: