ಟೋಮ್ಯಾಟೋ ಭಾತ remake ಆಗಿ ರವಾ ರೊಟ್ಟಿ
ನಿನ್ನೆ ಮಾಲವಿಕಳಿಗೆ ರಜೆ. ನಾನು ಟೊಮ್ಯಾಟೊ ಭಾತ್ ಮಾಡಿದ್ದೆ. ಡಯಟ್ ನಲ್ಲಿ ಟೊಮ್ಯಾಟೊ ಅಳವಡಿಸಿದರೆ ದೇಹದ ತೂಕ ಕಡಿಮೆಯಾಗುತ್ತದಂತೆ. ಥ್ಯಾಟ್ಸ್ ಕನ್ನಡ ಡಾಟ್ ಕಾಮ್ ನಲ್ಲಿ ಓದಿದ್ದ ನೆನಪು. tomato ಭಾತ ಜಾಸ್ತಿನೆ ಆಗಿತ್ತು. ಆದರೆ ಮಾಲವಿಕ ಳಿಗೆ ಪಾವ್ ಭಾಜಿ ತಿನ್ನಬೇಕನ್ನಿಸಿದ್ದರಿಂದ ಅದನ್ನೂ ಮಾಡಿದೆ. ಬ್ರೇಕ್ ಫಾಸ್ಟ್ ಡಬಲ್ ಧಮಾಕಾ. ಆದರೆ ಟೊಮ್ಯಾಟೊ ಭಾತ್ ಉಳಿದು ಬಿಡ್ತು. ಅದನ್ನು ಫ್ರಿಜ್ ನಲ್ಲಿ ಹಾಕಿಟ್ಟೆ. ಇವತ್ತು ಉಳಿದಿದ್ದ ಭಾತ್ ಗೆ ಮೊಸರು, ಗೋದಿ ಹಿಟ್ಟು, ಸಣ್ಣಕ್ಕೆ ಕತ್ತರಿಸಿದ ನೀರುಳ್ಳಿ ಬೆರೆಸಿ, ಬಾಳೆ ಎಲೆಯಲ್ಲಿ ತಟ್ಟಿ ರೊಟ್ಟಿ ಮಾಡಿದೆ. ಚೆನ್ನಾಗಿತ್ತು ರುಚಿ ಬಿಸಿ ಬಿಸಿ ರೊಟ್ಟಿ ವಿದ್ ಮನೆಯಲ್ಲೇ ಮಾಡಿದ ತುಪ್ಪ.
No comments:
Post a Comment